ನವದೆಹಲಿ:ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ವಿಶ್ವ ಕ್ರಿಕೆಟ್​ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿ ಭರ್ಜರಿ ಗೆಲುವಿನ ನಗೆ ಬೀರಿದ ಭಾರತಕ್ಕೆ ಶುಭಾಶಯಗಳ ಸುರಿಮಳೆಯೇ ಆಗುತ್ತಿದೆ.
ದೇಶಾದ್ಯಂತ ಈ ಜಯವನ್ನು ಭಾರತೀಯರು ವಿವಿಧ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ. ಭಾರಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಂಸದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್​ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
#TeamIndiaput up a spectacular all-round performance in today’s#AsiaCup2022match. The team has displayed superb skill and grit. Congratulations to them on the victory.
— Narendra Modi (@narendramodi)August 28, 2022

ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಪಾಕ್​ 19.5 ಓವರ್​ಗಳಲ್ಲಿ 147 ರನ್​ ಗಳಿಸಿ ಸರ್ವಪತನ ಕಂಡಿತು. ಪಾಕ್​ ನೀಡಿದ ಗುರಿ ಬೆನ್ನತ್ತಿದ ಭಾರತ 19.5 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 148 ರನ್​ ಕಲೆ ಹಾಕುವ ಮೂಲಕ ಸುಲಭವಾಗಿ ಗುರಿ ಮುಟ್ಟಿತು.
ಟೀಮ್​ ಇಂಡಿಯಾ ಪರ ಆರಂಭಿಕರಾಗಿ ನಾಯಕ ರೋಹಿತ್​ ಶರ್ಮಾ ಮತ್ತು ಕೆ.ಎಲ್​. ರಾಹುಲ್​ ಕಣಕ್ಕಿಳಿದರು. ಆದರೆ, ರಾಹುಲ್​ ಶೂನ್ಯಕ್ಕೆ ನಿರ್ಗಮಿಸುವ ಮೂಲಕ ಟೀಮ್​ ಇಂಡಿಯಾಗೆ ಆರಂಭಿಕ ಆಘಾತ ನೀಡಿದರು. ಇದರ ಬೆನ್ನಲ್ಲೇ ರೋಹಿತ್​ ಶರ್ಮಾ ಕೇವಲ 12 ರನ್​ ಗಳಿಸಿ ಔಟಾಗಿದ್ದು, ಭಾರತ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು.
ಎರಡನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಇಳಿದ ವಿರಾಟ್​ ಕೊಹ್ಲಿ ಕೆಲ ಹೊತ್ತು ಕ್ರೀಸ್​ನಲ್ಲಿ ನಿಂತು ಅಬ್ಬರಿಸಿದ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದ ಕೊಹ್ಲಿ 35 ರನ್​ ಗಳಿಸಿ ಔಟಾದರು. ಇದರ ಬೆನ್ನಲ್ಲೇ ಸೂರ್ಯಕುಮಾರ್​ ಯಾದವ್​ 18 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ರವೀಂದ್ರ ಜಡೇಜಾ ಮತ್ತು ಹಾರ್ದಿಕ್​ ಪಾಂಡ್ಯ ಉತ್ತಮ ಜೊತೆಯಾಟದ ಮೂಲಕ ಪಂದ್ಯದ ರನ್​ಗೆ ಚೇತರಿಕೆ ನೀಡಿದರು.
ಜಡೇಜಾ 35 ರನ್​ಗೆ ಔಟಾದರೆ, ಹಾರ್ದಿಕ್​ ಪಾಂಡ್ಯ 17 ಎಸೆತಗಳಲ್ಲಿ ಅಜೇಯ 33 ರನ್​ ಕಲೆಹಾಕುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಉಳಿದಂತೆ ದಿನೇಶ್​ ಕಾರ್ತಿಕ್​ 1 ರನ್​ ಗಳಿಸಿ ಅಜೇಯರಾಗಿ ಉಳಿದರು.
ಪಾಕ್​ ಪರ ಮೊಹಮ್ಮದ್​ ನವಾಜ್​ 3 ಹಾಗೂ ನಾಶೀಮ್​ ಶಾ 2 ವಿಕೆಟ್​ ಪಡೆದಿದ್ದನ್ನು ಬಿಟ್ಟರೆ ಉಳಿದ ಯಾವೊಬ್ಬ ಬೌಲರ್​ ಸಹ ಟೀಮ್​ ಇಂಡಿಯಾ ಆಟಗಾರರಿಗೆ ಸವಾಲಾಗಲಿಲ್ಲ.
ಇದಕ್ಕೂ ಮುನ್ನ ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಪಾಕ್​ಗೆ ಆರಂಭದಲ್ಲಿ ಆಘಾತವಾಗಿತ್ತು. ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ನಾಯಕ ಬಾಬರ್​ ಅಜಾಮ್​ ಕೇವಲ 10 ರನ್​ಗೆ ನಿರ್ಗಮಿಸುವ ಮೂಲಕ ಪಾಕ್​ಗೆ ಭಾರಿ ಹೊಡೆತ ನೀಡಿದ್ದರು. ಎರಡನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಫಖರ್​ ಅಹ್ಮದ್​ ಕೂಡ (10) ಭರವಸೆ ಉಳಿಸಿಕೊಳ್ಳಲಿಲ್ಲ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಇಫ್ತಿಕರ್​ ಅಹ್ಮದ್​, ಆರಂಭಿಕ ಆಟಗಾರ ಮೊಹಮ್ಮದ್​ ರಿಜ್ವಾನ್​ಗೆ ಸಾಥ್​ ನೀಡಿ, ಕೆಲ ಕಾಲ ಕ್ರೀಸ್​ನಲ್ಲಿ ಉಳಿದರು.
What a thriller of a match! Well played,#TeamIndia🇮🇳
The beauty of sports is how it inspires and unites the country – with a feeling of great joy & pride.#AsiaCup2022
— Rahul Gandhi (@RahulGandhi)August 28, 2022

