ಕಾಠ್ಮಂಡು:ಅಕ್ರಮ ಮಾರ್ಗದಲ್ಲಿ ರಾಷ್ಟ್ರವನ್ನು ಪ್ರವೇಶಿಸುತ್ತಿರುವ ಭಾರತೀಯರಿಂದಾಗಿ ನೇಪಾಳದಲ್ಲಿ ಕರೊನಾ ಸೋಂಕು ಹಬ್ಬುತ್ತಿದೆ ಎಂದು ನೇಪಾಳದ ಪ್ರಧಾನಿ ಕೆ.ಪಿ. ಶರ್ಮ ಓಲಿ ಆರೋಪಿಸಿದ್ದಾರೆ.
ಸ್ಥಳೀಯ ರಾಜಕಾರಣಿಗಳು ಮತ್ತು ಮುಖಂಡರು ಸಮರ್ಪಕವಾದ ತಪಾಸಣೆ ಇಲ್ಲದೆ ಭಾರತೀಯರನ್ನು ನೇಪಾಳದೊಳಕ್ಕೆ ಕರೆತರುತ್ತಿದ್ದಾರೆ. ಇದರಿಂದಾಗಿ ನೇಪಾಳದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ದೂರಿದ್ದಾರೆ.
ಸೋಮವಾರ ಒಂದೇ ದಿನ ನೇಪಾಳದಲ್ಲಿ ಕೋವಿಡ್​-19ರ 79 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಆ ರಾಷ್ಟ್ರದಲ್ಲಿನ ಸೋಂಕಿತರ ಸಂಖ್ಯೆ 682ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ:ಪ್ರಬಲ ಭೂಕಂಪಕ್ಕೂ ಜಗ್ಗಲಿಲ್ಲ ನ್ಯೂಜಿಲೆಂಡ್​ ನ ಈ ಗಟ್ಟಿ ಹೆಣ್ಣುಮಗಳು!
ಕೆಲವೇ ದಿನಗಳ ಹಿಂದೆ ಓಲಿ ಲಿಪುಲೇಖ್​, ಕಾಲಾಪಾನಿ ಮತ್ತು ಲಿಂಪಿಯಾಧುರಾ ಬಳಿ ಭಾರತದ ರಸ್ತೆ ನಿರ್ಮಾಣವನ್ನು ಖಂಡಿಸಿದ್ದರು. ಅಲ್ಲದೆ, ಚೀನಾ ಮತ್ತು ಇಟಲಿಯಲ್ಲಿ ಕಂಡು ಬಂದ ಕರೊನಾ ವೈರಾಣುಗಿಂತಲೂ ಭಾರತ ಎಂಬ ವೈರಾಣು ತುಂಬಾ ಅಪಾಯಕಾರಿ ಎಂದು ಹೇಳಿದ್ದರು.
ಇದು ಸಾಲದೆಂಬಂತೆ ಲಿಪುಲೇಕ್​ ಬಳಿ ಭಾರತದ ರಸ್ತೆ ನಿರ್ಮಾಣ ಪ್ರದೇಶ ನೇಪಾಳಕ್ಕೆ ಸೇರಿದ್ದು ಎಂದು ಹೇಳಿ ವಿವಾದಾತ್ಮಕ ನಕ್ಷೆಯನ್ನು ಬಿಡುಗಡೆ ಮಾಡಿದ್ದರು. ನೇಪಾಳದ ಸಚಿವ ಸಂಪುಟ ಕೂಡ ಈ ವಿವಾದಾತ್ಮಕ ನಕ್ಷೆಯನ್ನು ಅನುಮೋದಿಸಿತ್ತು. ತನ್ಮೂಲಕ ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧ ಹಳಸಿರುವ ಸೂಚನೆ ನೀಡಿದ್ದರು.
ಹಸಿರು ಮತ್ತು ಕಿತ್ತಳೆ ವಲಯದಲ್ಲಿ ಶಾಲೆ-ಕಾಲೇಜುಗಳು ಆರಂಭ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 10 =
Remember me
