ನವದೆಹಲಿ:ಕೊರನಾ ವೈರಸ್​ ದಾಳಿಗೆ ತುತ್ತಾಗಿರುವ ಚೀನಾದಿಂದ ಭಾರತೀಯರನ್ನು ಕರೆ ತರುವ ಕೆಲಸವಾಗುತ್ತಿದೆ. ಹಾಗೆ ಬಂದಿರುವ ಭಾರತೀಯರನ್ನು ವಿಶೇಷ ಚಿಕಿತ್ಸಾ ಕೊಠಡಿಗಳಲ್ಲಿ ಇಟ್ಟು ತಪಾಸಣೆ ನಡೆಸಲಾಗುತ್ತಿದೆ. 14 ದಿನಗಳ ಕಾಲ ಅದೇ ಕೊಠಡಿಗಳಲ್ಲಿ ಸ್ಥಳಾಂತರಿಸಲ್ಪಟ್ಟ ವಿದ್ಯಾರ್ಥಿಗಳು ಇರಬೇಕಾಗಿದ್ದು, ಅಲ್ಲಿ ಅವರು ಹೇಗೆ ಸಮಯವನ್ನು ಕಳೆಯುತ್ತಿದ್ದಾರೆ ಎನ್ನುವುದನ್ನು ಕೇಳಿದರೆ ನೀವು ಆಶ್ಚರ್ಯ ಪಡುತ್ತೀರಿ.
ಚೀನಾದಿಂದ ಮೊದಲನೇ ವಿಮಾನದಲ್ಲಿ ಬಂದ ಒಟ್ಟು 300 ವಿದ್ಯಾರ್ಥಿಗಳನ್ನು ದೆಹಲಿ ಬಳಿಯ ಮಣಿಸರದಲ್ಲಿ ವಿಶೇಷ ಚಿಕಿತ್ಸಾ ಕೊಠಡಿಗಳಲ್ಲಿ ಇರಿಸಲಾಗಿದೆ. 14 ದಿನಗಳ ನಂತರ ಅವರಲ್ಲಿ ವೈರಸ್​ನ ಯಾವುದೇ ಗುಣಲಕ್ಷಣ ಕಂಡು ಬರದಿದ್ದರೆ ಮಾತ್ರ ಅವರನ್ನು ಅಲ್ಲಿಂದ ಹೊರ ಬಿಡಲಾಗುವುದು. ಪ್ರಾಣ ಭಯದಲ್ಲಿ, ಹೊರ ಪ್ರಪಂಚದೊಂದಿಗೆ ಸಂಪರ್ಕ ಕಳೆದುಕೊಂಡು ಬದುಕುತ್ತಿರುವ ಅವರು ತಮ್ಮ ಸಮಯವನ್ನು ಹಾಡು ನೃತ್ಯಗಳೊಂದಿಗೆ ಸಂತೋಷದಿಂದ ಕಳೆಯುತ್ತಿದ್ದಾರೆ. ವಿಶೇಷ ಚಿಕಿತ್ಸಾ ಕೊಠಡಿಯಲ್ಲಿ ಮುಖಕ್ಕೆ ಮಾಸ್ಕ್​ ತೊಟ್ಟುಕೊಂಡು ಅವರು ಮಾಡುತ್ತಿರುವ ಡ್ಯಾನ್ಸ್​ನ್ನು ಏರ್​ ಇಂಡಿಯಾದ ವಕ್ತಾರ ಧನಂಜಯ್​ ಕುಮಾರ್​ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಜನರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
ವಿಡಿಯೋ ನೋಡಿರುವ ಸೇನೆಯ ಹಿರಿಯ ಮತ್ತು ಬಿಜೆಪಿ ಸದಸ್ಯ ಮೇಜರ್​ ಸುರೇಂದ್ರ ಪೂನಿಯಾ, “ಕೊರೊನೊ ವೈರಸ್​ ಹರಿಯಾನ್ವಿ ರಾಗಕ್ಕೆ ನೃತ್ಯ ಮಾಡುತ್ತಿದೆ. ಚೀನಾದಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯ ವಿದ್ಯಾರ್ಥಿಗಳು ಕೊರೊನಾ ವೈರಸ್​ ಪ್ರತ್ಯೇಕ ಶಿಬಿರದಲ್ಲಿ ಇಷ್ಟೊಂದು ಉತ್ಸುಕವಾಗಿರುವುದನ್ನು ನೋಡುವುದಕ್ಕೆ ಸಂತೋಷವಾಗುತ್ತದೆ” ಎಂದು ಟ್ವೀಟ್​ ಮಾಡಿದ್ದಾರೆ.
ಅನೇಕರು ವಿಡಿಯೋವನ್ನು ರೀಟ್ವೀಟ್​ ಮಾಡುತ್ತಿದ್ದು, ಕೊರೊನಾಗೆ ಹೆದರುವ ಮಾತೇ ಇಲ್ಲ ಎನ್ನುವ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.(ಏಜೆನ್ಸೀಸ್​)
Guess????pic.twitter.com/w2ZA47s1lX— Dhananjay kumar (@dhananjaypro)February 2, 2020
Guess????pic.twitter.com/w2ZA47s1lX

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 18 =
Remember me
