ನವದೆಹಲಿ:ಚೀನಾದ ಹ್ಯಾಂಗ್​ಝೌನಲ್ಲಿ ನಡೆಯುತ್ತಿರುವ 19ನೇ ಏಷ್ಯನ್​ ಗೇಮ್ಸ್​ ಕ್ರೀಡಾಕೂಟಕ್ಕೆ ಶನಿವಾರ ಚಾಲನೆ ದೊರೆತಿದ್ದು, ಮೊದಲ ದಿನವೇ ಭಾರತದ ಕ್ರೀಡಾಪಟುಗಳು ಪದಕಗಳ ಬೇಟೆಯಾಡಿದ್ದಾರೆ.
ಪುರುಷರ ಲೈಟ್​ವೇಟ್​ ಡಬಲ್ಸ್​ ಸ್ಕಲ್ ಫೈನಲ್​​ ಪಂದ್ಯದಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿತು. 2021 ರಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಪ್ರವೇಶಿಸಿದ ಅರ್ಜುನ್ ಲಾಲ್, ಅರವಿಂದ್ ಸಿಂಗ್ ಅವರೊಂದಿಗೆ ಶ್ಲಾಘನೀಯ ಪ್ರದರ್ಶನವನ್ನು ನೀಡಿದರು. ಇವರು 6.28.18 ಸಮಯಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು.
ಇದಕ್ಕೂ ಮೊದಲು ಮಹಿಳೆಯರ ತಂಡವು 10 ಮೀಟರ್​ ಏರ್​ರೈಫಲ್​ ಸ್ಫರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದೆ. ಭಾರತದ ಶೂಟರ್​ಗಳಾದ ರಮಿತಾ, ಮೆಹುಲಿ ಘೋಷ್​ ಮತ್ತು ಆಶಿ ಚೌಕ್ಸೆ ಈ ಸಾಧನೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಗೆಲ್ಲುವ ಮೂಲಕ ಭಾರತ ತಂಡ ಐತಿಹಾಸಿಕ ದಾಖಲೆಯನ್ನು ಬರೆಯಿತು.
Indian women's team clinches silver in 10m Air Rifle, secures first medal at 19th Asian GamesRead@ANIStory |https://t.co/PFLbLsiFF9#AsianGames#IndiaAtAG22#Shooting#AsianGames2023pic.twitter.com/WHiexmpowL
ಇದನ್ನೂ ಓದಿ:VIDEO| ಗಣಪತಿ ವಿಸರ್ಜನೆ ಕಾರ್ಯಕ್ರದಲ್ಲಿ ಬಾಯ್​ಫ್ರೆಂಡ್ ಜೊತೆ ಭರ್ಜರಿ ಸ್ಟೆಪ್ಸ್​ ಹಾಕಿದ ಜಾಹ್ನವಿ ಕಪೂರ್
ಭಾರತದ ರೈಫಲ್​ ತಂಡವು 1886 ಅಂಕಗಳಿಸಿ ಬೆಳ್ಳಿ ಪದಕ ಪಡೆದುಕೊಂಡಿತ್ತು. 1896.6 ಅಂಕ ಗಳಿಸುವ ಮೂಲಕ ಚೀನಾ ಚಿನ್ನದ ಪದಕವನ್ನು ಗೆದ್ದು ಬೀಗಿತ್ತು. 1880 ಅಂಕ ಗಳಿಸುವ ಮೂಲಕ ಮಂಗೋಲಿಯಾ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತ್ತು.
ಪುರುಷರ ರೋವಿಂಗ್​ ಸ್ಪರ್ಧೆಯಲ್ಲಿ ಭಾರತದ ಬಾಬು ಲಾಲ್​ಯಾದವ್​ ಹಾಗೂ ಲೆಖ್​ರಾಮ್​ ಜೋಡಿ ಮೂರನೇ ಸ್ಥಾನ ಪಡೆದು ಕಂಚು ಗೆದ್ದುಕೊಂಡಿತ್ತು. ಈ ಜೋಡಿಯು ನಿಗದಿತ ಗುರಿಯನ್ನು 6:50:41 ನಿಮಿಷದಲ್ಲಿ ತಲುಪಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತ್ತು.
#AsianGames2023| Lekh Ram and Babu Lal Yadav clinched India's third medal and second rowing medal in the ongoing Asain Games with a bronze medal finish in the Men's pair finalpic.twitter.com/n42AChX14E
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 3 =
Remember me
