ನವದೆಹಲಿ:ನಾಳೆಯಿಂದ ದೇಶಾದ್ಯಂತ ದೇಶೀಯ ಕರೊನಾ ಲಸಿಕೆಯ ಕ್ಲಿನಿಕಲ್​ ಟ್ರಯಲ್​ (ಮಾನವರ ಮೇಲೆ ಪ್ರಯೋಗ) ನಡೆಯಲಿದೆ.ದೇಶಾದ್ಯಂತ 12 ವೈದ್ಯಕೀಯ ಸಂಸ್ಥೆಗಳನ್ನು ಇದಕ್ಕೆ ಗುರುತಿಸಲಾಗಿದ್ದು, ಆರಂಭದಲ್ಲಿ 375 ಜನರ ಮೇಲೆ ಪ್ರಯೋಗ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಒಂದರ್ಥದಲ್ಲಿ ಲಸಿಕೆ ಅಭಿವೃದ್ಧಿಯಲ್ಲಿ ಇವರ ಪಾತ್ರ ಬಹುಮುಖ್ಯ.
ಅಂತೆಯೇ, ಆಕ್ಸ್​ಫರ್ಡ್​ ವಿವಿ ತಜ್ಞರು ಲಸಿಕೆ ಅಭಿವೃದ್ಧಿ ಪಡಿಸುವಲ್ಲಿ ಜೀವವನ್ನೇ ಪಣಕ್ಕಿಟ್ಟಿದ್ದಾರೆ ಭಾರತೀಯ ಮೂಲದ 42 ವರ್ಷದ ದೀಪಕ್​ ಪಲಿವಾಲ್​. ರಾಜಸ್ಥಾನದ ಜೈಪುರ್​ನವರಾದ ಇವರು ಪತ್ನಿಯೊಂದಿಗೆ ಲಂಡನ್​ನಲ್ಲಿ ನೆಲೆಸಿದ್ದಾರೆ.
ಇದನ್ನೂ ಓದಿ;ಕರೊನಾ ಕವಚ; ಕೋವಿಡ್​ನಿಂದ ಬಚಾವಾಗಲು ಇಲ್ಲಿವೆ ವಿಶೇಷ ವಿಮಾ ಯೋಜನೆಗಳು
ಆಕ್ಸ್​ಫರ್ಡ್​ ವಿವಿ ತಯಾರಿಸುತ್ತಿರುವ ಲಸಿಕೆಗೆ ಇವರು ಪ್ರಯೋಗಾರ್ಥಿಯಾಗಿದ್ದರು. ಕ್ಲಿನಿಕಲ್​ ಟ್ರಯಲ್​ಗೆ ಅಭ್ಯರ್ಥಿಗಳನ್ನು ಹುಡುಕುತ್ತಿದ್ದಾರೆ ಎಂಬುದು ಗೊತ್ತಾದಾಗ ಸ್ವಯಂಪ್ರೇರಿತವಾಗಿ ನೋಂದಾಯಿಸಿಕೊಂಡು ಏಪ್ರಿಲ್​ 26 ರಂದು ಪರೀಕ್ಷೆಗೆ ಹಾಜರಾಗಿದ್ದರು.
ಜಗತ್ತನ್ನೇ ಕಾಡುತ್ತಿರುವ ಮಹಾಮಾರಿ ವಿರುದ್ಧ ಹೋರಾಟಕ್ಕೆ ಕೊಡುಗೆ ನೀಡಬೇಕೆಮದು ಬಯಸಿದ್ದೆ. ನನ್ನ ಮಿದುಳಂತೂ ಈ ಕಾರ್ಯದಲ್ಲಿ ಪ್ರಯೋಜನಕ್ಕೆ ಬಾರದಿದ್ದರೂ ದೇಹವನ್ನು ಬಳಸಬಹುದು ಎಂಬ ಯೋಚನೆ ಬಂತು. ಕೂಡಲೇ ಕ್ಲಿನಿಕಲ್​ ಟ್ರಯಲ್​ಗೆ ಒಪ್ಪಿಕೊಂಡೆ. ಆದರೆ, ಪತ್ನಿ ಹಾಗೂ ಮನೆಯವರು ಇದಕ್ಕೆ ಒಪ್ಪಿರಲಿಲ್ಲ ಎಂದು ದೀಪಕ್​ ಹೇಳಿದ್ದಾರೆ.
ಇದನ್ನೂ ಓದಿ;ಕರೊನಾ ಸಂಕಷ್ಟದಿಂದ ಕೆಲಸ ಕಳೆದುಕೊಂಡಿದ್ದವನಿಗೆ ಖುಲಾಯಿಸಿದ ಅದೃಷ್ಟ…!
ಲಸಿಕೆ ಅಡ್ಡ ಪರಿಣಾಮ ಬೀರಿದ್ದೇ ಆದಲ್ಲಿ ಅಂಗಾಂಗಗಳು ನಿಷ್ಕ್ರಿಯವಾಗಬಹುದು. ಕೆಲವೊಮ್ಮೆ ಮರಣವೂ ಸಂಭವಿಸಬಹುದು ಎಂದು ಓದಿದ್ದೆ. ಆದರೆ, ಇದ್ಯಾವುದು ನನ್ನ ನಿರ್ಧಾರವನ್ನು ಬದಲಿಸಲಿಲ್ಲ ಎಂದು ದೀಪಕ್​ ಹೇಳುತ್ತಾರೆ.
ಆದರೆ, ಕ್ಲಿನಿಕಲ್​ ಟ್ರಯಲ್​ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ಇವರ ಧೈರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಮುಖ್ಯ ವಿಷಯವೆಂದರೆ, ಆಕ್ಸ್​ಫರ್ಡ್​ ವಿವಿ ತಯಾರಿಸುತ್ತಿರುವ ಲಸಿಕೆ ಯಶಸ್ವಿಯಾದಲ್ಲಿ ಭಾರತಕ್ಕೂ ಇದು ಲಭಿಸಲಿದೆ. ಕಾರಣ ಪುಣೆಯ ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾದೊಂದಿಗೆ ಆಕ್ಸ್​ಫರ್ಡ್​ ವಿವಿಯ ಸಹಭಾಗಿ ಕಂಪನಿ ಆಸ್ಟ್ರಾಜೆನೆಕಾ ಒಪ್ಪಂದ ಮಾಡಿಕೊಂಡಿದೆ. ಮೊದಲ 60 ಡೋಸ್​ಗಳಲ್ಲಿ 20 ಲಕ್ಷ ಡೋಸ್ ಭಾರತದ ಬಳಕೆಗೆ ಸಿಗಲಿದೆ.
ಸೋಮವಾರದಿಂದ ದೇಶದ 12 ಕಡೆಗಳಲ್ಲಿ ಕೋವಿಡ್​ ರೋಗಿಗಳಿಗೆ ದೇಶೀಯ ಕರೊನಾ ಲಸಿಕೆ ಪ್ರಯೋಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
