ನವದೆಹಲಿ:ಭಾರತದಿಂದ ಇನ್ನು ಬಾಸ್ಮತಿ ಅಕ್ಕಿ ಬಿಟ್ಟು ಇನ್ಯಾವುದೇ ಅಕ್ಕಿಯನ್ನು ರಫ್ತು ಮಾಡಬಾರದು ಎನ್ನುವ ನಿಯಮ ಬಂದಿದೆ. ಈ ಕಾರಣದಿಂದಾಗಿ ಬರಬಹುದಾಗಿದ್ದ ಬಹಳಷ್ಟು ಆದಾಯ ನಿಲ್ಲಲಿದೆ.
ಆದರೆ ಹೊರ ದೇಶಗಳಲ್ಲಿ, ವಿಶೇಷವಾಗಿ ಅಮೆರಿಕದಲ್ಲಿ ಇದರಿಂದಾಗಿ ಅನ್ನ ತಿನ್ನುವವರಿಗೆ ಆಘಾತ ನೀಡಿದಂತಾಗಿದೆ. ಈ ಹಿನ್ನೆಲೆಯಲ್ಲಿ ದೇಸಿ ಜನರು, ಅಂದರೆ ಭಾರತೀಯರು, ಪಾಕಿಸ್ತಾನಿಯರು, ಬಾಂಗ್ಲಾದೇಶಿಗರು, ಶ್ರೀಲಂಕಾದವರು ಸೇರಿದಂತೆ ಅಕ್ಕಿ ಸೇವಿಸುವ ದೇಶಗಳ ಜನರಲ್ಲಿ ಹಾಹಾಕಾರ ಉಂಟಾಗಿದೆ. ಪರಿಣಾಮ? ಅಮೆರಿಕದ ಸುಪರ್​ಮಾರ್ಕೆಟ್​ಗಳಲ್ಲಿ ಅಕ್ಕಿ ಖರೀದಿಗಾಗಿ ಕಿಕ್ಕಿರಿದು ತುಂಬಿರುವ ಜನರು!
ಇದನ್ನೂ ಓದಿ:ಭತ್ತದ ಇಳುವರಿ ಇಳಿಕೆ: ಒಂದು ಕೋಟಿ ಟನ್ ಅಕ್ಕಿ ಕೊರತೆ? ನುಚ್ಚಕ್ಕಿ ರಫ್ತು ಬ್ಯಾನ್
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಹಲವಾರು ವೀಡಿಯೊಗಳಲ್ಲಿ ಅಕ್ಕಿಯ ಬ್ಯಾಗ್​ಗಳನ್ನು ಖರೀದಿಸಲು ಭಾರತೀಯರು ಕಿರಾಣಿ ಅಂಗಡಿಗಳ ಹೊರಗೆ ಸರತಿ ಸಾಲಿನಲ್ಲಿ ನಿಂತಿರುವುದನ್ನು ತೋರಿಸುತ್ತಿವೆ.
#Indiahas banned the export of rice to foreign countries.NRI rising for rice in concern#RiceExportsBan#RiceExportspic.twitter.com/jRFqh6uiAK— Siraj Noorani (@sirajnoorani)July 22, 2023
#Indiahas banned the export of rice to foreign countries.NRI rising for rice in concern#RiceExportsBan#RiceExportspic.twitter.com/jRFqh6uiAK
ವೈರಲ್ ಆಗಿರುವ ವೀಡಿಯೊಗಳಲ್ಲಿ ಒಂದು ದೇಸಿ ಜನರು ಕಪಾಟುಗಳನ್ನು ಏರುತ್ತಾ ಭಾರವಾದ ಅಕ್ಕಿ ಚೀಲಗಳನ್ನು ಎಳೆಯುವುದನ್ನು ಕಾಣಬಹುದಾಗಿದೆ. ಸೂಪರ್‌ಮಾರ್ಕೆಟ್‌ಗಳ ಈ ದೃಶ್ಯಗಳು ವೈರಲ್ ಆಗಿದ್ದು ಜನರು ದೊಡ್ಡ ಪ್ರಮಾಣದಲ್ಲಿ ಅಕ್ಕಿ ಖರೀದಿಸುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿದೆ.
This is USA. All these people, most likely, have Master's degrees in STEM and are working for the best companies out there. Common sense is not that common!#RiceExportBanpic.twitter.com/DaaF4KEAmP— Raviteja B. (@RealmOfInfinite)July 21, 2023
This is USA. All these people, most likely, have Master's degrees in STEM and are working for the best companies out there. Common sense is not that common!#RiceExportBanpic.twitter.com/DaaF4KEAmP
ಇದನ್ನೂ ಓದಿ:VIDEO| ಬೋಲ್ಡ್​ ಸೀನ್​ ಮೂಲಕ ಎಲ್ಲರ ಹುಬ್ಬೇರಿಸಿದ ಸಮಂತಾ: ಮಾದಕ ದೃಶ್ಯಗಳು ವೈರಲ್​!
“ಅಕ್ಕಿ ಎಂದರೆ ದೇಸಿ ಜನರಿಗೆ ಪ್ರಾಣ. ಒಬ್ಬ ಅಕ್ಕಿ ಪ್ರೇಮಿಯಾಗಿ, ನಾನು ಅವರ ನೋವು, ಸಂಕಟ ಮತ್ತು ಹತಾಶೆಯನ್ನು ಅರ್ಥಮಾಡಿಕೊಳ್ಳುತ್ತಿದ್ದೇನೆ” ಎಂದು ಟ್ವಿಟರ್ ಬಳಕೆದಾರರು ಬರೆದಿದ್ದಾರೆ.
They're not stealing it. They're BUYING it.Please don't spread such hatred against fellow desis 🙏— Flint, MI (@owyakkow)July 22, 2023
They're not stealing it. They're BUYING it.Please don't spread such hatred against fellow desis 🙏
ಇನ್ನೊಬ್ಬ ವ್ಯಕ್ತಿ “COVID ಸಮಯದಲ್ಲಿ ಟಾಯ್ಲೆಟ್ ಪೇಪರ್‌ಗಳಿಗಾಗಿ ಜನರು ಹೋರಾಡುತ್ತಿರುವ ಸುದ್ದಿಯನ್ನು ನಾನು ಕೇಳಿದ್ದೆ. ಜೀವನಶೈಲಿಯನ್ನು ಮಾರ್ಪಾಡು ಮಾಡಬೇಕಾದ ಮೂಲಭೂತ ಸಮಸ್ಯೆ ಪ್ರಾರಂಭವಾದಾಗ ಮಾನವರು ಈ ರೀತಿ ವರ್ತಿಸುತ್ತಾರೆ. ಭಾರತೀಯರನ್ನು ಅಥವಾ ಸಂಸ್ಕೃತಿಯನ್ನು ದೂಷಿಸುವುದು ಈ ವ್ಯಕ್ತಿಯ ಕೀಳರಿಮೆ ಸಂಕೀರ್ಣವನ್ನು ತೋರಿಸುತ್ತದೆ” ಎಂದು ಬೇರೊಬ್ಬರು ದೇಸಿ ಜನರನ್ನು ನಿಂದಿಸಿ ಮಾಡಿದ್ದ ಟ್ವೀಟ್​ಗೆ ಖಾರವಾಗಿ ಉತ್ತರಿಸಿದ್ದಾರೆ.(ಏಜೆನ್ಸೀಸ್)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
