ಮೆಲ್ಬೋರ್ನ್​:ಡ್ರಗ್ಸ್​ ನೀಡಿ ಐವರು ಕೊರಿಯನ್​ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆಸ್ಟ್ರೇಲಿಯಾದ ಭಾರತೀಯ ಸಮುದಾಯದ ಪ್ರಮುಖ ಸದಸ್ಯ ಬಾಲೇಶ್​ ಧನಕರ್​ ತಪ್ಪಿತಸ್ಥರೆಂದು ಸಾಬೀತಾಗಿದೆ.
ಈ ಘಟನೆ ಆಸ್ಟ್ರೇಲಿಯಾದ ಪ್ರಮುಖ ನಗರಗಳಲ್ಲಿ ಒಂದಾದ ಸಿಡ್ನಿಯಲ್ಲಿ ನಡೆದಿತ್ತು. ನಗರದ ಇತ್ತೀಚಿನ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಅತ್ಯಾಚಾರಿಗಳಲ್ಲಿ ಧನಕರ್​ ಕೂಡ ಒಬ್ಬನೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸಿಡ್ನಿಯ ಡೌನಿಂಗ್​ ಸೆಂಟರ್​ನಲ್ಲಿರುವ ಜಿಲ್ಲಾ ನ್ಯಾಯಾಲಯ ತಪ್ಪಿತಸ್ಥನೆಂದು ತೀರ್ಪು ನೀಡಿದೆ.ಇದನ್ನೂ ಓದಿ:ಬಿಜೆಪಿಯ 175 ಪ್ರಮುಖರ ಜತೆ ಅಮಿತ್ ಷಾ ಮಹತ್ವದ ಸಭೆ; ಶೆಟ್ಟರ್ ಪ್ರಕರಣದ ಕುರಿತು ಹೇಳಿದ್ದೇನು?
ಸ್ಥಳೀಯವಾಗಿ ರಾಜಕೀಯ ಪ್ರಭಾವ ಹೊಂದಿದ್ದ ಪರಭಕ್ಷಕ ಧನಕರ್​, ಸುಳ್ಳಿನ ಜಾಲದ ಮೂಲಕ ಐವರು ಕೊರಿಯನ್​ ಮಹಿಳೆಯರಿಗೆ ಆಮಿಷವೊಡ್ಡಿದ್ದ. ಬಳಿಕ ಅವರಿಗೆ ಡ್ರಗ್ಸ್​ ನೀಡಿ, ಪ್ರಜ್ಞೆ ತಪ್ಪಿಸಿ ಮೃಗೀಯವಾಗಿ ಅತ್ಯಾಚಾರ ಎಸಗಿದ್ದ ಎಂದು ಸಿಡ್ನಿಯ ಮಾರ್ನಿಂಗ್​ ಹೆರಾಲ್ಡ್​ ನ್ಯೂಸ್​ ಪೇಪರ್​ ವರದಿ ಮಾಡಿದೆ.
ಧನಕರ್​ ಅವರು ಆಸ್ಟ್ರೇಲಿಯಾದ ‘ಓವರ್ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ’ಯ ಮಾಜಿ ಮುಖ್ಯಸ್ಥರಾಗಿದ್ದರು ಎಂದು ವರದಿ ಮಾಡಿದೆ. ತನ್ನ ಫೋನ್​ ಕ್ಯಾಮೆರಾ ಮತ್ತು ಅಲರಾಂ ಗಡಿಯಾರದ ಒಳಗೆ ರಹಸ್ಯ ಕ್ಯಾಮೆರಾವನ್ನು ಇಟ್ಟು, ತಾನು ಎಸಗಿದ ನೀಚ ಕೃತ್ಯವನ್ನು ಧನಕರ್​ ರೆಕಾರ್ಡ್​ ಸಹ ಮಾಡಿಕೊಂಡಿದ್ದ. ಸಿಡ್ನಿಯ ಇತ್ತೀಚಿನ ಇತಿಹಾಸದಲ್ಲೇ ಧನಕರ್​ ಅತ್ಯಂತ ಕೆಟ್ಟ ಅತ್ಯಾಚಾರಿ ಎಂಬ ಕುಖ್ಯಾತಿಗೆ ಒಳಗಾಗಿದ್ದಾರೆ ಎಂದು ಮಾರ್ನಿಂಗ್​ ಹೆರಾಲ್ಡ್​ ಹೇಳಿದೆ.
