ಹೊಸದಿಲ್ಲಿ:ರೈಲಿನಲ್ಲಿ ಕಳಪೆ ಮಟ್ಟದ ನೈರ್ಮಲ್ಯತೆ ಇದೆ ಎಂದು ಪ್ರಯಾಣಿಕರೊಬ್ಬರು ಅಳಲು ತೋಡಿಕೊಂಡಿದ್ದು, ತಾನು ದೈಹಿಕ ತೊಂದರೆ ಅನುಭವಿಸಿದೆ ಎಂದು ಹೇಳಿದ ಬೆನ್ನಲ್ಲೇ ಅವರ ದೂರಿನ ಮೇರೆಗೆ ದಂಡವನ್ನು ಪಾವತಿ ಮಾಡುವಂತೆ ದೆಹಲಿ ಜಿಲ್ಲಾ ಗ್ರಾಹಕ ಆಯೋಗವು ಭಾರತೀಯ ರೈಲ್ವೇ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದೆ. ಅಷ್ಟಕ್ಕೂ ಪ್ರಯಾಣಿಕರು ಅನುಭವಿಸಿದ ತೊಂದರೆ ಏನು? ಪಡೆದ ಹಣವೆಷ್ಟು ಎಂಬುದರ ವಿವರ ಹೀಗಿದೆ.
ಇದನ್ನೂ ಓದಿ:ವಿದ್ಯೆಯ ಜೊತೆ ಸಂಸ್ಕಾರ ಇದ್ದರೆ ಜೀವನ ಸಾರ್ಥಕ; ಸರ್ಪಭೂಷಣ ಶ್ರೀಗಳು
ರೈಲಿನ ಶೌಚಾಲಯ ಸ್ವಚ್ಛವಾಗಿಲ್ಲ, ಒಳಗೆ ನೀರಿಲ್ಲ ಎಂದು ಪ್ರಯಾಣಿಕರೊಬ್ಬರು ನೀಡಿದ ದೂರಿನ ಅನ್ವಯ, ಅವರಿಗೆ 30,000 ರೂಪಾಯಿ ಪಾವತಿಸುವಂತೆ ದೆಹಲಿ ಜಿಲ್ಲಾ ಗ್ರಾಹಕ ಆಯೋಗವು ಭಾರತೀಯ ರೈಲ್ವೆಗೆ ನಿರ್ದೇಶಿಸಿದೆ. ಅದರಂತೆ ಭಾರತೀಯ ರೈಲ್ವೆಯು ಇದೀಗ ಪ್ರಯಾಣಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಫಲವಾದ ಕಾರಣ ಹಣವನ್ನು ನೀಡಲು ಮುಂದಾಗಿದೆ.
ವರದಿಗಳ ಪ್ರಕಾರ, ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಫಲವಾಗಿದೆ ಎಂದು ಜಿಲ್ಲಾ ಗ್ರಾಹಕ ಆಯೋಗವು ಗಮನಿಸಿದ್ದು, ಇದು ಗ್ರಾಹಕರಿಗೆ ಒದಗಿಸುವ ಸೇವೆಗಳಲ್ಲಿ ಕೊರತೆಯನ್ನು ಉಂಟುಮಾಡಿದೆ ಎಂದು ಉಲ್ಲೇಖಿಸಿದೆ.
ಇದನ್ನೂ ಓದಿ:ಗ್ಯಾಂಗ್ ರೇಪ್ ಕೇಸ್, ಮತ್ತೆ ಮೂವರ ಬಂಧನ; 14ಕ್ಕೆ ಏರಿದ ಬಂಧಿತರ ಸಂಖ್ಯೆ
ನೀರಿಲ್ಲದೇ ರೈಲಿನ ಶೌಚಗೃಹ ಕೊಳಕು:ವರದಿಗಳ ಪ್ರಕಾರ, ದೂರುದಾರರು ಸೆಪ್ಟೆಂಬರ್ 3, 2021ರಂದು ಹೊಸದಿಲ್ಲಿ ರೈಲು ನಿಲ್ದಾಣದಿಂದ ಇಂದೋರ್‌ಗೆ 3AC ಕೋಚ್​ ಟಿಕೆಟ್​ ಪಡೆದು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಆರಾಮದಾಯಕ ಮತ್ತು ತೊಂದರೆಯಿಲ್ಲದ ಪ್ರಯಾಣಕ್ಕಾಗಿ ಸ್ಲೀಪರ್ ಕೋಚ್‌ಗಿಂತ ಹೆಚ್ಚು ದುಬಾರಿಯಾದ 3AC ಟಿಕೆಟ್ ಅನ್ನು ಖರೀದಿಸಿದ್ದೇನೆ ಎಂದು ಹೇಳಿದ ಗ್ರಾಹಕ, ಬೆಳಗ್ಗೆ ಎದ್ದು ಶೌಚಕ್ಕೆ ಹೋಗಬೇಕು ಎಂದು ಅನಿಸಿದಾಗ ಅಲ್ಲಿ ನೀರಿಲ್ಲದಿರುವುದು ಹಾಗೂ ರೈಲಿನ ಶೌಚಾಲಯ ಕೊಳಕಾಗಿರುವುದು ಗಮನಕ್ಕೆ ಬಂದಿದೆ. ಈ ವೇಳೆ ಕೈ ತೊಳೆಯಲು ಕೂಡ ನೀರಿರಲಿಲ್ಲ ಎಂದು ಆರೋಪಿಸಿದ್ದಾರೆ.
ಪ್ರಯಾಣಿಕ ನೀಡಿದ ದೂರನ್ನು ತಕ್ಷಣವೇ ಸ್ವೀಕರಿಸಿ, ಸ್ಪಂದಿಸದ ರೈಲ್ವೆ ಇಲಾಖೆಯ ಬೇಜವಾಬ್ದಾರಿಗೆ ಗ್ರಾಹಕ ಆಯೋಗವು ನೋವು ಅನುಭವಿಸಿದ ಪ್ರಯಾಣಿಕರಿಗೆ 30,000 ರೂ.ಗಳ ಪರಿಹಾರವನ್ನು ಮತ್ತು ವ್ಯಾಜ್ಯ ಶುಲ್ಕ 10,000 ರೂಪಾಯಿಗಳನ್ನು ನೀಡುವಂತೆ ಆದೇಶ ನೀಡಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).
‘ರಾಮ ಎಲ್ಲರ ದೇವರು’; ಆಹ್ವಾನ ಸಿಗದಿರುವ ಬಗ್ಗೆ ಕವಿತಾ ಅಸಮಾಧಾನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + nine =
Remember me
