ಬೆಂಗಳೂರು:ಒಂದು ಕಾಲದಲ್ಲಿ ಪ್ರಸ್ತುತ ಎಕ್ಸ್​​ ಎಂದು ಕರೆಯಲ್ಪಡುತ್ತಿರುವ ಟ್ವಿಟ್ಟರ್​​ಗೆ ಪ್ರಬಲ ಪ್ರತಿಸ್ಪರ್ಧಿ ಎಂದು ಪರಿಗಣಿಸಲ್ಪಟ್ಟಿದ್ದ ಭಾರತೀಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಕೂ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಸಿದೆ. ಕನ್ನಡಿಗ ಅಪ್ರಮೇಯ ರಾಧಾಕೃಷ್ಣ ನಾಲ್ಕು ವರ್ಷದ ಹಿಂದೆ ಸ್ಥಾಪಿಸಿದ್ದ ಕೂ ಬಹಳ ವೇಗವಾಗಿ ಜನಪ್ರಿಯತೆ ಪಡೆದುಕೊಂಡಿತ್ತು. ಆದರೆ ಈ ಸಾಮಾಜಿಕ ಜಾಲತಾಣ ವೇದಿಕೆಯನ್ನು ಈಗ ಮುಚ್ಚಲಾಗಿದೆ. ಈ ಬಗ್ಗೆ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಮತ್ತು ಸಹ ಸಂಸ್ಥಾಪಕ ಮಯಾಂಕ್ ಬಿಡವಟ್ಕ ಲಿಂಕ್ಡ್​​ಇನ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನು ಓದಿ:ಫ್ರಿಡ್ಜ್, ಕೂಲರ್, ಫ್ಯಾನ್​ ಬಳಿಸಿದ್ದಕ್ಕೆ ಬರೋಬ್ಬರಿ 3.9 ಲಕ್ಷ ರೂ. ವಿದ್ಯುತ್​ ಬಿಲ್​​; ಕುಟುಂಬಸ್ಥರು ಮಾಡಿದ್ದೇನು ಗೊತ್ತಾ?
ಪಾಲುದಾರಿಕೆಯ ಮಾತುಕತೆಗಳ ವಿಫಲತೆ ಮತ್ತು ಹೆಚ್ಚಿನ ತಂತ್ರಜ್ಞಾನದ ವೆಚ್ಚದಿಂದಾಗಿ ಈ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಮುಚ್ಚಲಾಗಿದೆ. ಸಾಮಾಜಿಕ ಮಾಧ್ಯಮ, AI, ಬಾಹ್ಯಾಕಾಶ ಅಥವಾ EVಗಳಂತಹ ಕ್ಷೇತ್ರಗಳಲ್ಲಿ ಭಾರತದಿಂದ ಮಹತ್ವಾಕಾಂಕ್ಷೆಯ, ವಿಶ್ವದರ್ಜೆಯ ಉತ್ಪನ್ನಗಳನ್ನು ನಿರ್ಮಿಸಲು ತಾಳ್ಮೆ, ದೀರ್ಘಾವಧಿಯ ಬಂಡವಾಳದ ಅಗತ್ಯವಿದೆ. ಜಾಗತಿಕ ದೈತ್ಯರೊಂದಿಗೆ ಸ್ಪರ್ಧಿಸುವಾಗ, ಈ ಉದ್ಯಮಗಳು ತಮ್ಮ ಬೆಳವಣಿಗೆ ಮತ್ತು ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಒಂದು ಕಾರ್ಯತಂತ್ರದ ವಿಧಾನದ ಏರಿಳಿತದ ಮೇಲೆ ಅವಲಂಬಿತರಾಗಿರುವುದಿಲ್ಲ.ಕೂ ನಂತಹ ಯೋಜನೆಗಳು ದೀರ್ಘಾವಧಿಯ ಹೂಡಿಕೆಗಳಾಗಿದ್ದು, ತ್ವರಿತ ಲಾಭವನ್ನು ನಿರೀಕ್ಷಿಸಬಾರದು ಎಂದು ರಾಧಾಕೃಷ್ಣ ತಿಳಿಸಿದ್ದಾರೆ.‘
ಇದರ ಜತೆಗೆ ಕಂಪನಿಯ ಕೆಲವು ಆಸ್ತಿಗಳನ್ನು ಮಾರಾಟ ಮಾಡುವ ಇಚ್ಛೆಯನ್ನು ಸಹ ಸಂಸ್ಥಾಪಕರು ವ್ಯಕ್ತಪಡಿಸಿದ್ದಾರೆ. ಅವರು ಬರೆದಿರುವ ಸುದೀರ್ಘ ಟಿಪ್ಪಣಿಯಲ್ಲಿ, ಭಾರತೀಯ ಸಾಮಾಜಿಕ ಮಾಧ್ಯಮದಲ್ಲಿ ಏನನ್ನಾದರೂ ಮಾಡಲು ಯೋಚಿಸುತ್ತಿರುವ ಜನರೊಂದಿಗೆ ಈ ಆಸ್ತಿಗಳನ್ನು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ ಎಂದು ಹೇಳಿದ್ದಾರೆ.
ಕಂಪನಿಯು ಏಪ್ರಿಲ್ 2023ರಿಂದಲೇ ಉದ್ಯೋಗಿಗಳನ್ನು ಕಡಿಮೆ ಮಾಡಲು ಪ್ರಾರಂಭಿಸಿತ್ತು. ಇದಕ್ಕೂ ಮೊದಲು ಕೂವಿನ ದೈನಂದಿನ ಸಕ್ರಿಯ ಬಳಕೆದಾರರ ಸಂಖ್ಯೆ 21 ಲಕ್ಷ ತಲುಪಿದ ಸಮಯವಿತ್ತು. ಅಷ್ಟೇ ಅಲ್ಲ, ಕಂಪನಿಯ ಮಾಸಿಕ ಸಕ್ರಿಯ ಬಳಕೆದಾರರ ಸಂಖ್ಯೆ 1 ಕೋಟಿ ತಲುಪಿತ್ತು. ಈ ವೇದಿಕೆಯಲ್ಲಿ 9 ಸಾವಿರ ವಿಐಪಿ ಜನರು ಖಾತೆಗಳನ್ನು ಹೊಂದಿದ್ದರು.
ಕಲ್ಕಿ 2898 AD ವೀಕ್ಷಿಸಿದ ದೀಪ್ವೀರ್ ದಂಪತಿ; ಸಿನಿಮಾ ಬಗ್ಗೆ ರಣವೀರ್​ ಸಿಂಗ್​​ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − nineteen =
Remember me
