ನವದೆಹಲಿ:ಇಡೀ ವಿಶ್ವಕ್ಕೆ ಅಗತ್ಯವಾಗುವಷ್ಟು ಕೋವಿಡ್​-19 ಲಸಿಕೆಗಳನ್ನು ಉತ್ಪಾದಿಸಿ, ಪೂರೈಕೆ ಮಾಡುವ ಸಾಮರ್ಥ್ಯ ಭಾರತೀಯ ಔಷಧೀಯ ಕಂಪನಿಗಳಿಗೆ ಇದೆ ಎಂದು ಮೈಕ್ರೋಸಾಫ್ಟ್​ನ ಸಹ ಸಂಸ್ಥಾಪಕ ಬಿಲ್​ ಗೇಟ್ಸ್​ ಹೇಳಿದ್ದಾರೆ.
ಭಾರತದಲ್ಲಿ ಹಲವು ಮುಖ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕರೊನಾ ವೈರಾಣುಗೆ ಲಸಿಕೆ ಕಂಡುಹಿಡಿಯುವುದು ಸೇರಿ ಇತರೆ ಕಾಯಿಲೆಗಳಿಗೆ ಪರಿಣಾಮಕಾರಿ ಔಷಧವನ್ನು ಉತ್ಪಾದಿಸಿ, ಪೂರೈಕೆ ಮಾಡಲು ಭಾರತದ ಔಷಧೀಯ ಕೈಗಾರಿಕೆಗಳು ಸದಾ ಶ್ರಮಿಸಿ, ಸಹಕರಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಯುಎಇಯಲ್ಲಿ ಐಪಿಎಲ್​ ಆಯೋಜನೆಗೆ ಬಿಸಿಸಿಐ ಪ್ಲ್ಯಾನ್​ ಹೇಗಿದೆ ಗೊತ್ತಾ?
ಕೋವಿಡ್​-19 ಇಂಡಿಯಾಸ್​ ವಾರ್​ ಅಗೇನ್​ಸ್ಟ್​ ದ ವೈರಸ್​ ಎಂಬ ಡಿಸ್ಕವರಿ ಪ್ಲಸ್​ ಚಾನೆಲ್​ನ ಕಾರ್ಯಕ್ರಮಕ್ಕಾಗಿ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಭಾರತದ ಗಾತ್ರ ಮತ್ತು ನಗರ ಪ್ರದೇಶಗಳಲ್ಲಿನ ಜನ ಸಾಂದ್ರತೆಯಿಂದಾಗಿ ಕರೊನಾ ಸೋಂಕು ನಿಯಂತ್ರಿಸುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಹೇಳಿದರು.
ಬೇರಾವುದೇ ರಾಷ್ಟ್ರಕ್ಕಿಂತಲೂ ಹೆಚ್ಚಿನ ಪ್ರಮಾಣದ ಲಸಿಕೆಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ. ಅವುಗಳಲ್ಲಿ ಸೆರಂ ಇನ್​ಸ್ಟಿಟ್ಯೂಟ್​ ಬಹುದೊಡ್ಡ ಸಂಸ್ಥೆಯಾಗಿದೆ. ಬಯೋ ಇ, ಭಾರತ್​ ಬಯೋಟೆಕ್​ ಸೇರಿ ಇನ್ನೂ ಹಲವು ಕಂಪನಿಗಳಿವೆ. ಕೋವಿಡ್​-19 ಲಸಿಕೆ ಸಂಶೋಧನೆಯಲ್ಲಿ ಭಾರತೀಯ ಔಷಧೀಯ ಕಂಪನಿಗಳು ಸಾಕಷ್ಟು ಶ್ರಮಿಸುತ್ತಿವೆ. ಇದಕ್ಕಾಗಿ ಅವು ಇತರೆ ಕಾಯಿಲೆಗಳಿಗೆ ರೂಪಿಸಿರುವ ಔಷಧಗಳ ಜ್ಞಾನ ಮತ್ತು ಅನುಭವವನ್ನು ಚೆನ್ನಾಗಿ ಬಳಸಿಕೊಳ್ಳುತ್ತಿವೆ ಎಂದು ತಿಳಿಸಿದರು.
ಅಕ್ರಮವಾಗಿ ವಾಸವಾಗಿದ್ದ ದಲಿತ ದಂಪತಿ ಮೇಲೆ ಪೊಲೀಸ್‌ ದೌರ್ಜನ್ಯ- ವಿಡಿಯೋ ವೈರಲ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − nine =
Remember me
