ನವದೆಹಲಿ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ‘ ಬಾಲಕ ಬುದ್ಧಿ ‘ ಎಂದು ಹೇಳಿದ್ದಕ್ಕೆ ಪ್ರತಿಯಾಗಿ ಕಾಂಗ್ರೆಸ್​ ಸಾಮಾಜಿಕ ಮಾಧ್ಯಮದಲ್ಲಿ ಮೋದಿಯವರನ್ನು ‘ಬೇಲ್ ಬುದ್ಧಿ’ ಎಂದು ಕರೆಯುವ ಮೂಲಕ ಕೌಂಟರ್​ ಅಟ್ಯಾಕ್​ ಮಾಡಿದೆ.
ಇದನ್ನೂ ಓದಿ:ನೀಟ್​ ಪೇಪರ್ ಸೋರಿಕೆ ವೀಡಿಯೋ ‘ನಕಲಿ’: ಸುಪ್ರೀಂಗೆ ಎನ್​ಟಿಎ ಅಫಿಡವಿಟ್ – ಮುಂದಿನ ವಾರದಿಂದ ಕೌನ್ಸೆಲಿಂಗ್
ಮೋದಿ ಅವರ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ‘ ಬೇಲ್ ಬುದ್ಧಿ ‘ ಅಭಿಯಾನ ಆರಂಭಿಸಿದೆ. ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡಿ, ಮೀಮ್‌ಗಳನ್ನು ಕಾಂಗ್ರೆಸ್ ಹಂಚಿಕೊಂಡಿದೆ. “ಬೇಲ್ ಬುದ್ದಿ ಎಂದರೆ ಯಾರು ಗೊತ್ತಾ?” “ಅಸಂಬದ್ಧವಾಗಿ ಮಾತನಾಡುವವನು” ಎಂದು ಪಕ್ಷವು ಒಂದು ಪೋಸ್ಟ್‌ನಲ್ಲಿ ಹೇಳಿದೆ.
ಸಂಸತ್​ ಅಧಿವೇಷನದಲ್ಲಿ ರಾಹುಲ್ ಗಾಂಧಿ ಅವರನ್ನು ‘ಬಾಲಕ ಬುದ್ಧಿ’ (ಬುದ್ಧಿ ಬೆಳವಣಿಗೆಯಾಗಿಲ್ಲ, ಬಾಲಿಷ ಬುದ್ದಿ) ಎಂದು ಕರೆದ ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡು 9ದಿನಗಳ ನಂತರ ಕಾಂಗ್ರೆಸ್​ ಪ್ರತಿದಾಳಿಗೆ ಮುಂದಾಗಿದೆ. ಜುಲೈ 2 ರಂದು ಲೋಕಸಭೆಯಲ್ಲಿ ಮೋದಿಯವರು ಪದೇ ಪದೆ ವಿರೋಧ ಪಕ್ಷದ ನಾಯಕನ ಹೆಸರನ್ನು ಪ್ರಸ್ತಾಪಿಸದೆ ಇನ್ನೂ ಮಗು ಎಂದು ಉಲ್ಲೇಖಿಸಿ ಲೇವಡಿ ಮಾಡಿದ್ದರು.
ಸಂಸತ್​ನಲ್ಲಿ ರಾಹುಲ್​ ಹಿಂದೂ ವಿರೋಧಿ ಹೇಳಿಕೆ ಸೇರಿದಂತೆ ಬಿಜೆಪಿ ಮತ್ತು ಸರ್ಕಾರದ ವಿರುದ್ಧ ಟೀಕೆಗಳ ಸುರಿಮಳೆ ಗರೆದಿದ್ದಕ್ಕೆ ವಿರುದ್ಧವಾಗಿ ಮೋದಿಯವರು ಕಾಂಗ್ರೆಸ್ ಇತ್ತೀಚೆಗೆ ಮಗುವನ್ನು ಸಂತೋಷಪಡಿಸುವಲ್ಲಿ ನಿರತವಾಗಿದೆ. ಅನುಕಂಪ ಗಿಟ್ಟಿಸಲು ವಿರೋಧ ಪಕ್ಷದ ನಾಯಕರು ನಾಟಕವಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ಬಾಲಕ ಬುದ್ಧಿ (ಬಾಲಿಶ ವರ್ತನೆ) ಹೊಂದಿರುವ ವ್ಯಕ್ತಿಯ ರೋದನೆಗೆ ಸದನ ಸಾಕ್ಷಿಯಾಗಿದೆ ಎಂದು ಮೋದಿ ಹೇಳಿದ್ದರು.
ಸೈನಾನೆಹ್ವಾಲ್ ಜೊತೆ ಬ್ಯಾಡ್ಮಿಂಟನ್ ಆಡಿದ ರಾಷ್ಟ್ರಪತಿ ಮುರ್ಮು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × three =
Remember me
