ನವದೆಹಲಿ: ಇಲ್ಲಿನ ಪೊಲೀಸ್​ ಇಲಾಖೆಯ ಆಯುಕ್ತರಾಗಿರುವ ಅಮೂಲ್ಯ ಪಟ್ನಾಯಕ್​ ಅವರು ಶನಿವಾರದಂದು ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನೆಲೆ ಎಸ್​ಎನ್​.ಶ್ರೀವಾಸ್ತವ್​ ಅವರನ್ನು ನೂತನ ಆಯುಕ್ತರಾಗಿ ಆಯ್ಕೆ ಮಾಡಲಾಗಿದ್ದು ಭಾನುವಾರದಂದು ಅವರು ಅಧಿಕಾರ ಸ್ವೀಕರಿಸಲಿದ್ದಾರೆ.
ಐಪಿಎಸ್​ ಆಫೀಸರ್​ ಆಗಿರುವ ಎಸ್​ಎನ್​ ಶ್ರೀವಾಸ್ತವ್​ ಅವರನ್ನು ದೆಹಲಿಗೆ ವಿಶೇಷ ಪೊಲೀಸ್​ ಆಯುಕ್ತರಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಇದೀಗ ಅಮೂಲ್ಯ ಪಟ್ನಾಯಕ್​ ಅವರು ನಿವೃತ್ತಿ ಹೊಂದಲಿದ್ದು ಅವರ ಸ್ಥಾನಕ್ಕೆ ಶ್ರೀವಾಸ್ತವರ್​ ಅವರನ್ನು ನೇಮಕ ಮಾಡಲಾಗುತ್ತಿದೆ.
ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಪೊಲೀಸ್​ ಆಯುಕ್ತರಾಗಿ ಶ್ರೀವಾಸ್ತವ್​ ಅವರನ್ನು ಕೇಂದ್ರ ಗೃಹ ಸಚಿವಾಲಯ ಆಯ್ಕೆ ಮಾಡಿದೆ.
ಎಸ್​ಎನ್​ ಶ್ರೀವಾಸ್ತವ್​ ಅವರು 1985ರ ಅರುಣಾಚಲ್​ ಪ್ರದೇಶ-ಗೋವಾ-ಮಿಜೋರಾಂನ ಬ್ಯಾಚ್​ಗಳ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಕೇಂದ್ರಾಡಳಿತ ಪ್ರದೇಶದ ಕೇಡರ್​ ಅಧಿಕಾರಿಯಾಗಿಯೂ ಸೇವ ಸಲ್ಲಿಸಿದ್ದಾರೆ. ಸಿಪಿಆರ್​ಎಫ್​ನಲ್ಲಿ ಕಾರ್ಯ ನಿರ್ವಹಿಸಿರುವ ಅನುಭವವಿರುವ ಇವರು ದೆಹಲಿಯಲ್ಲಿ ಅನೇಕ ಪೊಲೀಸ್​ ಯುನಿಟ್​ಗಳ ಜತೆ ಕಾರ್ಯಾಚರಣೆ ಮಾಡಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 11 =
Remember me
