ನವದೆಹಲಿ:ಭಾರತೀಯ ಆಟಿಕೆಗಳಾದಂತಹ ಬುಗುರಿ ಮತ್ತು ಕ್ಯಾಟರ್​ಬಿಲ್ಲು ಮಕ್ಕಳಿಗೆ ಗುರುತ್ವಾಕರ್ಷಣ ಶಕ್ತಿ ಮುಂತಾದ ವಿಜ್ಞಾನ ವಿಚಾರಗಳನ್ನು ಸುಲಭವಾಗಿ ಅರ್ಥಮಾಡಿಸುತ್ತವೆ. ಹುಟ್ಟಿದ ಮಗುವಿನ ಕೈಗೆ ನೀಡುವ ರಾಟಲ್ ಮಗುವಿನ ದೃಷ್ಟಿ ಮತ್ತು ಶಬ್ದಜ್ಞಾನಗಳ ವಿಕಾಸಕ್ಕೆ ಇಂಬು ನೀಡುತ್ತದೆ. ಹೀಗೆ ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಆಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಸೃಜನಶೀಲತೆಯನ್ನು ಹೆಚ್ಚಿಸುವ ಆಟಿಕೆಗಳನ್ನು ತಯಾರಿಸುವಲ್ಲಿ ನಾವೀನ್ಯತೆ ಮತ್ತು ಸ್ಪರ್ಧಾತ್ಮಕತೆ ಬಳಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
‘ವೋಕಲ್ ಫಾರ್ ಲೋಕಲ್ ಟಾಯ್ಸ್​’ ಎಂಬ ಧ್ಯೇಯ ವಾಕ್ಯದೊಂದಿಗೆ ದೇಶದ ಮೊಟ್ಟಮೊದಲ ರಾಷ್ಟ್ರ ಮಟ್ಟದ ಆಟಿಕೆ ಮೇಳವಾದ “ದ ಇಂಡಿಯಾ ಟಾಯ್ ಫೇರ್ 2021″ ಅನ್ನು ಇಂದು ಬೆಳಿಗ್ಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿ ಮೋದಿ ಮಾತನಾಡುತ್ತಿದ್ದರು. ಈ ವರ್ಚುವಲ್ ಆಟಿಕೆ ಮೇಳವು ಮಾರ್ಚ್ 2 ರವರೆಗೆ ನಡೆಯಲಿದ್ದು, ಸುಮಾರು ಒಂದು ಸಾವಿರ ಭಾರತೀಯ ಉತ್ಪಾದಕರ ಆಟಿಕೆಗಳನ್ನು ನೋಡುವ, ಖರೀದಿಸುವ ಸುವರ್ಣ ಅವಕಾಶ ಇದಾಗಿದೆ.
ಇದನ್ನೂ ಓದಿ:ಮಾರ್ಚ್​ 1 ರಿಂದ 60 ವರ್ಷ ಮೇಲ್ಪಟ್ಟವರಿಗೆ, ಆಯ್ದ 45 ಮೇಲ್ಪಟ್ಟವರಿಗೆ ಕರೊನಾ ಲಸಿಕೆ ಲಭ್ಯ
ಸಿಂಧು ಕಣಿವೆ ಮತ್ತು ಮೊಹೆಂಜೋದಾರೊ ಆಟಿಕೆಗಳ ಬಗ್ಗೆ ಜನರು ಸಂಶೋಧನೆ ನಡೆಸಿದ್ದಾರೆ. ಭಾರತೀಯ ಚೆಸ್ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಈ ರೀತಿಯಾದ ಪರಂಪರೆ ಹೊಂದಿರುವ ನಮ್ಮ ದೇಶದ ಆಟಿಕೆ ಉದ್ಯಮದಲ್ಲಿ ತುಂಬಾ ಶಕ್ತಿ ಅಡಗಿದೆ. ಈ ಶಕ್ತಿಯನ್ನು ಹೆಚ್ಚಿಸಿ, ಅದಕ್ಕೆ ಸೂಕ್ತ ಸ್ಥಾನ ಕಲ್ಪಿಸುವುದು ಆತ್ಮನಿರ್ಭರ ಭಾರತ ಅಭಿಯಾನದ ಭಾಗವಾಗಿದೆ. ಸ್ಥಳೀಯ ಉತ್ಪಾದನೆ ಹೆಚ್ಚಬೇಕಾದ ಅಗತ್ಯ ಇರುವ 24 ಪ್ರಮುಖ ಕ್ಷೇತ್ರಗಳಲ್ಲಿ ಆಟಿಕೆ ಉದ್ಯಮವೂ ಒಂದು. ಅದಕ್ಕಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ಆಟಿಕೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ ಎಂದು ವಿವರಿಸಿದ ಮೋದಿ, ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳಿಗೆ ಬೇಡಿಕೆ ಇರುವಂತೆಯೇ ‘ಹ್ಯಾಂಡ್​ಮೇಡ್​ ಇನ್ ಇಂಡಿಯಾ’ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಎಷ್ಟೋ ಸ್ಥಳೀಯ ಆಟಿಕೆಗಳನ್ನು ವಿದೇಶದಲ್ಲಿ ಜನಪ್ರಿಯಗೊಳಿಸಬಹುದು ಎಂದು ಆಟಿಕೆ ಉದ್ಯಮಿಗಳಿಗೆ ಮೋದಿ ಸ್ಫೂರ್ತಿ ತುಂಬಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕದ ಚನ್ನಪಟ್ಟಣ ಟಾಯ್ ಕ್ಲಸ್ಟರ್ ಸೇರಿದಂತೆ 11 ರಾಜ್ಯಗಳ ವಿವಿಧ ಟಾಯ್​ ಕ್ಲಸ್ಟರ್​ಗಳಿಂದ ಪ್ರತಿನಿಧಿಗಳಾಗಿ ಭಾಗವಹಿಸಿದ್ದ ಆಟಿಕೆ ತಯಾರಕರು ಪ್ರಧಾನಿಯವರೊಂದಿಗೆ ಸಂವಾದ ನಡೆಸಿದರು. ಪರಿಸರಸ್ನೇಹಿಯಾದ ಆಟಿಕೆಗಳನ್ನು ತಯಾರಿಸಲು ಆಟಿಕೆ ತಯಾರಕರು ಹೆಚ್ಚಿನ ಗಮನ ಹರಿಸಿ. ಆಟಿಕೆಗಳಲ್ಲಿ ಕನಿಷ್ಠ ಮಟ್ಟದಲ್ಲಿ ಪ್ಲಾಸ್ಟಿಕ್ ಬಳಸಿ, ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಹೆಚ್ಚಾಗಿ ಬಳಸಿ ಎಂದು ಮೋದಿ ಆಟಿಕೆ ತಯಾರಕರಿಗೆ ಸಲಹೆ ನೀಡಿದರು.
ಇದನ್ನೂ ಓದಿ:ಪಿಸ್ತೂಲು ಹೇಗೆ ವರ್ಕ್​ ಆಗುತ್ತದೆಯೆಂದು ನೋಡಲು ಸೋದರಳಿಯನಿಗೇ ಗುಂಡಿಟ್ಟ ಮಾವ! ವಿಡಿಯೋ ವೈರಲ್​
ಮಕ್ಕಳಿಗೆ ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸಲು ಇಂಡಿಯಾ ಟಾಯ್ ಫೇರ್ ವಿಶಿಷ್ಟ ಅವಕಾಶವಾಗಿದೆ. ಪಾರಂಪರಿಕ ಆಟಿಕೆ ತಯಾರಿಸುವ ಬಗ್ಗೆ ಕ್ರಾಫ್ಟ್​ ಡೆಮೊ ಪಡೆಯಬಹುದು ಮತ್ತು ಟಾಯ್ ಫ್ಯಾಕ್ಟರಿಗಳಿಗೆ ವರ್ಚುವಲ್ ವಿಸಿಟ್​ ನಡೆಸಬಹುದು. ಈ ವರ್ಚುವಲ್ ಫೇರ್ ನಲ್ಲಿ ಭಾಗವಹಿಸಲು www.theindiatoyfair.in ವೆಬ್​ಸೈಟ್​ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಪಿಎನ್​ಬಿ ಹಗರಣ : ನೀರವ್ ಮೋದಿಯನ್ನು ಭಾರತಕ್ಕೆ ಒಪ್ಪಿಸಲು ಇಂಗ್ಲೆಂಡ್ ಕೋರ್ಟ್ ಅನುಮತಿ
ಪಬ್​ಜಿ ಆಡುವಾಗ ಅರಳಿದ ಪ್ರೀತಿ: ಪ್ರಿಯಕರನನ್ನು ಹುಡುಕಿ ಹೊರಟ ವಿವಾಹಿತೆಗೆ ಕಾದಿತ್ತು ಬಿಗ್​ ಶಾಕ್​!


ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × 5 =
Remember me
