ನವದೆಹಲಿ:ವಿಶ್ವದಲ್ಲೇ ಅತ್ಯಂತ ಉದ್ದ ತಲೆಗೂದಲು ಹೊಂದಿದ ಹುಡುಗಿ ಎಂಬ ಗಿನ್ನೆಸ್​ ದಾಖಲೆಯನ್ನು ಭಾರತೀಯ ಮೂಲದ ನೀಲಂಶಿ ಪಟೇಲ್(17) ಕಳೆದ ಹತ್ತು ವರ್ಷಷದಿಂದ ತನ್ನ ಹೆಸರಿಗೆ ಉಳಿಸಿಕೊಂಡಿದ್ದಾಳೆ.
ಗುಜರಾತಿನ ಮೊಡಸಾ ನಗರದ ನಿವಾಸಿಯಾಗಿರುವ ನೀಲಂಶಿ ಪಟೇಲ್ ತನ್ನ ಹೆಸರಿನಲ್ಲಿ ಇದ್ದ ಗಿನ್ನೆಸ್ ದಾಖಲೆಯನ್ನು ಮುರಿದ್ದಾರೆ. ಡಿಸೆಂಬರ್​ 2018ರಲ್ಲಿ 5 ಅಡಿ 6 ಇಂಚಿನ ಮೂಲಕ ದಾಖಲೆ ಬರೆದಿದ್ದರು. ಇದೀಗ 6 ಅಡಿ 2 ಇಂಚಿನ ಮೂಲಕ ಹಿಂದಿನ ತಮ್ಮ ದಾಖಲೆಯನ್ನೇ ಮುರಿದಿದ್ದಾರೆ.
ಈ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿರುವ ನೀಲಂಶಿ ತಂದೆ, ಮಗಳ ನೀಳವಾದ ಕೂದಲೇ ಆಕೆಯನ್ನು ಸ್ಥಳೀಯ ಸೆಲಿಬ್ರಿಟಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸುವಂತೆ ಮಾಡಿದೆ ಎಂದಿದ್ದಾರೆ.
ನೀಲಂಶಿಯನ್ನು ಶಾಲಾ ಸಹಪಾಠಿಗಳು ‘ರಪಂಜೆಲ್​'( ಬಾಲಿವುಡ್​ನ ಟ್ಯಾಂಗಲ್ಡ್​ ಚಿತ್ರದ ಪಾತ್ರದ ಹೆಸರು) ಹೆಸರಿನಿಂದ ಕರೆಯುತ್ತಾರೆ. ಹೇರ್​ ಸಲೂನ್​ನಲ್ಲಿ ಎದುರಿಸಿದ ಕಹಿ ಅನುಭವದ ಬಳಿಕ ಅಂದರೆ 11 ವರ್ಷದಿಂದ ನೀಲಂಶಿ ಕೂದಲಿಗೆ ಕತ್ತರಿ ಹಾಕಿಲ್ಲ.
ಘಟನೆ ಬಗ್ಗೆ ವಿವರಿಸಿರುವ ನೀಲಂಶಿ, ಆರು ವರ್ಷದವಳಿದ್ದಾಗ ಸ್ಥಳೀಯ ಸಲೂನ್​ನಲ್ಲಿ ನಾನು ತುಂಬಾ ಕೆಟ್ಟ ಪರಿಸ್ಥಿತಿಯನ್ನು ಎದುರಿಸಿದೆ. ಅಂದಿನಿಂದ ನನ್ನ ಕೂದಲು ಬಗ್ಗೆ ನಾನು ತುಂಬಾ ಅರಿತುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಎಲ್ಲ ಹುಡುಗಿಯರ ತರ ನಾನು ಪ್ರತಿ ವಾರ ನನ್ನ ಕೂದಲನ್ನು ಶುಚಿಗೊಳಿಸುತ್ತೇನೆ. ವಾರಕ್ಕೆ ಎರಡು ಬಾರಿ ಎಣ್ಣೆಯನ್ನು ಬಳಸುತ್ತೇನೆ. ಬಿಸಿಲು ಅಥವಾ ಹೇರ್​ಡ್ರೈಯರ್​ ನಿಂದ ಕೂದಲನ್ನು ಒಣಗಿಸುತ್ತೇನೆ. ಆಟವಾಡುವಾಗ ನನ್ನ ಕೂದಲನ್ನು ಬನ್​ ಮಾದರಿಯಲ್ಲಿ ಕಟ್ಟಿಕೊಳ್ಳುತ್ತೇನೆ. ಆದರೆ, ಸ್ವಿಮ್ಮಿಂಗ್​ ಮಾಡುವಾಗ ತುಂಬಾ ತೊಂದರೆ ಕೊಡುತ್ತದೆ ಎಂದು ನೀಲಂಶಿ ಹೇಳಿಕೊಂಡಿದ್ದಾರೆ. ಆಕೆಗೆ ಇಂಜಿನಿಯರ್​ ಆಗಬೇಕೆಂಬ ಕನಸಿದೆ.(ಏಜೆನ್ಸೀಸ್​)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nineteen + ten =
Remember me
