ಸಿಂಗಾಪುರ:ಭಾರತೀಯರ ಪಾಲಿಗೆ ಇದು ತಲೆ ತಗ್ಗಿಸುವ ವಿಷಯ, ಭಾರತ ಮೂಲದ 60ರ ಕಾಮಾಂಧನೊಬ್ಬ ಚಪಲ ತೀರಿಸಿಕೊಳ್ಳಲು ಸಿಂಗಪುರ ಮಹಿಳೆಗೆ ಸಂಭೋಗಕ್ಕೆ ಒತ್ತಾಯಿಸಿ ಹಲ್ಲೆ ಮಾಡಿ 4 ವರ್ಷ 3 ತಿಂಗಳು ಜೈಲು ಶಿಕ್ಷೆ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.ಆರೋಪಿ 60 ವರ್ಷದ ಕಣ್ಣನ್ ಸುಕುಮಾರನ್. ವೃತ್ತಿಯಿಂದ ಡೆಲಿವರಿ ಡ್ರೈವರ್. ಮಹಿಳೆ ಜಾಗಿಂಗ್ ಮಾಡುತ್ತಿರುವಾಗ ಆಕೆಗೆ ಕಿರುಕಳ ನೀಡಿದ್ದ.
ಇದನ್ನೂ ಓದಿ:ಗಗನಸಖಿ ನೇಣಿಗೆ ಶರಣು, ಪ್ರೇಮ ವಿವಾಹದ ದಾಂಪತ್ಯಕ್ಕೆ ಕೊಳ್ಳಿ ಇಟ್ಟ ನಿರುದ್ಯೋಗ!
ಈ ಘಟನೆ ಮೇ 12 ರಂದು ನಡೆದಿದ್ದು, ಮಂಗಳವಾರ ಆತನಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.ಘಟನೆ ನಡೆದ ದಿನ ಮಹಿಳೆ ಏಕಾಂಗಿಯಾಗಿ ಜಾಗಿಂಗ್ ಮಾಡುತ್ತಿದ್ದಳು. ರಾತ್ರಿ 7.30 ರ ಸುಮಾರಿಗೆ ಕಣ್ಣನ್ ತನ್ನ ವ್ಯಾನ್ ಒಳಗೆ ಅಶ್ಲೀಲ ವಿಡಿಯೋ ನೋಡುತ್ತಿದ್ದ, ಆಗ ಆ ಮಹಿಳೆಯನ್ನು ಗಮನಿಸಿದ.ಮೊದಲೇ ಅಶ್ಲೀಲ ಚಿತ್ರ ನೋಡುತ್ತಿದ್ದ ಆತ ಆ ಮಹಿಳೆಯನ್ನು ನೋಡಿ ಮತ್ತಷ್ಟು ಪ್ರಚೋದಿಸಲ್ಪಟ್ಟನು, ಮತ್ತು ಅವನು ಅವಳನ್ನು ಮಾತನಾಡಿಸಲು ಮುಂದಾದ” ಎಂದು ಡೆಪ್ಯೂಟಿ ಪಬ್ಲಿಕ್ ಪ್ರಾಸಿಕ್ಯೂಟರ್ ಕೊರ್ ಝೆನ್ ಹಾಂಗ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ:ಮದ್ಯ ಸಿಗದೇ ಖಿನ್ನನಾಗಿದ್ದ ಕೋವಿಡ್ ರೋಗಿಯೊಬ್ಬ ಮೂರನೇ ಮಹಡಿಯಿಂದ ಜಿಗಿದು ತಾಯಿಯ ಕಣ್ಣೇದುರೇ ಸತ್ತ
ಆರೋಪಿ ಹಿಂದಿನಿಂದ ಬಂದು ಆಕೆಯನ್ನು ಬಳಸಿ ಪಕ್ಕದ ಪೊದೆಗಳ ಕಡೆಗೆ ತಳ್ಳುವ ಪ್ರಯತ್ನ ಮಾಡಿದ.ಮಹಿಳೆ ಇದಕ್ಕೆ ಪ್ರತಿರೋಧವ್ಯಕ್ತಪಡಿಸಿದರೂ ಆತ ಬಿಡಲಿಲ್ಲ. ಆಕೆಯ ಎದೆಗೆ ಗುದ್ದಿದ. ಆಕೆ ಬಿದ್ದು, ಗಾಯಗೊಂಡಳು. ಆಗ ಆರೋಪಿ ಆಕೆಗೆ ಲೈಂಗಿಕ ಸುಖ ನೀಡುವಂತೆ ಒತ್ತಾಯಿಸಿದ್ದ. ಇದರಿಂದ ಆಘಾತಕ್ಕೊಳಗಾದ ಮಹಿಳೆ ಆತನನ್ನು ಒದ್ದು ಜೋರಾಗಿ ಕೂಗಿದಳು.
ಇದನ್ನೂ ಓದಿ:ನೆರೆಮನೆಯ ಎದುರು ಕಸ ಎಸೆದರು, ಪ್ರಶ್ನಿಸಿದ್ದಕ್ಕೆ ಇರಿದು ಒಬ್ಬರನ್ನು ಕೊಂದರು
ಸಮೀಪದಲ್ಲಿದ್ದ ಮತ್ತೊಬ್ಬ ಮಹಿಳೆ ಆಕೆಯ ರಕ್ಷಣೆಗೆ ಧಾವಿಸಿದಳು. ಇದರಿಂದ ತನಗೆ ಅನಾಹುತ ಕಾದಿದೆ ಎಂದು ಅರಿತ ಕಣ್ಣನ್, ತನ್ನ ವಾಹನ ಹತ್ತಿ ಅಲ್ಲಿಂದ ಪರಾರಿಯಾಗಿದ್ದಾನೆ. ಮಹಿಳೆ ಆತನ ವ್ಯಾನ್‌ನ ನೋಂದಣಿ ಸಂಖ್ಯೆಯನ್ನು ಬರೆದು ಪೊಲೀಸರನ್ನು ಸಂಪರ್ಕಿಸಿದಳು. ಪೊಲೀಸರು ಆತನನ್ನು ಬಂಧಿಸಿದ್ದಾರೆ.
ವಿದ್ಯುತ್ ಬಿಲ್ ರೂಪದಲ್ಲಿ ಬಂತು ಮೃತ್ಯು

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:19 − 18 =
Remember me
