ನವದೆಹಲಿ:ಸ್ಥಳೀಯ ಉತ್ಪಾದನಾ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, 3,668.38 ಕೋಟಿ ರೂಪಾಯಿ ಮೌಲ್ಯದ ಎಸಿ (ಏರ್​ ಕಂಡಿಷನರ್​) ಮತ್ತು ರೆಫ್ರಿಜರಂಟ್ಸ್ ಉತ್ಪನ್ನಗಳ ಆಮದನ್ನು ನಿಷೇಧಿಸಿದೆ. ಚೀನಾ ಮತ್ತು ಥಾಯ್ಲೆಂಡ್​ನಿಂದ ಆಮದಾಗುತ್ತಿದ್ದ ಈ ಉತ್ಪನ್ನಗಳ ಆಮದು ನಿಷೇಧ ಆದೇಶವನ್ನು ಸರ್ಕಾರ ಗುರುವಾರ ರಾತ್ರಿ ಪ್ರಕಟಿಸಿದೆ.
ಟೆಲಿವಿಷನ್ ಸೆಟ್​ಗಳ ಮೇಲಿನ ಆಮದು ನಿಷೇಧವನ್ನು ಕೇಂದ್ರ ಸರ್ಕಾರ ಜುಲೈ ತಿಂಗಳಲ್ಲಿ ಪ್ರಕಟಿಸಿತ್ತು. ಆಮದು ಮಾಡಬೇಕು ಎಂದರೆ ಆಮದುದಾರರು ಡೈರೆಕ್ಟರೇಟ್​ ಜನರಲ್​ ಆಫ್ ಫಾರಿನ್ ಟ್ರೇಡ್​ನಿಂದ ಅನುಮತಿ, ಪರವಾನಗಿ ಪಡೆಯಬೇಕು ಎಂದು ನಿರ್ದೇಶಿಸಿತ್ತು. ಏರ್ ಕಂಡಿಷನರ್ (ಎಸಿ) ಮೇಲಿನ ಆಮದು ನಿಷೇಧ ಎಂದರೆ, ಯಾವುದೇ ರೀತಿಯಲ್ಲೂ ಅವುಗಳನ್ನು ಆಮದುಮಾಡಿಕೊಳ್ಳುವಂತಿಲ್ಲ.
ಇದನ್ನೂ ಓದಿ:ಮತಾಂತರಗೊಂಡು ಹೆಣವಾದ ಯುವತಿ! ನ್ಯಾಯಕ್ಕಾಗಿ ಸಿಎಂ ಯೋಗಿ ಮೊರೆ ಹೋಗಿ ಬೆಂಕಿಹಚ್ಚಿಕೊಂಡಳು…
ಭಾರತಕ್ಕೆ ಬರುವ ಬಹುತೇಕ ಏರ್​ಕಂಡಿಷನರ್​ಗಳಲ್ಲಿ ರೆಫ್ರಿಜರಂಟ್ಸ್​ ತುಂಬಿಕೊಂಡೇ ಇರುತ್ತದೆ. 2020ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತ ಒಟ್ಟು 649 ದಶಲಕ್ಷ ಡಾಲರ್ ಮೌಲ್ಯದ ಸ್ಪಿಲ್ಟ್ ಏರ್​ಕಂಡಿಷನರ್​ಗಳನ್ನು ಆಮದು ಮಾಡಿಕೊಂಡಿದೆ. ಇದರಲ್ಲಿ ಚೀನಾದಿಂದ 241 ದಶಲಕ್ಷ ಡಾಲರ್​ಗಳಾದ್ದಾದರೆ, ಥಾಯ್ಲೆಂಡ್​ನಿಂದ 189 ದಶಲಕ್ಷ ಡಾಲರ್​ಗಳ ಎಸಿಗಳು. ಅದೇ ರೀತಿ, 35 ದಶಲಕ್ಷ ಡಾಲರ್ ಮೌಲ್ಯದ ವಿಂಡೋ ಏರ್ ಕಂಡಿಷನರ್​ಗಳನ್ನು ಆಮದುಮಾಡಿಕೊಂಡಿದ್ದು, ಇದರಲ್ಲಿ ಚೀನಾದಿಂದ 14 ದಶಲಕ್ಷ ಡಾಲರ್​, ಥಾಯ್ಲೆಂಡ್​ನಿಂದ 18 ದಶಲಕ್ಷ ಡಾಲರ್ ಮೌಲ್ಯದ ಏರ್​ಕಂಡಿಷನರ್​ಗಳು ಸೇರಿವೆ.
ಇದನ್ನೂ ಓದಿ:ಗ್ರಾಪಂ ಚುನಾವಣೆ: ಸರ್ಕಾರಕ್ಕೆ ಬೇಡ, ಆಯೋಗಕ್ಕೆ ಬೇಕು… ಹೈಕೋರ್ಟ್​ ಏನ್​ ಹೇಳುತ್ತೆ?ಲಡಾಕ್​ ಭಾಗದಲ್ಲಿ ಚೀನಾ ಸೇನೆ ಅತಿಕ್ರಮಣ ಶುರುಮಾಡಿದ ನಂತರದಲ್ಲಿ ಭಾರತ ಚೀನಾದ ಮೇಲೆ ವಾಣಿಜ್ಯ ಸಮರ ಸಾರಿದೆ. ಅದರ ಮುಂದುವರಿದ ಭಾಗ ಇದು ಎಂಬುದು ಪರಿಣತರ ಅಭಿಮತ. (ಏಜೆನ್ಸೀಸ್)
ಸಿಗಂದೂರು ವಿವಾದ: ಚಂಡಿಕಾ ಹೋಮಕ್ಕೆ ಅವಕಾಶ ನೀಡದ ಕಾರಣ ಮೌನವ್ರತ ಕುಳಿತ ಪ್ರಧಾನ ಅರ್ಚಕ ಕುಟುಂಬ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 3 =
Remember me
