ದುಬೈ:ಭಾರತದ ಕೇರಳ ಮೂಲದ ಮಹಿಳೆಯೊಬ್ಬಳು ದುಬೈನಲ್ಲಿ ತನ್ನ ಗಂಡನ ಕಾರು ಪಾರ್ಕಿಂಗ್​ಗೆ ಸಹಾಯ ಮಾಡಲು ಹೋಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಆಕಸ್ಮಿಕವಾಗಿ ಆದ ಅಪಘಾತಕ್ಕೆ 45 ವರ್ಷದ ಮಹಿಳೆ ಬಲಿಯಾಗಿದ್ದಾಳೆ.
ಇದನ್ನೂ ಓದಿ:ಮೊಟ್ಟೆ-ಚಿಕನ್ ಬಿಟ್ಟಿದ್ದೀರಾ? ಹಾಗಾದರೆ ಅದಕ್ಕೆ ಪರ್ಯಾಯವೇನು? ಇಲ್ಲಿವೆ ಆಯ್ಕೆಗಳು..
ಲಿಜಿ ಹೆಸರಿನ ಮಹಿಳೆ ತನ್ನ ಗಂಡ ಮತ್ತು ಮಗಳೊಂದಿಗೆ ಅರನ್​ ಸಂಯುಕ್ತ ಸಂಸ್ಥಾನದ ಉಮ್ ಅಲ್ ಕ್ವೈನ್‌ನಲ್ಲಿ ವಾಸವಿದ್ದಾರೆ. ಅವರ ಹಿರಿಯ ಮಗ ಭಾರತದಲ್ಲಿ ಇಂಜಿನಿಯರಿಂಗ್​ ವ್ಯಾಸಂಗ ಮಾಡುತ್ತಿದ್ದಾನೆ. ಲಿಜಿ ದಂಪತಿ ಶನಿವಾರದಂದು ಆರೋಗ್ಯ ಪರಿಶೀಲನೆಗಾಗಿ ಆಸ್ಪತ್ರೆಗೆ ಹೋಗಿದ್ದರು. ಆಸ್ಪತ್ರೆಯಿಂದ ಬಂದ ದಂಪತಿ ಕಾರನ್ನು ಪಾರ್ಕಿಂಗ್​ ಮಾಡಲು ಮುಂದಾಗಿದ್ದಾರೆ. ಕಾರಿನ ಮುಂದೆ ನಿಂತ ಲಿಜಿ ಗಂಡನಿಗೆ ಪಾರ್ಕಿಂಗ್​ ಮಾಡಲು ನಿರ್ದೇಶನ ನೀಡಲಾರಂಭಿಸಿದ್ದಾಳೆ. ಆದರೆ ಈ ವೇಳೆ ಕಾರು ಅಚಾನಕ್ಕಾಗಿ ಮುಂದೆ ಹೋಗಿದ್ದು, ಮುಂದಿದ್ದ ಗೋಡೆಗೆ ಲಿಜಿಯನ್ನು ತಳ್ಳಿಕೊಂಡು ಹೋಗಿದೆ. ಅದರಿಂದಾಗಿ ಆಕೆ ಅಲ್ಲಿಯೇ ಕೊನೆಯುಸಿರೆಳೆದಿದ್ದಾಳೆ.
ಇದನ್ನೂ ಓದಿ:ಮದ್ವೆಗೆ ಬರ್ದಿದ್ರೂ ಉಡುಗೊರೆ ಹಾಕಿ! ಲಗ್ನಪತ್ರಿಕೆಯಲ್ಲೇ ಗೂಗಲ್​ ಪೇ, ಫೋನ್​ ಪೇ ಕ್ಯೂಆರ್​ ಕೋಡ್​
ಲಿಜಿಯ ಸಾವಿನಿಂದಾಗಿ ಅಜ್ಮಾನ್​ನಲ್ಲಿರುವ ಭಾರತೀಯ ಸಮುದಾಯ ಆಘಾತಕ್ಕೊಳಗಾಗಿದೆ. ಅಜ್ಮಾನ್ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಆಕೆಯ ದೇಹವನ್ನು ವಾಪಸ್ಸು ಭಾರತಕ್ಕೆ ಕಳುಹಿಸಿಕೊಡಲು ಭಾರತೀಯ ಸಂಘವು ಕುಟುಂಬವನ್ನು ಬೆಂಬಲಿಸುತ್ತಿದೆ ಎಂದು ತಿಳಿಸಲಾಗಿದೆ. (ಏಜೆನ್ಸೀಸ್​)
ಗರ್ಭಿಣಿಯಾದಾಗ ಎಲ್ಲವೂ ಸರಿಯಾಗುತ್ತದೆ- ಗಾತ್ರದ ಬಗ್ಗೆ ಮುಜುಗರ ಬೇಡ…

ಮದ್ವೆಗೆ ಬರ್ದಿದ್ರೂ ಉಡುಗೊರೆ ಹಾಕಿ! ಲಗ್ನಪತ್ರಿಕೆಯಲ್ಲೇ ಗೂಗಲ್​ ಪೇ, ಫೋನ್​ ಪೇ ಕ್ಯೂಆರ್​ ಕೋಡ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 13 =
Remember me