ಧನಕರ್​ ಓರ್ವ ದತ್ತಾಂಶ ತಜ್ಞ. ತನ್ನ ವಿರುದ್ಧದ 39 ಆರೋಪಗಳಲ್ಲಿ ಪ್ರತಿಯೊಂದಕ್ಕೂ “ತಪ್ಪಿತಸ್ಥ” ಎಂದು ಸೋಮವಾರ ನ್ಯಾಯಾಲಯ ತೀರ್ಪು ನೀಡುತ್ತಿದ್ದಂತೆ ಕಣ್ಣೀರು ಸುರಿಸಿದ್ದ. ಜಾಮೀನು ನೀಡುವಂತೆ ಧನಕರ್​ ಕೇಳಿಕೊಂಡರು ನ್ಯಾಯಾಲಯ ಮಾತ್ರ ತಿರಸ್ಕರಿಸಿದೆ. ಬಳಿಕ ಧನಕರ್​ ಕೈಗೆ ಕೋಳ ತೊಡಿಸಿ ಅಧಿಕಾರಿಗಳು ಕರೆದೊಯ್ದರು.
43 ವರ್ಷದ ಧನಕರ್​ ಮೇ ತಿಂಗಳಲ್ಲಿ ಮತ್ತೊಮ್ಮೆ ನ್ಯಾಯಾಲಯವನ್ನು ಎದುರಿಸಬೇಕಿದೆ. ಈ ವರ್ಷದ ಅಂತಿಮದಲ್ಲಿ ಆತನಿಗೆ ಕಠಿಣ ಶಿಕ್ಷೆ ಜಾರಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಧನಕರ್​ ಪತ್ನಿ ಕೂಡ ಕಣ್ಣೀರು ಹಾಕುತ್ತಾ ತನ್ನ ಗಂಡ ಪರವಾಗಿ ನಿಂತಳು.ಇದನ್ನೂ ಓದಿ:ಭಾರತ-ಚೀನಾ ಜನಸಂಖ್ಯೆ ಕುರಿತು ವ್ಯಂಗ್ಯಚಿತ್ರ; ವ್ಯಾಪಕ ಖಂಡನೆ
ವಿವಾಹೇತರ ಸಂಬಂಧ ಮುರಿದುಬಿದ್ದ ನಂತರ ಒಂಟಿಯಾಗಿದ್ದ ಕಾರಣ ತಾನು ಕೊರಿಯನ್​ ಮಹಿಳೆಯರಿಗೆ ಸುಳ್ಳು ಹೇಳಿದ್ದೇನೆ ಎಂದು ನ್ಯಾಯಾಲಯದ ಮುಂದೆ ವಿವರಿಸುವಾಗ ಧನಕರ್​ ಕಣ್ಣೀರಾಕಿದ. ಮದುವೆಯ ಬಳಿಕ ಪತ್ನಿಯಿಂದ ಲೈಂಗಿಕತೆಯಲ್ಲಿ ತೃಪ್ತಿ ಸಿಗದ ಕಾರಣ ನನ್ನ ಒಂಟಿತನದಿಂದ ಈ ಅಚಾತುರ್ಯ ನಡೆದಿದೆ ಎಂದು ತನ್ನನ್ನು ತಾನು ದೂಷಿಸಿದನು ಎಂದು ಮಾರ್ನಿಂಗ್​ ಹೆರಾಲ್ಡ್​ ವರದಿ ಮಾಡಿದೆ.
ಧನಕರ್​ ತನ್ನ ಕಾನೂನು ರಕ್ಷಣೆಗಾಗಿ ತನ್ನ ಕುಟುಂಬದ ಆಸ್ತಿಗಳು ಮಾರಾಟ ಮಾಡಿದ್ದು, ಅವನ ಪರವಾಗಿ ವಾದಿಸಲು ರೈಸಿಂಗ್ ಸ್ಟಾರ್ ಬ್ಯಾರಿಸ್ಟರ್ ಅನ್ನು ನಿಯೋಜಿಸಲಾಗಿದೆ.
