ನವದೆಹಲಿ:ಭಾರತೀಯ ನೌಕಾಪಡೆಯ ಡಾರ್ನಿಯರ್​ ವಿಮಾನಗಳನ್ನು ಚಲಾಯಿಸುವುದಕ್ಕೆ ಮೂವರು ಮಹಿಳಾ ಪೈಲಟ್​ಗಳ ಒಂದು ತಂಡ ಇದೀಗ ಸಿದ್ಧವಾಗಿದೆ. ಡಾರ್ನಿಯರ್ ಆಪರೇಷನಲ್ ಫ್ಲೈಯಿಂಗ್ ಟ್ರೈನಿಂಗ್ ನ 9 ತಿಂಗಳ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿರುವ ಮೂವರು ಮಹಿಳಾ ಪೈಲಟ್​ಗಳು ಗುರುವಾರ ಕೊಚ್ಚಿಯ ವಾಯುನೆಲೆಯಲ್ಲಿ ಅರ್ಹತಾ ಪತ್ರವನ್ನು ಸ್ವೀಕರಿಸಿದ್ದಾರೆ.
ದೆಹಲಿಯ ಮಾಲ್ಟಿಯಾ ನಗರದ ಲೆಫ್ಟಿನೆಂಟ್ ದಿವ್ಯಾ ಶರ್ವ, ಉತ್ತರ ಪ್ರದೇಶದ ಟಿಲ್ಹಾರದ ಲೆಫ್ಟಿನೆಂಟ್ ಶುಭಾಂಗಿ ಸ್ವರೂಪ್ ಮತ್ತು ಬಿಹಾರದ ಮುಜಾಫರ್​ಪುರದ ಲೆಫ್ಟಿನೆಂಟ್ ಶಿವಾಂಗಿ ಅರ್ಹತಾ ಪತ್ರ ಸ್ವೀಕರಿಸಿದ ಮಹಿಳಾ ಪೈಲಟ್​ಗಳು. ಇವರ ಜತೆ ಅರ್ಹತೆ ಪಡೆದ ಆರು ಪೈಲೆಟ್​ಗಳಿಗೂ ಪತ್ರ ವಿತರಿಸಲಾಗಿದೆ.
ಇದನ್ನೂ ಓದಿ:ಒಬ್ಬಳು ಬದುಕಿದ್ದಾಗ ಇನ್ನೊಂದು ಮದ್ವೆಯಾದ್ರೆ ಎರಡನೇ ಹೆಂಡತಿ ಮಕ್ಕಳಿಗೆ ಆಸ್ತಿ ಸಿಗುತ್ತಾ?
ಸದರ್ನ್ ನೇವಲ್ ಕಮಾಂಡ್ (ಎಸ್​ಎನ್​ಸಿ) ಮುಖ್ಯ ಸಿಬ್ಬಂದಿ ಅಧಿಕಾರಿ ಅಡ್ಮಿರಲ್ ಆಂಟನಿ ಜಾರ್ಜ್ ಪೈಲೆಟ್​ಗಳಿಗೆ ಅರ್ಹತಾಪತ್ರ ಪ್ರಧಾನ ಮಾಡಿದರು. ಈ ಎಲ್ಲ ಪೈಲಟ್​ಗಳು ಭಾರತೀಯ ವಾಯುಪಡೆ ಮತ್ತು ನೌಕಾಪಡೆಯಲ್ಲಿ ತರಬೇತಿ ಪೂರ್ಣಗೊಳಿಸಿದ್ದಾರೆ.  ಎಂಟು ತಿಂಗಳ ಕಾಲ ಡಾರ್ನಿಯರ್ ಸ್ಕ್ವಾಡ್ರನ್​ನೊಂದಿಗೆ ತರಬೇತಿ ನೀಡಲಾಗಿತ್ತು. ಒಂದು ತಿಂಗಳು ಎಸ್​ಎನ್​ಸಿಯ ವಿವಿಧ ವೃತ್ತಿಪರ ಶಾಲೆಗಳಲ್ಲಿ ತರಬೇತಿ ನೀಡಲಾಗಿತ್ತು. ಮಹಿಳಾ ಪೈಲೆಟ್ ಆಗಿ ಮೊದಲು ಆಯ್ಕೆಯಾದ ಲೆಫ್ಟಿನೆಂಟ್ ಶಿವಾಂಗಿ ನೂತನ ರಫೇಲ್ ವಿಮಾನದ ಪೈಲಟ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. (ಏಜೆನ್ಸೀಸ್)
Kerala: The first batch of Indian Navy’s women pilots operationalised for maritime missions on Dornier aircraft from Southern Naval Command in Kochipic.twitter.com/JCxskUulKt
— ANI (@ANI)October 22, 2020

ವಿವಿಧ ಪರಿಷ್ಕೃತ ಯೋಜನೆ, ಪ್ರಸ್ತಾವನೆಗಳಿಗೆ ಸಚಿವ ಸಂಪುಟದ ಅನುಮೋದನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
