ದೆಹಲಿ:ಬಹುತೇಕ ಭಾರತೀಯರಿಗೆ ವಿದೇಶ ಪ್ರವಾಸ ಮಾಡುವುದು ಇನ್ನೂ ಕನಸಾಗಿರುವಾಗಲೇ ವಾರಣಾಸಿಯ ಈ ಬೀದಿ ನಾಯಿಯೊಂದು ವಿಸಾವನ್ನು ಪಡೆದು ವಿದೇಶಕ್ಕೆ ಹಾರಲು ಮುಂದಾಗಿದೆ.
ಇದನ್ನೂ ಓದಿ:ಮೃಗೀಯ ವರ್ತನೆ: 13 ವರ್ಷದ ಬಾಲಕನ ಮೇಲೆ ಅತ್ಯಾಚಾರವೆಸಗಿದ ಕಾಮಾಂಧರು
ಉತ್ತರ ಪ್ರದೇಶ ಮೂಲದ ಮೋತಿ ಎಂಬ ನಾಯಿಯು ತನ್ನ ಪಾಸ್‌ಪೋರ್ಟ್ ಪಡೆದಿದ್ದು, ಈ ತಿಂಗಳು ಇಟಲಿಗೆ ತೆರಳಲು ಸಿದ್ಧವಾಗಿದೆ. ಇಟಾಲಿಯನ್ ಲೇಖಕಿ ವೆರಾ ಲಝಾರೆಟ್ಟಿ ಮೋತಿಯನ್ನು ಅಧಿಕೃತವಾಗಿ ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದಾಳೆ. ವೆರಾ ಕಳೆದ ಹತ್ತು ವರ್ಷಗಳಿಂದ ಸಂಶೋಧನಾ ಕಾರ್ಯಕ್ಕಾಗಿ ಭಾರತಕ್ಕೆ ಭೇಟಿ ನೀಡುತ್ತಿದ್ದು, ಈ ನಡುವೆ ಆಕೆ ಮೋತಿಯ ಬಗ್ಗೆ ಒಲವು ಬೆಳೆಸಿಕೊಂಡಿದ್ದಳು. ಅಲ್ಲದೇ, ಬಡ ಜೀವಿಯ ಮೇಲೆ ಸ್ಥಳೀಯರು ಕ್ರೌರ್ಯವನ್ನು ನಡೆಸಿದ್ದು, ಆ ಬೀದಿ ನಾಯಿಯನ್ನು ಆಕೆ ದತ್ತು ಪಡೆಯುವಂತಾಗಿದೆ.
ವೆರಾ, ಈ ಬೀದಿ ನಾಯಿಯನ್ನು ಕರೆದುಕೊಂಡು ಹೋಗಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿದ್ಧತೆ ನಡೆದಿದ್ದು ಇದಕ್ಕಾಗಿ ಪಾಸ್‌ಪೋರ್ಟ್ ಕೂಡ ನೀಡಲಾಗಿದೆ. ಪ್ರಾಣಿಗಳನ್ನು ವಿದೇಶಕ್ಕೆ ಕಳುಹಿಸಲು ವ್ಯಾಕ್ಸಿನೇಷನ್ ಸೇರಿದಂತೆ ಅನೇಕ ದಾಖಲೆಯ ಜತೆಗೆ ಮೋತಿಯ ಹಿಂಭಾಗದಲ್ಲಿ ಮೈಕ್ರೋಚಿಪ್ ಕೂಡ ಅಳವಡಿಸಲಾಗಿದೆ.
ಇದನ್ನೂ ಓದಿ:VIDEO | ಸುಮ್ಮನೆ ಹೊರಟಿದ್ದ ವ್ಯಕ್ತಿಯ ಮೇಲೆ ಎರಡೆರಡು ಬಾರಿ ಹರಿದ ಆಂಬುಲೆನ್ಸ್​​​
ಈ ಮೈಕ್ರೊಚಿಪ್ ಅಳವಡಿಕೆಯಿಂದ, ಆ ಪ್ರಾಣಿಯ ಬಗೆಗೆ ಎಲ್ಲಾ ವಿವರಗಳನ್ನು ಪಡೆಯಲು ಅಧಿಕಾರಿಗಳಿಗೆ ಸಹಾಯವಾಗುತ್ತದೆ. ವೆರಾ ಹಾಗೂ ಮೋತಿ ಜುಲೈ 13ರಂದು ದೆಹಲಿಯಿಂದ ಇಟಲಿಗೆ ಹಾರಾಟ ನಡೆಸಲಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
