ನವದೆಹಲಿ:ಹೈಸ್ಪೀಡ್ ರೈಲುಗಳ ಸಂಚಾರಕ್ಕಾಗಿ ಪ್ರತ್ಯೇಕ ಮಾರ್ಗಗಳನ್ನು ನಿರ್ವಿುಸುವ ಉದ್ದೇಶ ಹೊಂದಿರುವ ಭಾರತೀಯ ರೈಲ್ವೆ, ಇದರ ಭಾಗವಾಗಿ ತಾಸಿಗೆ 220 ಕಿ.ಮೀ. ವೇಗದಲ್ಲಿ ಸಂಚರಿಸಲು ಸಾಧ್ಯವಾಗುವಂತಹ ಪರೀಕ್ಷಾರ್ಥ ಹಳಿಗಳನ್ನು ವಾಯವ್ಯ ರೈಲ್ವೆ ವಲಯದ ಜೋಧಪುರ್ ವಿಭಾಗದಲ್ಲಿ ನಿರ್ವಿುಸುತ್ತಿದೆ. ರಾಜಸ್ಥಾನದ ಗುಧಾ-ಥಥಾನಾ ಮಿಠರಿ ನಿಲ್ದಾಣಗಳ ಮಧ್ಯೆ 59 ಕಿ.ಮೀ. ಉದ್ದ ಈ ಹಳಿಗಳು ಅಂತಾರಾಷ್ಟ್ರೀಯ ಗುಣಮಟ್ಟದ ಸಮಗ್ರ ಪರೀಕ್ಷಾ ಮಾರ್ಗವಾಗಿದ್ದು, ಇಂಥದನ್ನು ನಿರ್ವಿುಸುತ್ತಿರುವ ಮೊದಲ ದೇಶ ಭಾರತ ಆಗಿದೆ.
ಇದನ್ನೂ ಓದಿ:ಗಳಿಕೆಯ ಜತೆಗೆ ಸಾಲವೂ ಹೆಚ್ಚಳ! ನಾಮಪತ್ರ ಸಲ್ಲಿಕೆ ವೇಳೆ ಮುರುಗೇಶ್ ನಿರಾಣಿ ಘೋಷಿಸಿದ ಆಸ್ತಿ ವಿವರ ಹೀಗಿದೆ…
ಈ ಮಾರ್ಗದಲ್ಲಿ ಸೆಮಿ ಹೈಸ್ಪೀಡ್ ರೈಲಾಗಿರುವ ವಂದೇ ಭಾರತ್ ಎಕ್ಸ್​ಪ್ರೆಸ್​ಗಳ ವೇಗವನ್ನು ಪರೀಕ್ಷಿಸಲಾಗುವುದು. ಈ ಮಾರ್ಗದಲ್ಲಿ 23 ಕಿ.ಮೀ. ಉದ್ದ ಮುಖ್ಯ ಮಾರ್ಗವಿದ್ದು, 13 ಕಿ.ಮೀ. ಉದ್ದದ ಉಪಮಾರ್ಗಗಳು (ಲೂಪ್) ಇವೆ. ನವಾ ಎಂಬಲ್ಲಿ ಮೂರು ಕಿ.ಮೀ. ಉದ್ದದ ವೇಗವರ್ಧಿತ ಲೂಪ್ ಇದ್ದರೆ, ಮಿಠರಿಯಲ್ಲಿ 20 ಕಿ.ಮೀ. ಉದ್ದದ ತಿರುವು (ಕರ್ವ್)ಗಳ ಪರೀಕ್ಷೆಯ ಮಾರ್ಗ ಇದೆ. ಈ ಮಾರ್ಗದ ಮೊದಲ ಹಂತದ ಕಾಮಗಾರಿ ವರ್ಷಾಂತ್ಯದಲ್ಲಿ ಪೂರ್ಣಗೊಳ್ಳಲಿದ್ದು, ಎರಡನೇ ಹಂತ ಕಾರ್ಯಗಳು 2024ರ ಡಿಸೆಂಬರ್​ಗೆ ಮುಗಿಸುವ ಗುರಿಯನ್ನು ಹೊಂದಲಾಗಿದೆ ಎಂದು ವಾಯವ್ಯ ರೈಲ್ವೆ ವಲಯದ ಸಿಪಿಆರ್​ಒ ಕ್ಯಾಪ್ಟನ್ ಶಶಿಕಿರಣ್ ತಿಳಿಸಿದ್ದಾರೆ.
ವೇಗವಾಗಿ ಸಂಚರಿಸುವಾಗ ಹಳಿ ಬದಲಾವಣೆ ವೇಳೆ ರೈಲಿನ ಗಾಲಿಗಳ ಕ್ಷಮತೆ, ಡಿಕ್ಕಿಯಾದರೆ ಅದರ ಪರಿಣಾಮ, ವೇಗದಲ್ಲಿ ರೈಲಿನ ಸ್ಥಿರತೆ, ತಿರುವುಗಳಲ್ಲಿ ಬೋಗಿಗಳ ಪ್ರತಿರೋಧಕ ಕ್ಷಮತೆ ಇನ್ನಿತರ ಅಂಶಗಳ ಸಮಗ್ರ ಅಧ್ಯಯನ ಈ ಮಾರ್ಗದಲ್ಲಿ ನಡೆಯಲಿದೆ. ಸದ್ಯ ಭಾರತದಲ್ಲಿ ದೆಹಲಿ-ಮುಂಬೈ ಮತ್ತು ದೆಹಲಿ-ಹೌರಾ ಮಾರ್ಗ ತಾಸಿಗೆ 160 ಕಿ.ಮೀ. ಗರಿಷ್ಠ ವೇಗದಲ್ಲಿ ಸಂಚರಿಸಬಹುದಾದ ಪಥವೆಂದು ಗುರುತಿಸಲಾಗಿದೆ.
ಇದನ್ನೂ ಓದಿ:ಮುಸ್ಲಿಮರ ಮೀಸಲಾತಿ ರದ್ದು; ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್​ ಗರಂ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 5 =
Remember me
