ನವದೆಹಲಿ:ಭಾರತದಲ್ಲಿ 2018ರಲ್ಲಿ ನಡೆಸಿದ ಹುಲಿ ಗಣತಿ ಗಿನ್ನೆಸ್​ ದಾಖಲೆಗೆ ಸೇರ್ಪಡೆಯಾಗಿದೆ. ವನ್ಯಜೀವಿ ಗಣತಿಗಾಗಿ ಅತಿ ದೊಡ್ಡ ಪ್ರಮಾಣದಲ್ಲಿ ಕ್ಯಾಮರಾ ಟ್ರ್ಯಾಪ್​ ತಾಂತ್ರಿಕತೆ ಬಳಸಿದ ಹೆಗ್ಗಳಿಕೆ ಇದರದ್ದಾಗಿದೆ.
ಭಾರತದಲ್ಲಿ 2018-19ರಲ್ಲಿ ನಡೆಸಿದ ನಾಲ್ಕನೇ ಆವೃತ್ತಿಯ ಮಾಹಿತಿ ಹಾಗೂ ಅದನ್ನು ಕಲೆ ಹಾಕಲು ಬಳಸಿದ ಸಂಪನ್ಮೂಲಗಳ ಆಧಾರದಲ್ಲಿ ಅತ್ಯಂತ ಸಮಗ್ರ ಹುಲಿ ಗಣತಿ ಇದಾಗಿತ್ತು ಎಂದು ಗಿನ್ನೆಸ್​ ದಾಖಲೆ ತಂಡ ತಿಳಿಸಿದೆ.
ಇದನ್ನೂ ಓದಿ;ಕಬಿನಿ ಕಾಡಿನಲ್ಲಿ ಕಾಣಿಸಿಕೊಂಡಿದೆ ಕರಿ ಚಿರತೆ…! ಅತ್ಯಪರೂಪದ ವಿದ್ಯಮಾನ
ಹುಲಿ ಗಣತಿಯನ್ನು 1,21,337 ಕಿ.ಮೀ ವ್ಯಾಪ್ತಿಯಲ್ಲಿ ನಡೆಸಲಾಗಿದ್ದು, ಇದಕ್ಕಾಗಿ 141 ಬೇರೆ ಸ್ಥಳಗಳಲ್ಲಿ 26,838 ಕ್ಯಾಮರಾ ಟ್ರ್ಯಾಪ್​ ಅಳವಡಿಸಲಾಗಿತ್ತು. ಈ ಕ್ಯಾಮರಾ ಟ್ರ್ಯಾಪ್​ಗಳು 34.85 ಲಕ್ಷ ಛಾಯಾಚಿತ್ರಗಳನ್ನು ಸೆರೆಹಿಡಿದಿದ್ದವು. ಇದರಲ್ಲಿ 76,651 ಹುಲಿ ಚಿತ್ರಗಳೇ ಆಗಿದ್ದವು. ಇದರಲ್ಲಿ 2,461 ವಯಸ್ಕ ಹುಲಿಗಳಾಗಿದ್ದವು. ಹುಲಿಗಳ ಮೇಲಿನ ಪಟ್ಟೆಗಳನ್ನು ಆಧರಿಸಿ ಅವುಗಳನ್ನು ಗುರುತಿಸಲಾಗಿತ್ತು.
ಇದಲ್ಲದೇ, ಈ ಛಾಯಾಚಿತ್ರಗಳಲ್ಲಿ 51,777 ಚಿರತೆಗಳಾಗಿದ್ದರೆ, ಉಳಿದವು ಸ್ಥಳೀಯ ವನ್ಯಜೀವಿಗಳಾದಿದ್ದವು ಎಂದು ಗಣತಿದಾರರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ;ಸೋಮವಾರದಿಂದ ದೇಶದ 12 ಕಡೆಗಳಲ್ಲಿ ಕೋವಿಡ್​ ರೋಗಿಗಳಿಗೆ ದೇಶೀಯ ಕರೊನಾ ಲಸಿಕೆ ಪ್ರಯೋಗ
ಕ್ಯಾಮರಾಗಳ ಬಳಕೆ ಹೊರತಾಗಿ ಕಾಲ್ನಡಿಗೆಯಲ್ಲಿಯೂ ಸಮೀಕ್ಷೆ ಮಾಡಲಾಗಿತ್ತು. ಇದರಲ್ಲಿ 3,17958 ಆವಾಸ ಸ್ಥಾನಗಳಲ್ಲಿ ಹೆಜ್ಜೆ ಗುರುತು ಹಾಗೂ ಅವುಗಳ ಮಲದ ಮಾದರಿ ಸಂಗ್ರಹಿಸಲಾಗಿತ್ತು. ಇದರ ಮಾನವ ದಿನಗಳನ್ನು ಲೆಕ್ಕ ಹಾಕಿದರೆ, 6.20 ಲಕ್ಷ ದಿನಗಳಾಗಿತ್ತು.
ಅಂತಿಮವಾಗಿ ತಿಳಿದು ಬಂದ ಫಲಿತಾಂಶವೆಂದರೆ, 2014ರಲ್ಲಿ 2,226 ಇದ್ದ ಹುಲಿಗಳ ಸಂಖ್ಯೆ 2018ರಲ್ಲಿ 2,967ಕ್ಕೆ ತಲುಪಿತ್ತು. ದೇಶದ 20 ರಾಜ್ಯಗಳ ಕಾಡುಗಳಲ್ಲಿ ಹುಲಿಗಳಿವೆ. ಅದರಲ್ಲೂ ಮಧ್ಯಪ್ರದೇಶ, ಕರ್ನಾಟಕ ಹಾಗೂ ಉತ್ತರಾಖಂಡಗಳಲ್ಲಿ ಹುಲಿಗಳ ಸಿಂಹ ಪಾಲಿದೆ. ಅಂದರೆ 1,492 ಹುಲಿಗಳು ಈ ಮೂರು ರಾಜ್ಯಗಳಲ್ಲಿವೆ.
ಕರೊನಾ ಕವಚ; ಕೋವಿಡ್​ನಿಂದ ಬಚಾವಾಗಲು ಇಲ್ಲಿವೆ ವಿಶೇಷ ವಿಮಾ ಯೋಜನೆಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
