ನವದೆಹಲಿ:ಭಾರತದಲ್ಲಿನ ಕರೊನಾ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​​ಒ)ಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಮೊದಲನೇ ಅಲೆಗಿಂತ ಎರಡನೇ ಅಲೆ ತುಂಬಾ ಮಾರಣಾಂತಿಕವಾಗಿರಲಿದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಭಾರತದಲ್ಲಿ ಕರೊನಾ ಪ್ರಕರಣಗಳ ಇಳಿಕೆಯ ಕ್ರಮಕ್ಕೆ ಡಬ್ಲ್ಯುಎಚ್​ಒ ಸ್ಪಂದಿಸುತ್ತಿದೆ. ಆಕ್ಸಿಜನ್​ ಕಾನ್ಸನ್​ಟ್ರೇಟರ್ಸ್​, ಮೊಬೈಲ್​ ಫೀಲ್ಡ್​ ಆಸ್ಪತ್ರೆಗಳ ಟೆಂಟ್ಸ್​, ಮಾಸ್ಕ್​ ಮತ್ತು ಇತರೆ ವೈದ್ಯಕೀಯ ಅಗತ್ಯ ಸಾಮಾಗ್ರಿಗಳನ್ನು ಪೂರೈಸಿದ್ದೇವೆ ಎಂದು ತಿಳಿಸಿದ್ದಾರೆ.
ಭಾರತದ ಅನೇಕ ರಾಜ್ಯಗಳಲ್ಲಿ ಕೋವಿಡ್​ ಸಂಖ್ಯೆಗಳ ಏರಿಕೆ ಮತ್ತು ಸಾವಿನ ಸಂಖ್ಯೆ ಇನ್ನು ಮುಂದುವರಿದಿದ್ದು, ಇಡೀ ವಿಶ್ವದಲ್ಲಿ ಭಾರತ ತೀವ್ರ ಕಳವಳಕಾರಿಯಾಗಿಯೇ ಮುಂದುವರಿದಿದೆ ಎಂದರು. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಭಾರತವನ್ನು ಬೆಂಬಲಿಸುತ್ತಿರುವ ಪಾಲುದಾರರಿಗೆ ಡಬ್ಲ್ಯುಎಚ್​ಒ ಮುಖ್ಯಸ್ಥರು ಧನ್ಯವಾದ ಹೇಳಿದರು.
ಕರೊನಾ ಎರಡನೇ ಅಲೆಯಿಂದ ತತ್ತಿರಿಸಿರುವ ಭಾರತಕ್ಕೆ ಅನೇಕ ರಾಷ್ಟ್ರಗಳು ನೆರವಿನ ಹಸ್ತ ಚಾಚಿದೆ. ಈ ಮಧ್ಯೆ ನಿನ್ನೆ ಒಂದೇ ದಿನ ಮತ್ತೆ 3,43,144 ಕರೊನಾ ಪ್ರಕರಣಗಳು ದೇಶದಲ್ಲಿ ಕಂಡುಬಂದಿದೆ. ಇದರೊಂದಿಗೆ ಒಟ್ಟಾರೆ ಕೋವಿಡ್​ ಪ್ರಕರಣಗಳ ಸಂಖ್ಯೆ 2,40,46,809 ಕ್ಕೇರಿದೆ. ಇದುವರೆಗೂ ದೇಶದಲ್ಲಿ 2,62,317 ಮಂದಿ ಕರೊನಾಗೆ ಬಲಿಯಾಗಿದ್ದಾರೆ.(ಏಜೆನ್ಸೀಸ್​)
ಸಿಎಂ ಜಗನ್​ ಸರ್ಕಾರದ ವಿರುದ್ಧ ಗಂಭೀರ ಆರೋಪ: ವೈಎಸ್​ಆರ್​ ಕಾಂಗ್ರೆಸ್​ ಸಂಸದನ ಬಂಧನ!

ಆಯ್ಕೆ ವಿವಾದದ ಬೆನ್ನಲ್ಲೇ ಭಾರತ ಮಹಿಳಾ ಕ್ರಿಕೆಟ್​ ತಂಡಕ್ಕೆ ಶಿಖಾ, ಶೆಫಾಲಿ ವಾಪಸ್

ಇಲ್ಲಿ ಕಳ್ಳರು ಶವಗಳನ್ನೂ ಬಿಡುತ್ತಿಲ್ಲ; ಕೋವಿಡ್ ಸೋಂಕಿನಿಂದ ಮೃತಪಟ್ಟವರ ಚಿನ್ನಾಭರಣ ಕಳವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 12 =
Remember me
