

ನ್ಯೂಯಾರ್ಕ್​:ಅಮೆರಿಕಗೆ ವಿದ್ಯಾಭ್ಯಾಸಕ್ಕಾಗಿ ತೆರಳಿದ ಭಾರತೀಯ ವಿದ್ಯಾರ್ಥಿನಿ ಕಳೆದ 3 ವರ್ಷಗಳಿಂದ ನಾಪತ್ತೆಯಾಗಿರುವ ಘಟನೆ ನಡೆದಿದ್ದು, ಈಕೆಯನ್ನು ಹುಡುಕಿಕೊಡಿ ಎಂದು ಕುಟುಂಬಸ್ಥರು ಅಮೆರಿಕದ ತನಿಖಾ ಸಂಸ್ಥೆ ಮೊರೆ ಹೋಗಿದ್ದಾರೆ.
28 ವರ್ಷದ ಮಯೂಶಿ ಭಗತ್​​ ಕಾಣೆಯಾದ ಯುವತಿ. 2019 ಏಪ್ರಿಲ್​ 29ರಂದು ಕೊನೇ ಬಾರಿ ಕಾಣಿಸಿಕೊಂಡ ಈಕೆ ಈವರೆಗೆ ಎಲ್ಲಿದ್ದಾರೆ ಎಂಬುದೇ ತಿಳಿದುಬಂದಿಲ್ಲ. ನಾಪತ್ತೆಯಾದ ದಿನದಂದು ನ್ಯೂಯಾರ್ಕ್​ನ ಜೆರ್ಸಿ ಸಿಟಿಯಲ್ಲಿ ಅಪಾರ್ಟ್​ಮೆಂಟ್​ನಿಂದ ಹೊರಹೋದ ಈಕೆ ಈವರೆಗೆ ಪತ್ತೆಯಾಗಿಲ್ಲ.
ಕಲರ್​ಫುಲ್​ ಪೈಜಾಮ ಮತ್ತು ಕಪ್ಪು ಟಿ ಶರ್ಟ್​​ ಧರಿಸಿ ಹೊರಹೋದ ಈಕೆ ನಂತರ ಎಲ್ಲಿಗೆ ಹೋದಳು ಎಂಬುದೇ ಯಾರಿಗೂ ಗೊತ್ತಿಲ್ಲ. ಮೇ 1 2019ರಲ್ಲೇ ಈಕೆ ನಾಪತ್ತೆಯಾಗಿರುವ ಬಗ್ಗೆ ದೂರು ಕೂಡ ದಾಖಲಿಸಲಾಗಿದ್ದು, ಈವರೆಗೂ ಈಕೆಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇದೀಗ ಸ್ವತಃ ಅಮೆರಿಕ ತನಿಖಾ ಸಂಸ್ಥೆಯೇ ಈ ಬಗ್ಗೆ ಮಾಹಿತಿ ನೀಡಿದೆ.
2016ರಲ್ಲಿ ಅಮೆರಿಕಗೆ ಬಂದಿದ್ದ ಮಯೂಶಿ ಭಗತ್​ ಇಲ್ಲಿನ ಹ್ಯಾಂಪ್​ಶೈರ್​ ಮತ್ತು ನ್ಯೂಯಾರ್ಕ್​​ ಇನ್ಸ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿಯಲ್ಲಿ ದಾಖಲಾತಿ ಪಡೆದಿದ್ದರು. ಆ ಬಳಿಕ ಅಲ್ಲಿಯೇ ವಾಸವಿದ್ದರು. ಇದೀಗ ಮೂರು ವರ್ಷಗಳಿಂದ ನಾಪತ್ತೆಯಾಗಿರುವ ಮಗಳನ್ನು ನೆನೆದು ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + twenty =
Remember me