ಧನಕರ್​, ಮಹಿಳೆಯರ ಜತೆ ಇರುವ ಡಜನ್​ಗಟ್ಟಲೆ ವಿಡಿಯೋವನ್ನು 2018ರಲ್ಲಿ ಪೊಲೀಸರು ಕಂಡುಕೊಂಡರು. ವಿಡಿಯೋಗಳಲ್ಲಿ ಕೆಲವೊಮ್ಮೆ ಹೆಂಗಸರು ಪ್ರಜ್ಞಾಹೀನರಾಗಿದ್ದರೆ, ಮತ್ತೆ ಕೆಲವು ದುಃಸ್ವಪ್ನದಂತೆ ನರಳುತ್ತಾರೆ. ಪೋಲ್ಡರ್​ಗಳಲ್ಲಿ ವಿಡಿಯೋಗಳನ್ನಿಟ್ಟು ಪ್ರತಿಯೊಂದು ಫೋಲ್ಡರ್​ಗೂ ಕೊರಿಯನ್​ ಮಹಿಳೆಯರ ಹೆಸರನ್ನು ಇಡಲಾಗಿತ್ತು. ಇಷ್ಟೇ ಅಲ್ಲದೆ, ಧನಕರ್​ ಬ್ರೌಸರ್‌ನಲ್ಲಿ ಬುಕ್‌ಮಾರ್ಕ್‌ಗಳ ಸರಣಿಯನ್ನು ಪೊಲೀಸರು ಕಂಡುಕೊಂಡರು.ಇದನ್ನೂ ಓದಿ:ಅಹಿಂದ ನಾಯಕನನ್ನು ಹಣಿಯಲು ಅಹಿಂದ ಅಸ್ತ್ರ ಹೂಡಿದ ಕುಮಾರಸ್ವಾಮಿ
ಒಂದು ವಿಡಿಯೋ ಸುಮಾರು 95 ನಿಮಿಷ ಇದ್ದು, ಅದರಲ್ಲಿ ಪ್ರಜ್ಞಾಹೀನ ಮಹಿಳೆಯರ ಜೊತೆ ಧನಕರ್​ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಧನಕರ್​ ಪ್ರಕರಣದ ಉಸ್ತುವಾರಿ ವಹಿಸಿರುವ ನ್ಯೂ ಸೌತ್ ವೇಲ್ಸ್ ಪೋಲೀಸ್ ಅಧಿಕಾರಿ ಸಾರ್ಜೆಂಟ್ ಕತ್ರಿನಾ ಗೈಡೆ, ಧನಕ್​ರ್ ಗೊಂದಲದ ಕಲ್ಪನೆಯಿಂದ ಬದುಕುತ್ತಿದ್ದಾರೆ ಎಂದು ಶಂಕಿಸಿದ್ದಾರೆ.(ಏಜೆನ್ಸೀಸ್​)
ಹೋಟೆಲ್​ ರೂಮಲ್ಲಿ ಸಿಕ್ಕಿಬಿದ್ದ ನಟಿ ಆರತಿಗೆ ಬಾಲಿವುಡ್ ಲಿಂಕ್​ ಹಿಂದಿರುವ ಕರಾಳತೆ ಬಯಲು

ಮದುವೆ ಆಗಲು ಇಷ್ಟವಿಲ್ಲ ಆದರೆ ಇದು ಓಕೆ! ಸೌಂದರ್ಯದ ಗಣಿ ಹನಿ ರೋಸ್​ ಅಚ್ಚರಿಯ ಹೇಳಿಕೆ

ಹೊಟ್ಟೆಪಾಡಿಗಾಗಿ ಸಾಬೂನು ಮಾರಲು ಬಿಡದ ಕಾಮುಕರು: ವಿಡಿಯೋ ಮೂಲಕ ನಟಿ ಐಶ್ವರ್ಯಾ ಬೇಸರ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:seven + 19 =
Remember me
