ಉತ್ತರಪ್ರದೇಶ:ಯುವತಿಯರಿಗೆ ಉದ್ದವಾದ ಕೂದಲು ಇದ್ದರೆ ಅವರ ಸೌಂದರ್ಯಕ್ಕೆ ಇನಷ್ಟು ಮೆರಗು ತಂದುಕೊಡುತ್ತದೆ ಎನ್ನುವುದು ಗೊತ್ತಿರುವ ವಿಚಾರವಾಗಿದೆ. ಆದರೆ ಇಲ್ಲೊಬ್ಬ ಬಾಲಕ ತನ್ನ ಕೂದಲಿನ ಮೂಲಕವಾಗಿ ವಿಶ್ವ ದಾಖಲೆ ಮಾಡುವ ಮೂಲಕವಾಗಿ ಸುದ್ದಿಯಲ್ಲಿದ್ದಾನೆ.
15 ವರ್ಷ ವಯಸ್ಸಿನ ಹುಡುಗ ವಿಶ್ವದಲ್ಲಿ ಅತೀ ಉದ್ದದ ಕೂದಲಿನ ಮೂಲಕವಾಗಿ ವಿಶ್ವ ದಾಖಲೆಯಲ್ಲಿ ಸೇರ್ಪಡೆಯಾಗಿದೆ. ಈತನ ಹೆಸರು ಸಿಡಾಕ್‌. ಕೂದಲು ಬರೋಬ್ಬರಿ 146 ಸೆಂ.ಮೀ (4 ಅಡಿ 9.5 ಇಂಚು) ಉದ್ದವಿದೆ. ಅತಿ ಉದ್ದದ ಕೂದಲಿರುವ ಹುಡುಗ ಎಂದು ಈತ ಹೆಸರು ಮಾಡಿದ್ದಾನೆ. ಮಾತ್ರವಲ್ಲ ವರ್ಲ್ಡ್‌ ರೆಕಾರ್ಡ್‌ನಲ್ಲಿ ಈತನ ಹೆಸರು ದಾಖಲಾಗಿದೆ.
ಸಿಡಾಕ್ ಮಾತನಾಡಿ, ನನ್ನ ಕೂದಲನ್ನು ವಾರಕ್ಕೆ ಎರಡು ಬಾರಿ ತೊಳೆಯುತ್ತೇನೆ. ಪ್ರತಿ ಬಾರಿ ಕನಿಷ್ಠ ಒಂದು ಗಂಟೆಯನ್ನು ತೊಳೆಯಲು ಮತ್ತು ಒಣಗಿಸಲು ಮೀಸಲಿಡುತ್ತೇನೆ. ನನ್ನ ತಾಯಿಯ ಸಹಾಯವಿಲ್ಲದಿದ್ದರೆ ಕೂದಲುತೊಳೆಯಲು ಇಡೀ ದಿನ ಬೇಕಾಗುತ್ತದೆ’ ಎಂದು ಹೇಳುತ್ತಾನೆ.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ 2024 ಪುಸ್ತಕದಲ್ಲಿ ಸಿಡಾಕ್ ಹೆಸರು ಸೇರ್ಪಡೆಯಾಗಲಿದೆ. longest hair on a male teenager ಹದಿಹರೆಯದವರಲ್ಲಿ ಇದುವರೆಗೆ ಉದ್ದನೆಯ ಕೂದಲು ಬೆಳೆಸಿದವರು ಭಾರತೀಯ ನೀಲಾಂಶಿ ಪಟೇಲ್. ಇದು 200 ಸೆಂ (6 ಅಡಿ 6 ಇಂಚು) ಆಗಿತ್ತು. ಅವಳು ಅಂತಿಮವಾಗಿ 2021ರಲ್ಲಿ ತನ್ನ ಕೂದಲನ್ನು ಕತ್ತರಿಸಿ, ಅದನ್ನು ವಸ್ತುಸಂಗ್ರಹಾಲಯಕ್ಕೆ ದಾನ ಮಾಡಿದಳು. ಜೀವಂತ ಮನುಷ್ಯನ ಮೇಲೆ ಉದ್ದನೆಯ ಕೂದಲಿನ ದಾಖಲೆಗೆ ಪ್ರಸ್ತುತ ಯಾವುದೇ ಹೋಲ್ಡರ್ ಇಲ್ಲ.ಸಿಡಾಕ್ ಅವರು 18 ವರ್ಷ ತುಂಬಿದ ನಂತರ ಪ್ರಶಸ್ತಿಯನ್ನು ಪಡೆಯಬೇಕಾಗಿದೆ.
ಸಿಡಾಕ್ ತನ್ನ ಕೂದಲನ್ನು ಒಂದು ನಂಬಿಕೆಯ ಆಧಾರದ ಮೇಲೆ ಬೆಳೆಸುತ್ತಿದ್ದಾನೆ. ಏಕೆಂದರೆ ಅವನು ಸಿಖ್. ಧರ್ಮದ ಮೂಲ ತತ್ವಗಳಲ್ಲಿ ಒಂದಾದ ಕೂದಲನ್ನು ಎಂದಿಗೂ ಕತ್ತರಿಸಬಾರದು. ಏಕೆಂದರೆ ಅದು ದೇವರ ಕೊಡುಗೆಯಾಗಿದೆ ಎಂಬ ಮಾತನ್ನು ನಂಬುತ್ತಾನೆ. ಹೀಗಾಗಿ ಇವರು ಇಷ್ಟು ಉದ್ದ ಕೂದಲು ಬಿಡಲು ಸಾಧ್ಯವಾಗಿದೆ.
ಇದು ಇಂಡಿಯಾ ಮೈತ್ರಿ ಅಲ್ಲ, ಇದು ‘ಘಮಾಂಡಿ’ ಮೈತ್ರಿ: ಪ್ರಹ್ಲಾದ್ ಜೋಶಿ ವಾಗ್ದಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + ten =
Remember me
