ನವದೆಹಲಿ:ದೇಶಾದ್ಯಂತ ಸದ್ಯ ಚೀನಾ ವಿರೋಧ ಮನೋಭಾವ ದಟ್ಟವಾಗಿದೆ. ಅದರಲ್ಲೂ ವಿಶೇಷವಾಗಿ ಜಗತ್ತನ್ನೇ ಬಾಧಿಸುತ್ತಿರುವ ಕರೊನಾ ವೈರಾಣುವಿನ ಉಗಮ ಸ್ಥಾನ ಚೀನಾ ಎಂಬುದರಿಂದ ಹಿಡಿದು ಲಡಾಖ್​ ಪ್ರದೇಶದಲ್ಲಿ ತಲೆದೋರಿರುವ ಬಿಕ್ಕಟ್ಟಿನವರೆಗೆ ಇದಕ್ಕೆ ಕಾರಣವಾಗಿದೆ. ಆದರೆ, ಸುಲಭ ದರದಲ್ಲಿ ಸಿಗುವ ತನ್ನ ಉತ್ಪನ್ನಗಳು ಹಾಗೂ ಆ್ಯಪ್​ಗಳನ್ನು ಬಿಟ್ಟು ಬದಕಲು ಭಾರತೀಯರಿಗೆ ಸಾಧ್ಯವೇ ಇಲ್ಲ ಎಂದು ಚೀನಾ ಹೇಳಿಕೊಂಡಿದೆ.
ಚೀನಾದ ಮುಖವಾಣಿ ಗ್ಲೋಬಲ್​ ಟೈಮ್ಸ್​ನಲ್ಲಿ ಈ ಬಗ್ಗೆ ವರದಿಯಾಗಿದ್ದು, ಚೀನಾ ನಿರ್ಮಿತ ಸ್ಮಾರ್ಟ್​ಫೋನ್​ಗಳು ಮತ್ತು ಮೊಬೈಲ್​ ಆ್ಯಪ್​ಗಳನ್ನು ಬಹಿಷ್ಕರಿಸುವ ಹಿಂದೆ ಭಾರತೀಯ ರಾಷ್ಟ್ರೀಯವಾದಿಗಳ ಕೈವಾಡವಿದೆ. ಚೀನಾದ ಹೆಸರಿಗೆ ಮಸಿ ಬಳಿಯುವ ಜತೆಗೆ ಕಳಂಕ ತರುವ ಹುನ್ನಾರ ಅವರದ್ದಾಗಿದೆ ಎಂದು ಆರೋಪಿಸಲಾಗಿದೆ.
ಭಾರತದಲ್ಲಿ ಸದ್ಯ ಚಾಲ್ತಿಯಲ್ಲಿರುವ ಬೈಕಾಟ್​ ಚೀನಾ (ಚೀನಾವನ್ನು ಬಹಿಷ್ಕರಿಸಿ) ಅಭಿಯಾನ ಖಂಡಿವಾಗಿಯೂ ವಿಫಲವಾಗುತ್ತದೆ. ಚೀನಾ ಉತ್ಪನ್ನಗಳ ಬಗೆಗಿನ ಭಾರತೀಯ ಆಕರ್ಷಣೆ ಮತ್ತು ಪ್ರೀತಿ, ಸೆಳತವನ್ನು ಕಡಿಮೆ ಮಾಡುವುದು ಅಸಾಧ್ಯದ ಮಾತು ಎಂದು ತಿಳಿಸಲಾಗಿದೆ.
ರಾಷ್ಟ್ರಪತಿ ಕೋವಿಂದ, ಪ್ರಧಾನಿ ಮೋದಿಗಾಗಿ ಬರಲಿರುವ ವಿಮಾನಗಳು ಹೇಗಿವೆ ಗೊತ್ತಾ…?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
