ಕ್ಯಾಲಿಫೋರ್ನಿಯ :ಮಂಗಳ ಗ್ರಹದ ಮೇಲೆ ಚಲಿಸುತ್ತಾ ಅಧ್ಯಯನ ನಡೆಸುತ್ತಿರುವ ‘ಪರ್ಸಿವರೆನ್ಸ್​’ ರೋವರ್​ಅನ್ನು ಚಾಲನೆ ಮಾಡುತ್ತಿರುವುದು ಭಾರತೀಯ ಮೂಲದ ಇಂಜಿನಿಯರ್ ವಂದಿ ವರ್ಮಾ. ಈಕೆ ಅಮೆರಿಕದ ನಾಸಾದ ಜೆಟ್​ ಪ್ರೊಪಲ್ಷನ್ ಲ್ಯಾಬೋರೇಟರಿ(ಜೆಪಿಎಲ್​)ನಲ್ಲಿ ರೋಬೋಟಿಕ್ಸ್​ ಆಪರೇಷನ್ಸ್​ನ ಚೀಫ್ ಇಂಜಿನಿಯರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಹುಕಾಲದ ಹಿಂದೆ ನೀರಿನ ಕೊಳ ಹೊಂದಿತ್ತು ಎಂದು ಭಾವಿಸಲಾದ ‘ಜೆಜೆರೋ’ ಎಂಬ ಕ್ರೇಟರ್​ನ ಮೇಲೆ ಸದ್ಯಕ್ಕೆ ಪರ್ಸಿವರೆನ್ಸ್​ ಸಂಚಾರ ನಡೆಸುತ್ತಿದೆ. ಅಲ್ಲಿನ 15 ಕಿಲೋಮೀಟರ್​ನಷ್ಟು ನೆಲದ ಮೇಲೆ ಓಡಾಡಿ ಪ್ರಾಚೀನ ಸೂಕ್ಷ್ಮಜೀವಿಗಳ ಇರುವಿಕೆಯನ್ನು ಹುಡುಕುವ ಕೆಲಸ ಮಾಡುತ್ತಿದೆ. “ಜೆಜೆರೋ ವಿಸ್ಮಯಕಾರಿಯಾಗಿದೆ” ಎಂದಿರುವ ವಂದಿ ವರ್ಮಾ, ತಮ್ಮ ಕೆಲಸದ ಬಗ್ಗೆ ಉತ್ಸಾಹ ಹೊಂದಿದ್ದಾರೆ.
ಇದನ್ನೂ ಓದಿ:ಎಚ್​ಡಿಕೆ ಮತ್ತೊಮ್ಮೆ ಸಿಎಂ! ನಿಖಿಲ್​ಗೆ ಗಂಡು ಮಗು ಯೋಗ: ಅವದೂತ ವಿನಯ್ ಗುರೂಜಿ ಭವಿಷ್ಯ
ಪಂಜಾಬಿನ ಹಲ್ವಾರದ ಮೂಲದವರಾದ ವರ್ಮಾರ ತಂದೆ, ಇಂಡಿಯನ್ ಏರ್​ ಫೋರ್ಸ್​ ಪೈಲೆಟ್​ ಆಗಿದ್ದರಂತೆ. ಕಾರ್ನೆಗಿ ಮೆಲ್ಲಾನ್ ಯೂನಿವರ್ಸಿಟಿಯಲ್ಲಿ ರೋಬೋಟಿಕ್ಸ್​ನಲ್ಲಿ ಪಿಎಚ್​.ಡಿ. ಮಾಡಿರುವ ವಂದಿ ವರ್ಮಾ, 2008 ರಿಂದ ಮಂಗಳ ಗ್ರಹದ ಮೇಲೆ ಅನ್ಯಾನ್ಯ ರೋವರ್​ಗಳ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಪಿರಿಟ್​, ಆಪರ್ಚುನಿಟಿ ಮತ್ತು ಕ್ಯೂರಿಯಾಸಿಟಿ ರೋವರ್​ಗಳನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಇಲ್ಲಿಂದಲೇ ನಿಯಂತ್ರಣ :ಸುಮಾರು 300 ಮಿಲಿಯನ್ ಕಿಲೋಮೀಟರ್​ಗಳ ದೂರದಲ್ಲಿ ಮಂಗಳದ ಮೇಲೆ, ಎಸ್‌ಯುವಿ ಗಾತ್ರದ ರೋವರ್​, ತನ್ನ ಪ್ರಯಾಣ ಆರಂಭಿಸಿದರೆ, ವರ್ಮ ಮತ್ತು ಇತರ ಇಂಜಿನಿಯರುಗಳ ತಂಡ ನಾಸಾದ ಲ್ಯಾಬಲ್ಲಿ ಬಹುಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಾರೆ. ತನ್ನ ಚಕ್ರಗಳ ಮೇಲೆ ವಿಜ್ಞಾನ ಪ್ರಯೋಗಾಲಯವನ್ನು ಹೊತ್ತಿರುವ ರೋವರ್​, ಹಳ್ಳಕೊಳ್ಳಗಳ ಮೇಲೆ ಚಲಿಸಿ ಅಪಾಯಕ್ಕೀಡಾಗದಂತೆ ಇಲ್ಲಿನ ರೋವರ್​​ ಚಾಲಕರು ಮತ್ತು ಯೋಜಕರು ಅದರ ನ್ಯಾವಿಗೇಷನ್ನಿನ ಮಾರ್ಗವನ್ನು ನಿಖರವಾಗಿ ತಯಾರಿಸುತ್ತಾರೆ. ಸಾಟಲೈಟ್ ಇಮೇಜುಗಳನ್ನು ಬಳಸಿ 3ಡಿ ಗ್ಲಾಸಸ್​ ತೊಟ್ಟು ರೋವರ್​ನ ಸುತ್ತಣ ಜಾಗವನ್ನು ನೋಡಿ ಅದರ ಮಾರ್ಗವನ್ನು ತಯಾರಿಸಿ, ಸೂಚನೆಗಳನ್ನು ಮಂಗಳ ಗ್ರಹಕ್ಕೆ ಕಳುಹಿಸುತ್ತಾರೆ. ಮರುದಿನ ಆ ಸೂಚನೆಗಳಂತೆ ಮಾರ್ಗವನ್ನು ರೋವರ್ ಕ್ರಮಿಸುತ್ತದೆ. ಹೀಗೆ ಚಲಿಸುವಾಗ ಸಹಾಯ ಮಾಡಲು, ಪರ್ಸಿವರೆನ್ಸ್​ ರೋವರ್​ನಲ್ಲಿ ಕಂಪ್ಯೂಟರುಗಳು ಅಳವಡಿಸಲ್ಪಟ್ಟಿವೆ​ ಎನ್ನಲಾಗಿದೆ.(ಏಜೆನ್ಸೀಸ್)
ಲಸಿಕೆ ಪಡೆಯಲು ಜನಜಂಗುಳಿ… ಪ್ರೊಟೊಕಾಲ್ ಮರೆತು ಪೈಪೋಟಿ!

ನಟ ಶಂಕರ್​ನಾಗ್​​ರ ಈ ಹಿಂದಿ ಚಿತ್ರ ನೋಡಿದ್ದೀರಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − fifteen =
Remember me
