ನವದೆಹಲಿ:ಪಶ್ಚಿಮದಲ್ಲಿ ಪಾಕಿಸ್ತಾನ ಮತ್ತು ಪೂರ್ವದಲ್ಲಿ ಚೀನಾ ಕಾಲು ಕೆರೆದು ಜಗಳ ತೆಗೆದು ಭಾರತಕ್ಕೆ ತೊಂದರೆ ಕೊಡುತ್ತಿವೆ ಎಂಬ ಸಂಗತಿ ಗೊತ್ತಿದೆ. ಆದರೆ, ಇದಾವುದಪ್ಪಾ ಹೊಸದು ಕಂಟಿಂಜೆನ್ಸಿ 3? ಇದು ಯಾವ ದೇಶ ಎಂದೆಲ್ಲ ತಲೆ ಕಡೆಸಿಕೊಳ್ಳಬೇಡಿ. ಏಕೆ ಎಂಬುದಕ್ಕೆ ಇಲ್ಲಿದೆ ವಿವರಣೆ ನೋಡಿ.
ಕಂಟಿಂಜೆನ್ಸಿ 1 ಎಂದರೆ ಪಾಕಿಸ್ತಾನ. ಕಂಟಿಂಜೆನ್ಸಿ 2 ಎಂದರೆ ಚೀನಾ. ಪಾಕಿಸ್ತಾನ ಮತ್ತು ಚೀನಾಗಳು ಒಗ್ಗೂಡಿದರೆ ಅದುವೇ ಕಂಟಿಂಜೆನ್ಸಿ 3. ಇದೀಗ ಲಡಾಖ್​ ಪ್ರದೇಶದಲ್ಲಿ ಚೀನಾ ಭಾರತೀಯ ಯೋಧರ ನಿದ್ದೆಗೆಡಿಸಿದ್ದರೆ, ಕೊಚ್ಚೆಯಲ್ಲಿ ಮೀನು ಹಿಡಿಯುವ ಪ್ರಯತ್ನ ಮಾಡಲು ಪಾಕಿಸ್ತಾನ ಕೂಡ ಪಶ್ಚಿಮ ಭಾಗದಿಂದ ಭಾರತದ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿದೆ. ತನ್ಮೂಲಕ ಚೀನಾಕ್ಕೆ ಪರೋಕ್ಷ ಬೆಂಬಲ ನೀಡಲು ಯತ್ನಿಸುತ್ತಿದೆ. ಇದನ್ನು ವಿಫಲಗೊಳಿಸುವ ಉದ್ದೇಶದಿಂದ ಭಾರತೀಯ ಸೇನಾಪಡೆ ಯೋಧರು ತುಂಬಾ ಎಚ್ಚರಿಕೆಯಿಂದ ಗಡಿ ಕಾವಲಿನಲ್ಲಿ ತೊಡಗಿದ್ದಾರೆ.
ರಕ್ಷಣಾ ವಿಷಯದಲ್ಲಿನ ಸಂಸತ್​ನ ಸ್ಥಾಯಿ ಸಮಿತಿ ಕಳೆದೊಂದು ದಶಕದ ಹಿಂದೆಯೇ ಚೀನಾ ಮತ್ತು ಪಾಕಿಸ್ತಾನ ಒಟ್ಟಾಗಿ ಭಾರತದ ಮೇಲೆ ಮುಗಿಬೀಳುವ ಸಾಧ್ಯತೆ ಕುರಿತು ತನ್ನ ವರದಿಯಲ್ಲಿ ಪ್ರಸ್ತಾಪಿಸಿತ್ತು. 2014ರಲ್ಲಿ ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿಯೊಬ್ಬರು ಚೀನಾದವರು ಏನಾದರೂ ದಾಳಿ ಆರಂಭಿಸಿದರೆ, ಅದಕ್ಕೆ ಪೂರಕವಾಗಿ ಪಾಕಿಸ್ತಾನ ಕೂಡ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಸ್ಥಾಯಿ ಸಮಿತಿ ಸದಸ್ಯರಿಗೆ ತಿಳಿಸಿದ್ದರು. ಒಂದು ವೇಳೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧವಾದರೆ ಚೀನಾ ಭಾರತದ ಮೇಲೆ ದಾಳಿ ಮಾಡದೆ ದೂರವುಳಿಯುವ ಸಾಧ್ಯತೆ ಇದೆ ಎಂದೂ ಅವರು ಹೇಳಿದ್ದರು.
ಇದನ್ನೂ ಓದಿ:ಅಧ್ಯಕ್ಷನಾಗಿ ಆಯ್ಕೆಯಾದರೆ ಭಾರತದೊಂದಿಗಿನ ಸಂಬಂಧ ಇನ್ನೊಂದು ಸ್ತರಕ್ಕೆ
ಲಡಾಖ್​ ಹಾಗೂ ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿನ ಮಿಲಿಟರಿ ವಿದ್ಯಮಾನವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ಅಧಿಕಾರಿಗಳು, ಭಾರತದ ಮೇಲೆ ಎರಡು ದಿಕ್ಕಿನಿಂದ ದಾಳಿಯಾಗಿ ಯುದ್ಧ ಸಂಭವಿಸುವ ಸಾಧ್ಯತೆ ತುಂಬಾ ಕಡಿಮೆ. ಹಾಗೆಂದು ನಾವು ಸುಮ್ಮನೇ ಕೂರುವಂತಿಲ್ಲ. ಯಾವುದೇ ರೀತಿಯ ತೊಂದರೆಗಳು ಬಂದಲ್ಲಿ ಅವನ್ನು ಹಿಮ್ಮೆಟ್ಟಿಸಲು ನಾವು ಸದಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅದರಲ್ಲೂ ವಿಶೇಷವಾಗಿ ಪಾಕಿಸ್ತಾನ ಮತ್ತು ಚೀನಾದ ಕಂಟಿಂಜೆನ್ಸಿ 3 ದಾಳಿಯನ್ನು ಹಿಮ್ಮೆಟ್ಟಿಸಲು ಸದಾ ಸನ್ನದ್ಧರಾಗಿರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಭಾರತೀಯ ಸೇನಾಪಡೆ 30 ಸಾವಿರ ಯೋಧರು, ಹಲವು ಮುಂಚೂಣಿ ಟ್ಯಾಂಕ್​ಗಳ ಸ್ಕ್ವಾಡ್ರನ್​ಗಳು, ಹೆಚ್ಚುವರಿಗೆ ಶಸ್ತ್ರಾಸ್ತ್ರಗಳು, ಪರಿಪೂರ್ಣ ಸಜ್ಜಾದ ಯಾಂತ್ರೀಕೃತ ಪದಾತಿ ದಳಗಳನ್ನು ಲಡಾಖ್​ನಲ್ಲಿ ನಿಯೋಜಿಸಲಾಗಿದೆ. ಈ ಪ್ರದೇಶದಲ್ಲಿ ಚೀನಾದ ಮಿಲಿಟರಿ ಉಪಸ್ಥಿತಿಗೆ ಅನುಗುಣವಾಗಿ ಭಾರತೀಯ ಸೇನಾಪಡೆ ಈ ಕ್ರಮವನ್ನು ಕೈಗೊಂಡಿದೆ.
ಚೀನಾಕ್ಕೆ ಮತ್ತೊಂದು ಶಾಕ್‌! ರೈಲ್ವೆ ಇಲಾಖೆಯಿಂದ ಥರ್ಮಲ್ ಕ್ಯಾಮೆರಾ ಟೆಂಡರ್‌ ರದ್ದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
