ನವದೆಹಲಿ:ಉನ್ನತ ಶಿಕ್ಷಣದ ಕನಸು ನನಸು ಮಾಡಿಕೊಳ್ಳಲು ಭಾರತ ಸೇರಿದಂತೆ ಹಲವು ದೇಶಗಳ ವಿದ್ಯಾರ್ಥಿಗಳು ಈಗಲೂ ಅಮೆರಿಕಕ್ಕೆ ಆದ್ಯತೆ ನೀಡುತ್ತಾರೆ. ಸುಮಾರು 200ಕ್ಕೂ ಹೆಚ್ಚು ರಾಷ್ಟ್ರಗಳಿಂದ 9,14,000 ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಅಮೆರಿಕವನ್ನು ಅವಲಂಬಿಸುತ್ತಾರೆ ಎಂದು 2021ರ ‘ಓಪನ್ ಡೋರ್ಸ್ ರಿಪೋರ್ಟ್’ ಹೇಳಿದೆ. ಇನ್​ಸ್ಟಿಟ್ಯೂಟ್ ಆಫ್ ಇಂಟರ್​ನ್ಯಾಷನಲ್ ಎಜುಕೇಷನ್ (ಐಐಇ) ಈ ವರದಿಯನ್ನು ಪ್ರಕಟಿಸುತ್ತದೆ.
ಈ ಪೈಕಿ ಶೇಕಡ 20ರಷ್ಟು, ಅಂದರೆ 1,67,582 ವಿದ್ಯಾರ್ಥಿಗಳು ಭಾರತೀಯರು. 2020-21ನೇ ಶೈಕ್ಷಣಿಕ ವರ್ಷದಲ್ಲಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನಕ್ಕಾಗಿ ಅಮೆರಿಕಕ್ಕೆ ತೆರಳಿದ್ದಾರೆ. ಕೋವಿಡ್-19 ಸಾಂಕ್ರಾಮಿಕತೆ ಕಾಲದಲ್ಲೂ ಜಾಗತಿಕ ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ಅಮೆರಿಕ ಇತರ ದೇಶಗಳಿಗಿಂತ ಮುಂಚೂಣಿಯಲ್ಲಿತ್ತು. ಕಳೆದ ವರ್ಷ, ಭೌತಿಕ, ಆನ್​ಲೈನ್ ಹಾಗೂ ಕಲಿಕೆಯ ಇತರ ಹೈಬ್ರಿಡ್ ವಿಧಾನಗಳಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬರಮಾಡಿಕೊಳ್ಳಲು ಅಮೆರಿಕ ಸರ್ಕಾರ ಮತ್ತು ಆ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು ಸೂಕ್ತ ಕ್ರಮಗಳನ್ನು ಅನುಷ್ಠಾನಗೊಳಿಸಿದ್ದವು. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಅವಕಾಶಗಳು ಮತ್ತು ಸಂಪನ್ಮೂಲಗಳು ಇನ್ನೂ ವಿಪುಲ ಹಾಗೂ ಸದೃಢವಾಗಿಯೇ ಇವೆ ಎನ್ನುವುದನ್ನು ಖಾತರಿಪಡಿಸುವುದು ಅವುಗಳ ಉದ್ದೇಶವಾಗಿತ್ತು.
ರಾಜತಾಂತ್ರಿಕತೆಯ ಕಾಳಜಿ:ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಚಲನಶೀಲತೆಯು ಅಮೆರಿಕದ ರಾಜತಾಂತ್ರಿಕತೆ, ಆವಿಷ್ಕಾರ, ಆರ್ಥಿಕ ಸಮೃದ್ಧಿ ಮತ್ತು ರಾಷ್ಟ್ರೀಯ ಭದ್ರತೆಯ ಕೇಂದ್ರ ಕಾಳಜಿಯಾಗಿದೆ ಎನ್ನುತ್ತಾರೆ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವ್ಯವಹಾರಗಳ ಕೌನ್ಸೆಲರ್ ಅಂತೋಣಿ ಮಿರಾಂಡಾ. ಅಮೆರಿಕದ ತಮ್ಮ ಬೇರುಗಳೊಂದಿಗೆ ಜೀವನಪೂರ್ತಿ ಸಂಪರ್ಕವಿಟ್ಟುಕೊಂಡು ಜಾಗತಿಕ ಪಾಲುದಾರಿಕೆ ಬೆಳೆಸಲು ಅವರು ಪ್ರಯತ್ನಿಸುವುದರಿಂದ ನಾವು ಭಾರತೀಯ ವಿದ್ಯಾರ್ಥಿಗಳನ್ನು ಗೌರವಿಸುತ್ತೇವೆ ಎಂದೂ ಮಿರಾಂಡಾ ಹೇಳಿದ್ದಾರೆ.
