ಲಖನೌ:ಹುಟ್ಟಿನಿಂದಲೇ ತನ್ನ ಮುಖದಲ್ಲಿ ಬೃಹತ್ ಗಡ್ಡೆಯನ್ನು ಹೊಂದಿರುವ ಪೂಜಾರಿಯನ್ನು ಸ್ಥಳೀಯ ಗ್ರಾಮಸ್ಥರು ದೇವರಂತೆ ಪೂಜಿಸುವ ವಿರಳಾತಿ ವಿರಳ ಪ್ರಕರಣವೊಂದು ಉತ್ತರ ಪ್ರದೇಶದಲ್ಲಿ ಕಂಡುಬಂದಿದೆ.​ಶಹಜೆಹಾನ್​ಪುರದ ನಿವಾಸಿಯಾಗಿರುವ ದಬೂಲ್ ಮಿಶ್ರಾ(32) ಹುಟ್ಟಿನಿಂದಲೇ ವಿಚಿತ್ರ ವೈದ್ಯಕೀಯ ಸಮಸ್ಯೆಯನ್ನು ಹೊಂದಿದ್ದು, ಆತನ ತುಟಿ ಮತ್ತು ಮುಖದ ಹೊರಭಾಗಕ್ಕೆ ಚಾಚಿದಂತೆ ಮಾಂಸಖಂಡ ಬೆಳೆದುಕೊಂಡಿದೆ.
ಹುಟ್ಟಿನಿಂದಲೇ ಶಾಪದಂತೆ ಬಂದಿರುವ ಗಡ್ಡೆಯನ್ನು ತೆಗೆಸಲು ಉಳಿತಾಯದ ಹಣವನ್ನು ವ್ಯಯಿಸಿ ಮಿಶ್ರಾ ದಣಿದಿದ್ದಾರೆ. ಸದ್ಯ ಭಿಕ್ಷೆ ಬೇಡುವುದನ್ನು ನಿರಾಕರಿಸಿ ಈಗ ಸ್ಥಳೀಯ ದೇವಸ್ಥಾನದಲ್ಲಿ ಮಿಶ್ರಾ ತಮ್ಮ ಕುಟುಂಬದ ಸಹಾಯದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಶೇಷವೆಂದರೆ ಮಿಶ್ರಾ ಅವರ ವಿಕಾರವನ್ನೇ ಶೆಹಜಾನ್​ಪುರ ಸ್ಥಳೀಯರು ಆಶೀರ್ವಾದ ಎಂದು ಭಾವಿಸಿದ್ದಾರೆ. ಹೀಗಾಗಿ ಆತನ ಮೇಲೆ ನಂಬಿಕೆ ಇಟ್ಟು, ಮಿಶ್ರಾ ಹನುಮಂತನ ಅವತಾರವೆಂದು ನಂಬಿ ದೇವರಂತೆ ಪೂಜಿಸುತ್ತಿದ್ದಾರೆ.
ಸದ್ಯ ಮಿಶ್ರಾ ತನ್ನ ಅಂಧ ಪತ್ನಿ ಮತ್ತು ಮಕ್ಕಳೊಂದಿಗೆ ಸಂಕಷ್ಟದ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದರೂ ಮಿಶ್ರಾ ತನ್ನ ಭರವಸೆಯನ್ನು ಎಲ್ಲೂ ಕಳೆದುಕೊಂಡಿಲ್ಲ. ನಾನು ಹುಟ್ಟಿನಿಂದಲೇ ಈ ಸ್ಥಿತಿಯನ್ನು ಹೊಂದಿರಬಹುದು ಆದರೆ, ಎಂದಿಗೂ ನಾನು ಭಿಕ್ಷೆ ಬೇಡುವುದಿಲ್ಲ. ನನಗೂ ಸ್ವಾಭಿಮಾನವಿದೆ ಎಂದು ಹೇಳಿದ್ದಾರೆ.
