ಮೆಲ್ಬೋರ್ನ್​:ಆಸ್ಟ್ರೇಲಿಯಾದಲ್ಲಿ 2021ರ ಮಾರ್ಚ್​ ತಿಂಗಳಲ್ಲಿ ನಡೆದಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಜಾ ಮಾಹಿಯೊಂದು ಹೊರಬಿದ್ದಿದೆ. ಪ್ರೀತಿಯನ್ನು ಅರ್ಧಕ್ಕೆ ಕಡಿದುಕೊಂಡ ಸೇಡಿಗೆ ಆಕೆಯ ಮಾಜಿ ಪ್ರಿಯಕರ ಕೇಬಲ್​ ವೈರ್​ಗಳಿಂದ ಕೈ-ಕಾಲುಗಳನ್ನು ಕಟ್ಟಿ ಆಕೆಯನ್ನು ಜೀವಂತ ಸಮಾಧಿ ಮಾಡಿದ್ದಾನೆ ಎಂಬ ಸಂಗತಿ ಹೊರಬಿದ್ದಿದೆ.
ಕೊಲೆಯಾದ ಯುವತಿಯ ಹೆಸರು ಜಾಸ್ಮಿಕ್​ ಕೌರ್ (21)​. ಈಕೆ ನರ್ಸಿಂಗ್​ ವಿದ್ಯಾರ್ಥಿನಿಯಾಗಿದ್ದಳು. ಆಸ್ಟ್ರೇಲಿಯಾದ ಅಡಿಲೇಡ್​ನಲ್ಲಿ ವಾಸವಿದ್ದಳು. ಆಕೆಯನ್ನು ಜೀವಂತ ಸಮಾಧಿ ಮಾಡುವ ಮೂಲಕ ನರಳಿ ನರಳಿ ಸಾಯಿಸಲಾಗಿದೆ. ಇದನ್ನು ಸ್ವತಃ ಆಕೆಯ ಪ್ರಿಯಕರ ಹಾಗೂ ಆರೋಪಿ ತಾರಿಕ್ಜೋತ್ ಸಿಂಗ್ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.
ಇದನ್ನೂ ಓದಿ:ರೇಷ್ಮೆ ಮಾರುಕಟ್ಟೆಯಲ್ಲಿ ಸ್ವಚ್ಛತೆ ಮಾಯ ಅನೈರ್ಮಲ್ಯ ತಾಂಡವ ನೂರಾರು ಮಂದಿ ಬರುವ ಜಾಗದಲ್ಲಿ ಸಮಸ್ಯೆಗಳೇ ಹೆಚ್ಚು
ಜಾಸ್ಮಿನ್​ ಕೌರ್​ನನ್ನು ಆಕೆಯ ಮಾಜಿ ಪ್ರಿಯಕರ 2021ರ ಮಾರ್ಚ್​ 5ರಂದು ಹಿಂಬಾಲಿಸಿ, ಕೆಲಸ ಮಾಡುವ ಸ್ಥಳದಿಂದ ಅಪಹರಿಸಿದ್ದ. ಆಕೆಯ ಕೈಕಾಲುಗಳನ್ನು ಕೇಬಲ್​ ವೈರ್​ಗಳಿಂದ ಕಟ್ಟಿ, ಸ್ನೇಹಿತನ ಕಾರಿನಲ್ಲಿ ಆಕೆಯನ್ನು ಸುಮಾರು 650 ಕಿ.ಮೀ ದೂರ ಕರೆದೊಯ್ದಿದ್ದ. ಬಳಿಕ ಆಕೆಯ ಗಂಟಲಿನ ಮೇಲ್ಭಾಗವನ್ನು ಮಾತ್ರ ಕೊಯ್ದಿದ್ದ. ಆಕೆ ಸಾಯುವಷ್ಟು ಆಳವಾಗಿ ಕೊಯ್ದಿರಲಿಲ್ಲ. ನಂತರ ಆಕೆಯನ್ನು ಜೀವಂತವಾಗಿಯೇ ಆಳವಿಲ್ಲದ ಸಮಾಧಿಯಲ್ಲಿ ಹೂತ್ತಿದ್ದ.