62,000 ವಿದ್ಯಾರ್ಥಿ ವೀಸಾ:ಪ್ರಸಕ್ತ ಬೇಸಿಗೆಯಲ್ಲಿ ಭಾರತೀಯರಿಗೆ 62,000ಕ್ಕೂ ಅಧಿಕ ವಿದ್ಯಾರ್ಥಿ ವೀಸಾ ಮಂಜೂರು ಮಾಡಲಾಗಿತ್ತು. ಇದು ಹಿಂದಿನ ವರ್ಷಗಳಿಗಿಂತ ಹೆಚ್ಚಾಗಿತ್ತು. ವಿದೇಶಗಳಲ್ಲಿ ಕಲಿಯುವ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕವೇ ಪ್ರಮುಖ ಗಮ್ಯವೆನ್ನುವುದನ್ನು ಇದು ತೋರಿಸುತ್ತದೆ ಎಂದು ಅಮೆರಿಕದ ಕಾನ್ಸುಲರ್ ವ್ಯವಹಾರಗಳ ಮಿನಿಸ್ಟರ್ ಕೌನ್ಸೆಲರ್ ಡಾನ್ ಹೆಫ್ಲಿನ್ ‘ಓಪನ್ ಡೋರ್ಸ್ ರಿಪೋರ್ಟ್’ ಬಿಡುಗಡೆ ವೇಳೆ ಹೇಳಿದ್ದಾರೆ. ಅಮೆರಿಕದಲ್ಲಿ ಅಧ್ಯಯನ ಮಾಡುವ ಭಾರತೀಯ ವಿದ್ಯಾರ್ಥಿಗಳ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನೆರವಾಗಲು ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಿನ ವೀಸಾ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಅಮೆರಿಕವು ಉನ್ನತ ಶಿಕ್ಷಣದ ಬಂಗಾರದ ಮಾನಕವಾಗಿದೆ. ನಮ್ಮಲ್ಲಿ ಕಲಿತವರಿಗೆ ವಿಶ್ವ ದರ್ಜೆಯ ಕಾರ್ಯಾನ್ವಯ ಮತ್ತು ಅನುಭವ ಒದಗಿಸಲಾಗುತ್ತದೆ.
|ಅಂತೋಣಿ ಮಿರಾಂಡಾಅಮೆರಿಕದ ಹಿರಿಯ ಅಧಿಕಾರಿ
ಜಾಗತಿಕವಾಗಿ ಕರೊನಾ ಸಾಂಕ್ರಾಮಿಕ ಇದ್ದರೂ ಭಾರತೀಯ ವಿದ್ಯಾರ್ಥಿಗಳು ವೀಸಾಕ್ಕೆ ಅರ್ಜಿ ಸಲ್ಲಿಸಿ ಅಮೆರಿಕಕ್ಕೆ ಪ್ರಯಾಣಿಸಲು ಸಮರ್ಥರಾಗಿದ್ದಾರೆ
|ಡಾನ್ ಹೆಫ್ಲಿನ್ಅಮೆರಿಕದ ಕಾನ್ಸುಲರ್ ವ್ಯವಹಾರಗಳ ಮಿನಿಸ್ಟರ್ ಕೌನ್ಸೆಲರ್
ಶಿಕ್ಷಣ ಆ್ಯಪ್​:ಅಮೆರಿಕದಲ್ಲಿ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳು ನೆರವಿಗಾಗಿ ಎಜುಕೇಷನ್​ಯುುಎಸ್​ಎ ಇಂಡಿಯಾ ಆ್ಯಪ್​ ಡೌನ್​ಲೋಡ್ ಮಾಡಿಕೊಳ್ಳಬೇಕು. ಐಒಎಸ್ ಮತ್ತು ಆಂಡ್ರಾಯ್್ಡ ಸಾಧನಗಳಲ್ಲಿ ಅದು ಉಚಿತವಾಗಿ ಲಭ್ಯವಿದೆ. ಸುಮಾರು 4,500 ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಶಿಕ್ಷಣ ಲಭ್ಯವಿದೆ.
ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ ಸಾಧ್ಯತೆ ಕಡಿಮೆ ಅಂತೆ; ಅಧ್ಯಯನದಲ್ಲಿ ಬಯಲಾಯಿತು ಹೃದಯದ ಆರೋಗ್ಯ ಮಾಹಿತಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + ten =
Remember me
