ನವದೆಹಲಿ:ವಿಶ್ವವನ್ನೇ ಕಾಡುತ್ತಿರುವ ಕರೊನಾ ಮಾರಿಯಿಂದಾಗಿ ಭಾರತದಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪರಿಣಾಮಕಾರಿಯಾಗಿ ನಿರ್ವಹಿಸಬಲ್ಲದು ಎಂದು ದೇಶದ ಶೇ.93.5 ಜನರು ನಂಬಿಕೆ ವ್ಯಕ್ತಪಡಿಸಿದ್ದಾರೆ.
ಮಾರ್ನಿಂಗ್​ ಕನ್ಸಲ್ಟ್​ ಎಂಬ ಸಂಸ್ಥೆ ಬುಧವಾರವಷ್ಟೇ ಜಾಗತಿಕವಾಗಿ ನಡೆಸಿದ್ದ ಸಮೀಕ್ಷೆಯಲ್ಲಿ ಕರೋನಾ ಪಿಡುಗು ನಿಯಂತ್ರಣದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲ ಸ್ಥಾನದಲ್ಲಿ ಇರುವುದಾಗಿ ಹೇಳಿತ್ತು. ಇದರ ಬೆನ್ನಲ್ಲೇ ಐಎಎನ್​ಎಸ್​-ಸಿ-ವೋಟರ್​ ಭಾರತದ ಮಟ್ಟದಲ್ಲಿ ನಡೆಸಿರುವ ಸಮೀಕ್ಷೆಯಲ್ಲಿ ಮೋದಿ ಸರ್ಕಾರದ ಬಗ್ಗೆ ಹೆಚ್ಚಿನ ನಂಬಿಕೆ ವ್ಯಕ್ತವಾಗಿರುವುದು ಗಮನಾರ್ಹ.
ಮಾ.25ರಂದು ಕೇಂದ್ರ ಸರ್ಕಾರ ಏಪ್ರಿಲ್​ 14ರವರೆಗೆ ದೇಶಾದ್ಯಂತ ಲಾಕ್​ಡೌನ್​ ಘೋಷಿಸಿತ್ತು. ಬಳಿಕ ಲಾಕ್​ಡೌನ್​ ಅವಧಿಯನ್ನು ಮೇ 3ರವರೆಗೆ ವಿಸ್ತರಿಸಿತ್ತು.
ಲಾಕ್​ಡೌನ್​ನ ಮೊದಲ ಅವಧಿಯಲ್ಲಿ ನಡೆಸಿತ್ತು ಸಮೀಕ್ಷೆಯಲ್ಲಿ ರಾಷ್ಟ್ರದಲ್ಲಿನ ಕರೊನಾ ಬಿಕ್ಕಟ್ಟನ್ನು ನಿಯಂತ್ರಿಸುವಲ್ಲಿ ನರೇಂದ್ರ ಮೋದಿ ಸರ್ಕಾರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲದು ಎಂಬ ಬಗ್ಗೆ ಶೇ.76.8 ಜನರು ನಂಬಿಕೆ ಹೊಂದಿದ್ದರು. ಇದೀಗ ಗುರುವಾರ ಬಿಡುಗಡೆಯಾಗಿರುವ ಸಮೀಕ್ಷಾ ವರದಿಯಲ್ಲಿ ಏಪ್ರಿಲ್​ 21ರ ವೇಳೆಗೆ ಈ ಪ್ರಮಾಣ ಶೇ.93.5ಕ್ಕೆ ಹೆಚ್ಚಳವಾಗಿದೆ.
ಕರೊನಾ ವೈರಸ್​ ಪಿಡುಗಿನ ನಿವಾರಣೆಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂಬುದು ನನ್ನ ಭಾವನೆ ಎಂಬ ಒಂದು ವಾಕ್ಯದ ಹೇಳಿಕೆಯನ್ನು ನೀಡಿ, ಮಾ.16ರಿಂದ ಏ.21ರವರೆಗೆ ಸಮೀಕ್ಷೆ ನಡೆಸಲಾಗಿತ್ತು.
ಏಪ್ರಿಲ್​ 16ರಂದು ದೇಶದ ಶೇ.75.8 ಜನರು ಕೋವಿಡ್​ 19 ಬಿಕ್ಕಟ್ಟನ್ನು ಕೇಂದ್ರ ಸರ್ಕಾರ ಸಮರ್ಥವಾಗಿ ನಿಭಾಯಿಬಲ್ಲದು ಎಂದು ಹೇಳಿದ್ದರು. ಆದರೆ, ದೇಶಾದ್ಯಂತ ಕಟ್ಟುನಿಟ್ಟಾಗಿ ಲಾಕ್​ಡೌನ್​ ಅನ್ನು ಅನುಷ್ಠಾನಗೊಳಿಸುತ್ತಿರುವಂತೆ ಕೇವಲ ಐದು ದಿನಗಳಲ್ಲಿ ಈ ಪ್ರಮಾಣ ಶೇ.93.5ಕ್ಕೆ ಏರಿಕೆಯಾಗಿದೆ.
ರಾವಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಿದ ಗಡಿ ರಸ್ತೆಗಳ ಸಂಸ್ಥೆ, ಪಂಜಾಬ್​ನಲ್ಲಿರುವ ಈ ಸೇತುವೆ ನಿರ್ಮಾಣ ವೆಚ್ಚ ಎಷ್ಟು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + twelve =
Remember me