ಬುಧವಾರ (ಜು.5) ತಾರಿಕ್ಜೋತ್ ವಿರುದ್ಧ ಆಸ್ಟ್ರೇಲಿಯಾದ ಸುಪ್ರೀಂಕೋರ್ಟ್‌ನಲ್ಲಿ ಶಿಕ್ಷೆಯ ಸಲ್ಲಿಕೆ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಪ್ರಾಸಿಕ್ಯೂಟರ್​ ಕಾರ್ಮೆನ್ ಮ್ಯಾಟಿಯೊ ಮಾತನಾಡಿ, ಈ ಹತ್ಯೆ ನಿಜಕ್ಕೂ ಭಯಾನಕವಾಗಿದೆ. ಜೀವಂತ ಸಮಾಧಿಯಾದ ಕೌರ್​, ಉಸಿರಾಡಲು ಆಗದೆ, ಮಣ್ಣನ್ನು ನುಂಗಿ, ದುರಂತ ಸಾವಿಗೀಡಾಗಿದ್ದಾಳೆ ಎಂದು ತಿಳಿಸಿದರು.
ಕೌರ್​ ಮೇಲೆ ಅತೀವ ಆಸೆಯನ್ನು ಹೊಂದಿದ್ದ ತಾರಿಕ್ಜೋತ್​ಗೆ ಮದುವೆ ಆಗುವ ಬಯಕೆ ಇತ್ತು ಎಂದು ಸಂತ್ರಸ್ತೆಯ ತಾಯಿ ತಿಳಿಸಿದ್ದಾರೆ. ಪ್ರೀತಿಗೆ ನಿರಾಕರಿಸಿದ ಸೇಡಿಗೆ ಈ ಕೃತ್ಯವನ್ನು ಎಸಗಿದ್ದಾನೆ. ಕೌರ್​ ಕೊಲ್ಲುವ ಕೆಲವೇ ಗಂಟೆಗಳಿಗೂ ಮುನ್ನ ತಾರಿಕ್ಜೋತ್, ಗ್ಲೌಸ್​, ಕೇಬಲ್​ ವೈರ್​ ಮತ್ತು ಹಳ್ಳ ತೆಗೆಯುವ ಸಾಧನವನ್ನು ಹಾರ್ಡ್​ವೇರ್​ ಸ್ಟೋರ್​ ಒಂದರಿಂದ ಖರೀದಿ ಮಾಡಿದ್ದ. ಆಕೆ ಸಂಬಂಧವನ್ನು ಕಡಿದುಕೊಂಡ ಬಳಿಕ ಅದರಿಂದ ಹೊರಬರಲಾಗದೇ ಆಕೆಯನ್ನು ಕೊಂದಿದ್ದಾನೆ ಎಂದು ಕೋರ್ಟ್​ ವಿಚಾರಣೆ ವೇಳೆ ತಿಳಿದುಬಂದಿದೆ.
ಇದನ್ನೂ ಓದಿ:ಅನ್ಯ ಧರ್ಮದ ಪ್ರಾರ್ಥನೆ ಓದುವಂತೆ ಶಾಲಾ ಮಕ್ಕಳಿಗೆ ಒತ್ತಾಯ: ಪ್ರಾಂಶುಪಾಲನಿಗೆ ಮನಬಂದಂತೆ ಥಳಿಸಿದ ಜನ
ಇನ್ನು ಆಸ್ಟ್ರೇಲಿಯಾದಲ್ಲಿ ಕೊಲೆ ಪ್ರಕರಣಕ್ಕೆ ಪೆರೋಲ್​ ರಹಿತ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗುತ್ತದೆ.(ಏಜೆನ್ಸೀಸ್​)
ವರ್ಗಾವಣೆ ದಂಧೆ ಆರೋಪ; ಮಾಜಿ ಸಿಎಂ ಎಚ್​.ಡಿ.ಕೆ-ಸಚಿವ ಜಾರ್ಜ್​ ನಡುವೆ ಮಾತಿನ ಚಕಮಕಿ

https://www.vijayavani.net/mandya-ksrtc-driver-case-created-a-ruckus-in-the-assembly
VIDEO| ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಪ್ರಾಣಸಂಕಟಕ್ಕೆ ಸಿಲುಕಿದ ಸ್ನೇಹಿತರು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − ten =
Remember me
