ನವದೆಹಲಿ:ಕರೊನಾ ಪಿಡುಗಿನ ಹಿನ್ನೆಲೆಯಲ್ಲಿ ಕೈಗಳನ್ನು ಪದೇಪದೆ ತೊಳೆದುಕೊಂಡು ಸ್ವಚ್ಛಗೊಳಿಸಿಕೊಳ್ಳುವುದು, ಖರೀದಿಸಿದ ತರಕಾರಿ, ಹಣ್ಣುಗಳನ್ನು ಬಿಸಿನೀರಿನಲ್ಲಿ ತೊಳೆದು ಬಳಸುವುದನ್ನು ಮಾಡುತ್ತಿದ್ದೇವೆ. ಯಾವುದೇ ನಂಜುಕಾರಕ ಅಂಶ ಆಹಾರದ ಮೂಲಕ ದೇಹವನ್ನು ಸೇರಬಾರದು ಎಂಬುದು ಈ ಎಚ್ಚರಿಕೆಗೆ ಕಾರಣ.
ಇದರ ಜತೆಗೆ ಹೊರಗೆ ಹೋದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಮಾಸ್ಕ್​ಗಳನ್ನು ಕಡ್ಡಾಯವಾಗಿ ಧರಿಸುತ್ತಿದ್ದೇವೆ. ಆದರೆ, ಮುಂದಿನ ದಿನಗಳಲ್ಲಿ ದವಸಧಾನ್ಯಗಳು, ಕರೆನ್ಸಿ ನೋಟುಗಳು ಮತ್ತಿತರ ವಸ್ತುಗಳ ಮೂಲಕ ಕೋವಿಡ್​ ಸೋಂಕು ಮನೆಯೊಳಗೆ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ. ಆದರೆ, ಸೋಂಕು ತಡೆಗಟ್ಟುವ ಸಲುವಾಗಿ ದವಸಧಾನ್ಯ, ಕರೆನ್ಸಿ ನೋಟುಗಳನ್ನು ತೊಳೆಯಲು ಸಾಧ್ಯವಿಲ್ಲ. ಹಾಗಾದರೆ ಏನು ಮಾಡುವುದು…?
ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಮುಂದಾಗಿದೆ. ಇದಕ್ಕಾಗಿ ಅದು ಟ್ರಂಕ್​ ಗಾತ್ರದ ಸಾಧನವನ್ನು ಸಿದ್ಧಪಡಿಸಿದೆ. ಈ ಟ್ರಂಕ್​ನಲ್ಲಿ ನೇರಳಾತೀತ ರೋಗಾಣುಹಾರಕ ಪ್ರದೀಪನ (ಅಲ್ಟ್ರಾವೈಲೆಟ್​ ಜರ್ಮಿಸಿಡಲ್​ ಇರೇಡಿಏಷನ್​) ತಂತ್ರಜ್ಞಾನವನ್ನು ಅಳವಡಿಸಿದೆ.
ದವಸಧಾನ್ಯ, ಕರೆನ್ಸಿ ನೋಟುಗಳು, ವಾಚ್​ ಮತ್ತಿತರ ಸಾಧನಗಳನ್ನು ಈ ಟ್ರಂಕ್​ ಗಾತ್ರದ ಸಾಧನದಲ್ಲಿ ಕೆಲ ಸೆಕೆಂಡ್​ಗಳವರೆಗೆ ಇರಿಸುವುದರಿಂದ ಅವೆಲ್ಲವೂ ಎಲ್ಲ ಬಗೆಯ ವೈರಾಣು ಮತ್ತು ಸೂಕ್ಷ್ಮಾಣುಗಳಿಂದ ಮುಕ್ತವಾಗುತ್ತವೆ. ಹಾಗಾಗಿ, ಮನೆಯೊಳಗೆ ಕೋವಿಡ್​ 19ನಂಥ ಸೋಂಕುಗಳ ಪ್ರವೇಶವನ್ನು ನಿರ್ಬಂಧಿಸಬಹುದು ಎಂದು ಐಐಟಿ ಹೇಳಿದೆ.
ಟ್ರಂಕ್​ ಗಾತ್ರದ ಈ ಸಾಧನವನ್ನು ಮನೆಗಳ ಬಾಗಿಲಲ್ಲಿ ಅಳವಡಿಸಬಹುದು. ಪ್ರತಿಯೊಂದು ವಸ್ತುವನ್ನು ಇದರಲ್ಲಿ ಇರಿಸಿ, ವೈರಾಣು ಮತ್ತು ಸೂಕ್ಷ್ಮಾಣು ಮುಕ್ತಗೊಳಿಸಿ ಮನೆಯೊಳಗೆ ಕಂಡೊಯ್ಯಬಹುದು ಎಂದು ವಿವರಿಸಿದೆ.
ಕೋವಿಡ್​ 19ನ ಜಾಗತಿಕ ಕೇಂದ್ರ ಬಿಂದು ವುಹಾನ್​ನಲ್ಲಿ ಕರೊನಾ ವೈರಸ್​ ಬಳಿಕ ‘ಬಾಡಿಗೆ‘ಯ ಹೊಸ ತಲೆನೋವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 10 =
Remember me