ಪಾಕ್​ ತಂಡದ ಮೊತ್ತ 87 ರನ್​ ಆಗಿದ್ದಾಗಿ ಇಫ್ತಿಕರ್ ಅಹ್ಮದ್​​ (28) ನಿರ್ಗಮಿಸಿದರೆ, ಅದರ ಬೆನ್ನಲ್ಲೇ ರಿಜ್ವಾನ್​ (43) ಸಹ ಹಿಂದಿರುಗಿದರು. ತಂಡದ ಮೊತ್ತ 94 ರನ್​ ಇದ್ದಾಗಲೇ ಪಾಕ್​ ತಂಡ ಪ್ರಮುಖ 4 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಉಳಿದಂತೆ, ಖುಷ್ದಿಲ್ ಶಾ (2), ಶಾದಾಬ್ ಖಾನ್ (10), ಆಸಿಫ್ ಅಲಿ (9), ಮೊಹಮ್ಮದ್ ನವಾಜ್ (1) , ನಸೀಮ್ ಶಾ (0) ಪಾಕ್​ ತಂಡಕ್ಕೆ ನೆರವಾಗಲಿಲ್ಲ. ಕೊನೆಯಲ್ಲಿ ಅಬ್ಬರಿಸಿದ ಶಹನವಾಜ್ ದಹಾನಿ 6 ಎಸೆತಗಳಲ್ಲಿ 16 ರನ್​ ಗಳಿಸಿ ತಂಡಕ್ಕೆ ನೆರವಾದರೆ, ಹಾರಿಸ್ ರೌಫ್ 13 ರನ್​ ಗಳಿಸಿ ಅಜೇಯರಾಗಿ ಉಳಿದರು.
ಭಾರತದ ಪರ ಮಿಂಚಿನ ಬೌಲಿಂಗ್​ ದಾಳಿ ಮಾಡಿದ ಭುವನೇಶ್ವರ್​ ಪ್ರಮುಖ 4 ವಿಕೆಟ್​ ಕಬಳಿಸಿದರೆ, ಹಾರ್ದಿಕ್​ ಪಾಂಡ್ಯ 3 ವಿಕೆಟ್​ ಹಾಗೂ ಅರ್ಶದೀಪ್​ ಸಿಂಗ್​ 2 ವಿಕೆಟ್​ ಉರುಳಿಸುವ ಮೂಲಕ ಪಾಕ್ ಆಟಗಾರರನ್ನು ಕಾಡಿದರು. ಅವೇಶ್​ ಖಾನ್​ ಒಂದು ವಿಕೆಟ್​​ಗೆ ತೃಪ್ತಿಪಟ್ಟುಕೊಂಡರು.(ಏಜೆನ್ಸೀಸ್​)
Koo App
Special win on a special day! 🇮🇳
–Virat Kohli (@virat.kohli)29 Aug 2022

Koo App
What a performance Team India 🇮🇳! Many congratulations! #BCCI #AsiaCup #India #HardikPandya
–Wriddhiman Saha (@wriddhi)29 Aug 2022

VIDEO: ಪಾಕ್​ನಲ್ಲಿ ಮಳೆಯ ರುದ್ರ ನರ್ತನ: ಸಾವಿನ ಸಂಖ್ಯೆ 1033ಕ್ಕೆ ಏರಿಕೆ- ಪ್ರವಾಹದ ಭೀಕರ ವಿಡಿಯೋಗಳು ಇಲ್ಲಿವೆ…

ರಾಹುಲ್​ನಂಥ ನಾಯಕನಿಂದ ಪಕ್ಷಕ್ಕೆ ಅವನತಿಯೇ ಗತಿ ಎಂದು ಬೇಸರಿಸುತ್ತಲೇ ಕಾಂಗ್ರೆಸ್​ಗೆ ಮಾಜಿ ಸಂಸದ ಗುಡ್​ಬೈ

ಮನ್​ ಕೀ ಬಾತ್​ನಲ್ಲಿ ಕೋಲಾರದ ಧ್ವಜ ಶ್ಲಾಘಿಸಿದ ಪ್ರಧಾನಿ: ಕಿರುಧಾನ್ಯಗಳ ಮಾಹಿತಿ ಹಂಚಿಕೊಂಡ ಮೋದಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
