ವ್ಯಕ್ತಿಯೋರ್ವ ಆಯತಪ್ಪಿ ರೈಲ್ವೆ ಹಳಿಗೆ ಬಿದ್ದಿದ್ದು, ಆತನನ್ನು ರಕ್ಷಿಸಲು ರೈಲ್ವೇ ಉದ್ಯೋಗಿ ಪ್ರಾಣ ಪಣಕ್ಕಿಟ್ಟ ಘಟನೆಯೊಂದು ನಡೆದಿದೆ. ಈ ಘಟನೆಯ ಸಂಪೂರ್ಣ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದೆ.
ಹಳಿಯ ಮೇಲೆ ವ್ಯಕ್ತಿಯೋರ್ವ ಬಿದ್ದಿದ್ದು, ಆತನನ್ನು ರಕ್ಷಿಸಲು ರೈಲ್ವೇ ಉದ್ಯೋಗಿ ಓಡಿಬಂದಿದ್ದಾರೆ. ಇನ್ನು ರೈಲು ಬರುವ ಮುನ್ನವೇ ಆತನನ್ನು ಕಾಪಾಡಲಾಗಿದೆ. ಈ ಆಘಾತಕಾರಿ ಘಟನೆಯ ವಿಡಿಯೋವನ್ನು ರೈಲ್ವೆ ಸಚಿವಾಲಯ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ. ಆದರೆ ಯಾವ ಸ್ಥಳದಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
24 ಸೆಕೆಂಡುಗಳ ಸಿಸಿಟಿವಿ ದೃಶ್ಯದಲ್ಲಿ, ರೈಲ್ವೇ ಉದ್ಯೋಗಿ ಎಚ್ ಸತೀಶ್ ಕುಮಾರ್ ಅವರು ಮುಂಬರುವ ಗೂಡ್ಸ್ ರೈಲಿಗೆ ಸಿಗ್ನಲ್ ಕೊಡಲು ಪ್ಲಾಟ್‌ಫಾರ್ಮ್ ಕಡೆಗೆ ಹೋಗುತ್ತಿರುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆ ಹಿಂತಿರುಗಿ ನೋಡಿದಾಗ ಯಾರೋ ಟ್ರ್ಯಾಕ್ ಮೇಲೆ ಬಿದ್ದಿದ್ದಾರೆಂದು ಅರಿವಾಗುತ್ತದೆ. ತಡಮಾಡದೆ ಸತೀಶ್‌ ತಕ್ಷಣವೇ ಪ್ಲಾಟ್‌ಫಾರ್ಮ್ ಕಡೆಗೆ ಓಡಿ ಟ್ರ್ಯಾಕ್‌ ಮೇಲೆ ಬಿದ್ದಿದ್ದ ವ್ಯಕ್ತಿಯನ್ನು ಹಳಿಯಿಂದ ಹೊರಗೆ ಕರೆದೊಯ್ದಿದ್ದಾರೆ. ವ್ಯಕ್ತಿಯನ್ನು ರಕ್ಷಿಸಲ್ಪಟ್ಟ ಕೆಲವೇ ಸೆಕೆಂಡುಗಳಲ್ಲಿ ರೈಲು ಅದೇ ಹಳಿಯಿಂದ ಹಾದುಹೋಗಿದೆ. ಸತೀಶ್ ಸಮಯಪ್ರಜ್ಞೆಯಿಂದ ವ್ಯಕ್ತಿಯ ಪ್ರಾಣ ಉಳಿದಿದೆ.
ಸತೀಶ್ ಕುಮಾರ್ ಅವರು ಕೆಲವು ಸೆಕೆಂಡುಗಳು ತಡ ಮಾಡಿದ್ದರೂ ಸಹ ವ್ಯಕ್ತಿಯ ಪ್ರಾಣಪಕ್ಷಿ ಹಾರಿಹೋಗುತ್ತಿತ್ತು. ಇನ್ನು ವ್ಯಕ್ತಿ ಆಕಸ್ಮಿಕವಾಗಿ ಬಿದ್ದಿದ್ದಾನೋ ಅಥವಾ ಉದ್ದೇಶಪೂರ್ವಕವಾಗಿ ರೈಲ್ವೆ ಹಳಿ ಮೇಲೆ ಹಾರಿದ್ದಾನೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಭಾರತೀಯ ರೈಲ್ವೇಯು ಎಚ್ ಸತೀಶ್ ಕುಮಾರ್ ಅವರಂತಹ ಧೈರ್ಯಶಾಲಿ ಮತ್ತು ಶ್ರಮಶೀಲ ಉದ್ಯೋಗಿಗಳ ಬಗ್ಗೆ ಹೆಮ್ಮೆಪಡುತ್ತದೆ, ಅವರ ಧೈರ್ಯವನ್ನು ಶ್ಲಾಘಿಸುತ್ತದೆ ಎಂದು ರೈಲ್ವೆ ಸಚಿವಾಲಯ ಟ್ವೀಟ್‌ ಮೂಲಕ ಹೇಳಿಕೊಂಡಿದೆ.
सेवा, सुरक्षा और सहयोग
A precious life was saved by the courageous act of help by on-duty staff, who jumped on tracks himself to save a person from getting gravely injured.Indian Railways is proud to have daring & diligent staff like H. Satish Kumar and commends his bravery.pic.twitter.com/gcnHCrtXg4
— Ministry of Railways (@RailMinIndia)June 23, 2022

ಡೇಟಿಂಗ್ ಆ್ಯಪ್ ಬೆಡಗಿಗಾಗಿ ಕೋಟಿ ಕೊಟ್ಟು ಕೈ ಸುಟ್ಟುಕೊಂಡ ಬ್ಯಾಂಕ್ ಮ್ಯಾನೇಜರ್!

ಅಂತಾರಾಷ್ಟ್ರೀಯ ಕ್ರಿಕೆಟ್​ ಬದುಕಿಗೆ 15 ವರ್ಷ; ಭಾವುಕ ಪತ್ರ ಬರೆದ ಹಿಟ್​ಮ್ಯಾನ್ ರೋಹಿತ್ ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − five =
Remember me
