‘ಬಿಗ್ ಬಟರ್​ಫ್ಲೈ ಮಂತ್​​..’– ಹೀಗೊಂದು ಚಿಟ್ಟೆ ಮಾಸವನ್ನು ಸೆ. 5ರಿಂದ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲೇ ಭಾರತದ 1,328ನೇ ಚಿಟ್ಟೆಯ ಪ್ರಭೇದ ಪತ್ತೆಯಾಗಿದೆ. ಇದರ ವೈಜ್ಞಾನಿಕ ಹೆಸರು ಸ್ಪಿಯಾಲಿಯಾ ಜೀಬ್ರಾ. ಬರೀ ಎರಡೂವರೆ ಸೆಂಟಿಮೀಟರ್ ಅಗಲ ಇರುವ ಈ ಚಿಟ್ಟೆ ಭಾರೀ ವೇಗದಲ್ಲಿ ಹಾರಬಲ್ಲದು ಎನ್ನಲಾಗಿದೆ.
ಚಿಟ್ಟೆತಜ್ಞ ಮುಖೇಶ್ ಪನ್ವರ್ ಇದನ್ನು ಪತ್ತೆ ಹಚ್ಚಿದ್ದಾರೆ. ರಾಜಸ್ಥಾನದ ಡುಂಗರ್​ಪುರ್ ಜಿಲ್ಲೆಯ ಸಾಗ್ವರ ನಿವಾಸಿ ಆಗಿರುವ ಇವರು, 15 ವರ್ಷಗಳಿಂದ ಚಿಟ್ಟೆಗಳ ಕುರಿತು ಅಧ್ಯಯನ ನಡೆಸುತ್ತಿರುವ ವಗಡ್​ ನೇಚರ್ ಕ್ಲಬ್​ನ ಸದಸ್ಯ.
ಇವರು 2014ರ ನ. 8ರಂದು ಸಾಗ್ವರದ ಧನ್​ರಾಜ್​ ಫಾರ್ಮ್​ ಹೌಸ್​ನಲ್ಲಿ ಈ ಚಿಟ್ಟೆಯನ್ನು ಕಂಡಿದ್ದರು. ಇದರ ಫೋಟೋ ತೆಗೆದುಕೊಂಡಿದ್ದ ಮುಖೇಶ್​ ಉತ್ತರಾಖಂಡದ ಭಿಮ್ಟಲ್​ನ ಬಟರ್​ ಫ್ಲೈ ರಿಸರ್ಚ್​ ಇನ್​​ಸ್ಟಿಟ್ಯೂಟ್​ಗೆ ಕಳುಹಿಸಿದ್ದರು. ಆರು ವರ್ಷಗಳ ಅಧ್ಯಯನದ ಬಳಿಕ ಈ ಸಂಸ್ಥೆಯ ನಿರ್ದೇಶಕ, ಈ ಚಿಟ್ಟೆಯನ್ನು ಭಾರತದ 1,328ನೇ ಪ್ರಭೇದ ಎಂಬುದಾಗಿ ಘೋಷಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 8 =
Remember me
