ನವದೆಹಲಿ:ಅಫ್ಘಾನಿಸ್ತಾನದ ಜೈಲಿನ ಮೇಲೆ ಆ.2ರಂದು ಐಸಿಸ್​ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಸುಮಾರು 20 ಮಂದಿ ಸಾವನ್ನಪ್ಪಿದ್ದಾರೆ. ಇಂದು ಇಸ್ಲಾಮಿಕ್ ಸ್ಟೇಟ್​ ದಾಳಿಕೋರರ ಫೋಟೋವನ್ನೂ ಕೂಡ ಬಿಡುಗಡೆ ಮಾಡಿದೆ.
ಅಫ್ಘಾನ್​ ಜೈಲಿನ ಮೇಲೆ ದಾಳಿ ನಡೆಸಿದ ಉಗ್ರರಲ್ಲಿ ಮೂವರು ಭಾರತೀಯರು, ಓರ್ವ ಪಾಕಿಸ್ತಾನಿ, ಮೂವರು ಅಫ್ಘಾನಿಸ್ತಾನದವರು ಹಾಗೂ ಮೂವರು ತಾಝಿಕ್ ಉಗ್ರರು ಎಂದು ಐಸಿಸ್​ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.ಇದನ್ನೂ ಓದಿ:ತಮ್ಮನನ್ನು ಕಾಪಾಡಲು ಅಣ್ಣ, ಇಬ್ಬರನ್ನು ರಕ್ಷಿಸಲು ಮತ್ತೋರ್ವ ಸಹೋದರ ಕೃಷಿ ಹೊಂಡಕ್ಕೆ ಬಿದ್ದು ಸಾವು
ಭಾರತದ ಮೂವರು ಉಗ್ರರಲ್ಲಿ ಓರ್ವನನ್ನು ಕೇರಳದ ಕಾಸರಗೋಡಿನ ಕಲುಕೆಟ್ಟಿಯಾ ಪುರೈಲ್ ಇಜಾಸ್ ಎಂದು ಗುರುತಿಸಲಾಗಿದೆ.ತಾಲಿಬಾನ್​ ಹೋರಾಟಗಾರರು ಮತ್ತು ಅಫ್ಘಾನ್​ ಭದ್ರತಾ ಪಡೆಗಳ ನಡುವೆ ಕದನ ವಿರಾಮ ಜಾರಿಯಲ್ಲಿದ್ದರೂ ಭಾನುವಾರ ರಾತ್ರಿ ಈ ದಾಳಿ ನಡೆಸಿದ್ದಾರೆ.
ಘಟನೆ ನಡೆದ ಜಲಲಾಬಾದ್ಗೆ ಅಫ್ಘಾನ್​ ಸೇನಾ ಮುಖ್ಯಸ್ಥ ಜನರಲ್​ ಯಾಸಿನ್ ಝಿಯಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 10 ಮಂದಿ ದಾಳಿಕೋರರನ್ನೂ ಹಿಮ್ಮೆಟ್ಟಿಸಲಾಗಿದೆ ಎಂದು ಹೇಳಿದ್ದಾರೆ. ಒಟ್ಟು 29 ಮಂದಿ ಮೃತಪಟ್ಟಿದ್ದು, 48 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)
ಮಾಸ್ಕ್​ ಯಾಕೆ ಧರಿಸಲಿಲ್ಲ ಎಂದು ಪ್ರಶ್ನೆ ಮಾಡಿದ ಪೊಲೀಸ್​ ತಲೆಯನ್ನು ಸಿಮೆಂಟ್​​ ನೆಲಕ್ಕೆ ಜಜ್ಜಿದ ಮಹಿಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 2 =
Remember me
