ನವದೆಹಲಿ:ಮೈಲ್ಯಾಬ್​ ಡಿಸ್ಕವರಿ ಸಲ್ಯೂಷನ್ಸ್​ ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಮೊದಲ ಆ್ಯಂಟಿಜೆನ್​ ಕಿಟ್​ ಬಳಕೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ಅನುಮೋದನೆ ನೀಡಿದೆ. ಕರೊನಾವೈರಾಣು ಸೋಂಕು ಪತ್ತೆಗೆ ಈ ಕಿಟ್​ಗಳನ್ನು ಬಳಸಲಾಗುತ್ತದೆ.
ಪ್ಯಾಥೋಕ್ಯಾಚ್​ ಕೋವಿಡ್​-19 ಆ್ಯಂಟಿಜೆನ್​ ರ್ಯಾಪಿಡ್​ ಟೆಸ್ಟಿಂಗ್​ ಕಿಟ್​ ಎಂಬ ಹೆಸರಿನ ಈ ಕಿಟ್​ ಅನ್ನು ಭಾರತದಲ್ಲೇ ಅಭಿವೃದ್ಧಿಪಡಿಸಿದ್ದು, ಪ್ರತಿ ಕಿಟ್​ಗೆ 450 ರೂ.ನಂತೆ ಮಾರುಕಟ್ಟೆಯಲ್ಲಿ ದೊರೆಯಲಿದೆ.
ಇದನ್ನೂ ಓದಿ:ಗಿಡ ನೆಟ್ಟು ಜನ್ಮದಿನ ಆಚರಿಸಿಕೊಂಡ ಸಿದ್ದಲಿಂಗಶ್ರೀ ; ಹಳೆಯ ಮಠದಲ್ಲಿ ವಿವಿಧ ಮಠಾಧೀಶರಿಂದ ಶ್ರೀಗಳ ಪಾದಪೂಜೆ
ಕೋವಿಡ್​-19 ಪಿಡುಗನ್ನು ನಿಯಂತ್ರಿಸಲು ನಮ್ಮ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಲೇ ಇದೆ. ವಿದೇಶಿ ಕಿಟ್​ಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಸುಲಭ ದರದ ಆರ್​ಟಿ-ಪಿಸಿಆರ್​ ಟೆಸ್ಟ್​ ಅನ್ನು ಬಿಡುಗಡೆ ಮಾಡಿದ ಬಳಿಕ ಕರೊನಾ ಸೋಂಕಿನ ಪರೀಕ್ಷೆಯನ್ನು ತ್ವರಿತಗೊಳಿಸಲು ಕಾಂಪ್ಯಾಕ್ಟ್​ ಎಕ್ಸ್​ಎಲ್​ ಎಂಬ ಕಿಟ್​ ಅನ್ನು ಬಿಡುಗಡೆ ಮಾಡಿದೆವು. ಇದೀಗ ಮೊದಲ ಆ್ಯಂಟಿಜೆನ್​ ಟೆಸ್ಟಿಂಗ್​ ಕಿಟ್​ ಅನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಮೈಲ್ಯಾಬ್​ ಡಿಸ್ಕವರಿ ಸಲ್ಯೂಷನ್ಸ್​ನ ಎಂಡಿ ಹಸ್ಮುಖ್​ ರಾವಲ್​ ತಿಳಿಸಿದ್ದಾರೆ.
ರಾಷ್ಟ್ರದಲ್ಲಿನ ಕೋವಿಡ್​ ಪರೀಕ್ಷೆಯನ್ನು ಚುರುಕುಗೊಳಿಸಲು ಆರ್​ಆರ್​ಟಿ-ಪಿಸಿಆರ್​ ಜತೆಗೆ ಆ್ಯಂಟಿಜೆನ್​ ಆಧಾರಿತ ಪರೀಕ್ಷಾ ಸಾಧನಗಳನ್ನೂ ಬಳಸಲಾಗುತ್ತಿದೆ. ಆರ್​ಆರ್​ಟಿ-ಪಿಸಿಆರ್​ ಟೆಸ್ಟಿಂಗ್​ಗೆ ಹೋಲಿಸಿದರೆ ಆ್ಯಂಟಿಜೆನ್​ ಪರೀಕ್ಷೆಯಲ್ಲಿ ಕೇವಲ 30 ನಿಮಿಷದಲ್ಲಿ ಫಲಿತಾಂಶ ಬರುತ್ತದೆ ಎಂದು ವಿವರಿಸಿದ್ದಾರೆ.
ರಕ್ತನೂ ಕೊಟ್ಟು, ಚಿಕಿತ್ಸೆಯನ್ನೂ ಮಾಡಿ ಜೀವ ಉಳಿಸಿದ ವೈದ್ಯ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twenty − 7 =
Remember me
