ಟೋಕಿಯೋ :ಇಂದು ನಡೆದ ಒಲಿಂಪಿಕ್ಸ್​​ ಹಾಕಿ ಪೂಲ್​ ಎ ಕ್ವಾರ್ಟರ್​ ಫೈನಲ್ಸ್​ ಪಂದ್ಯದಲ್ಲಿ ಭಾರತದ ಪುರುಷರ ಹಾಕಿ ತಂಡವು ಜಯ ಗಳಿಸಿ, ಸೆಮಿಫೈನಲ್ಸ್​ ಪ್ರವೇಶಿಸಿದೆ. ಮತ್ತೊಂದೆಡೆ ದೇಶದ ಮಹಿಳಾ ತಂಡ ಕೂಡ ಗೆಲುವು ಸಾಧಿಸಿ ಮುನ್ನಡೆದಿದೆ. ಪುರುಷರ ಹಾಕಿ ತಂಡವು ಜಪಾನ್​ ತಂಡದ ವಿರುದ್ಧ 5-3 ಸ್ಕೋರ್​ನೊಂದಿಗೆ ಜಯ ಸಾಧಿಸಿದರೆ, ಮಹಿಳಾ ಹಾಕಿ ತಂಡವು ಐರ್​ಲೆಂಡಿನ ತಂಡದ ವಿರುದ್ಧ 1-0 ಸ್ಕೋರ್​ನೊಂದಿಗೆ ಜಯ ಸಾಧಿಸಿತು.
ಇತ್ತ ಪಂಜಾಬ್​ನ ಕ್ರೀಡಾ ಸಚಿವ ರಾಣಾ ಗುರ್​ಮೀತ್​ ಸಿಂಗ್ ಸೋಧಿ ಅವರು, ಭಾರತದ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದಲ್ಲಿ, ಭಾಗವಹಿಸುತ್ತಿರುವ ರಾಜ್ಯದ ಹಾಕಿ ಆಟಗಾರರಿಗೆಲ್ಲ ವೈಯಕ್ತಿಕವಾಗಿ 2.25 ಕೋಟಿ ರೂ.ಗಳ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಇತರ ರಾಜ್ಯ ಸರ್ಕಾರಗಳೂ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವ ಆಟಗಾರರಿಗೆ ನಗದು ಬಹುಮಾನಗಳನ್ನು ಘೋಷಿಸಿವೆ.(ಏಜೆನ್ಸೀಸ್)
ಪದಕದತ್ತ ಮತ್ತೊಂದು ಹೆಜ್ಜೆ ಇಟ್ಟ ಸಿಂಧು; ವರ್ಲ್ಡ್​ ನಂ.5 ವಿರುದ್ಧ ಗೆಲುವು

ಭಾರತಕ್ಕೆ ಮತ್ತೊಂದು ಪದಕ ಗ್ಯಾರಂಟಿ! ಬಾಕ್ಸಿಂಗ್​ನಲ್ಲಿ ಸೆಮಿಫೈನಲ್ಸ್ ತಲುಪಿದ ಲವ್ಲೀನಾ ಬೊರ್ಗೊಹೈನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