ನಾನು ಇದನ್ನು ಶಾಪವೆಂದು ಪರಿಗಣಿಸಿದ್ದು, ಇದೀಗ ಜನರು ನನ್ನಲ್ಲಿ ದೇವರನ್ನು ಕಾಣುತ್ತಿದ್ದಾರೆ. ಹನುಮಂತನ ಅವತಾರವೆಂದು ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಭಾವುಕವಾಗಿ ಹೇಳಿಕೊಂಡಿದ್ದಾರೆ.
ನಾನು ಅನೇಕ ಆಸ್ಪತ್ರೆಗಳನ್ನು ಭೇಟಿ ಮಾಡಿದೆ. ಆದರೆ, ಸರಿಯಾದ ಯಾವುದೇ ಚಿಕಿತ್ಸೆ ದೊರೆಯಲಿಲ್ಲ. ನಾನು ಉಳಿಸಿದ ಎಲ್ಲ ಹಣವನ್ನು ವ್ಯಯಿಸಿದ್ದೇನೆ. ಬಳಿಕ ಗುಣವಾಗುವ ಭರವಸೆಯಿಂದ ಆಸ್ಪತ್ರೆಗೆ ಹೋಗುವುದನ್ನು ಬಿಟ್ಟಿದ್ದೇನೆ. ಸರ್ಕಾರಿ ಅಧಿಕಾರಿಗಳಿಗೂ ನನ್ನ ಸ್ಥಿತಿಯ ಬಗ್ಗೆ ಅರಿವಿದೆ. ಆದರೆ ಯಾವುದೇ ನೆರವು ನೀಡುತ್ತಿಲ್ಲ ಎಂದು ಕಣ್ಣೀರಿಟ್ಟರು. ಅಲ್ಲದೆ, ಈ ಪರಿಸ್ಥಿತಿಗೆ ಪರಿಹಾರ ಕೊಂಡುಕೊಳ್ಳುವವರೆಗೂ ನಾನು ಹೋರಾಡುತ್ತೇನೆ. ಆದರೆ, ಆ ಸಂದರ್ಭದಲ್ಲಿ ಚಿಕಿತ್ಸೆಗೆ ಭರಿಸುವ ಹಣ ನನ್ನ ಬಳಿ ಇರುವುದಿಲ್ಲ ಎಂದು ದುಃಖಿತರಾದರು.
ಇಷ್ಟೇ ಅಲ್ಲದೆ ಮಿಶ್ರಾ, ಭಕ್ತರ ಮೂಲಕ ದೇಣಿಗೆ ಮತ್ತು ಧಾರ್ಮಿಕ ಸಭೆಯಲ್ಲಿ ಹಾಡುವ ಮೂಲಕ ಹಣವನ್ನು ಸಂಗ್ರಹಿಸುತ್ತಿದ್ದಾರೆ. ಇನ್ನು ಪತಿಯ ಸಮಸ್ಯೆ ಬಗ್ಗೆ ಮಾತನಾಡಿದ ಹೆಸರೇಳಲು ಇಚ್ಛಿಸಿದ ಪತ್ನಿ, ನಮಗೆ ಇದು ಕಠಣ ಸಮಯವಾಗಿದೆ. ನಾನು ಕುರುಡಿ ಮತ್ತು ನನ್ನ ಪತಿ ಈ ಪರಿಸ್ಥಿತಿಯಿಂದ ಬಳಲುತ್ತಿದ್ದಾರೆ. ನನಗೆ ಕಾಣದಿರುವುದೇ ತುಂಬಾ ಖುಷಿ. ಇಲ್ಲದಿದ್ದರೆ, ನನ್ನ ಪತಿಯ ಸ್ಥಿತಿ ನೋಡಿ ಇನ್ನು ಕಷ್ಟವಾಗುತ್ತಿತ್ತು ಎಂದು ನೋವಿನ ಮಾತುಗಳನ್ನಾಡಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 12 =
Remember me
