ನವದೆಹಲಿ:ಕರೊನಾ ಸಾಂಕ್ರಾಮಿಕ ಕಾಯಿಲೆ ಇಡೀ ವಿಶ್ವವನ್ನೇ ತಲ್ಲಣಗೊಳಿಸಿತ್ತು. ಆರಂಭದಲ್ಲಿ ಚೀನಾ ದೇಶದಲ್ಲಿ ಕಾಣಿಸಿಕೊಂಡಿದ್ದ ಈ ಸೋಂಕು ಅಟ್ಟಹಾಸ ಮೆರೆದು ಸಾವಿರಾರು ಜನರ ಸಾವಿಗೆ ಕಾರಣವಾಗಿದೆ. ಇಡೀ ಜಗತ್ತಿಗೆ ಹೋಲಿಸಿದರೆ ಭಾರತದಲ್ಲಿ ಕರೊನಾ ಆಪತ್ತು ದೊಡ್ಡಮಟ್ಟದಲ್ಲಿ ಉಂಟಾಗಿಲ್ಲ ಎಂದು ಈ ಅಧ್ಯಯನ ಹೇಳಿದೆ.
ಕರೋನಾ ಸಮಯದಲ್ಲಿ ಜನರ ಜೀವ ಉಳಿಸಲು ಭಾರತದಲ್ಲಿ ಲಸಿಕಾ ಅಭಿಯಾನ ಆರಂಭಿಸಿದ್ದು, ಇದರಿಂದಾಗಿ 34 ಲಕ್ಷ ಜನರ ಜೀವನ ಉಳಿದಿದೆ ಎಂದು ಸ್ಟ್ಯಾನ್‌ಫೋರ್ಡ್ ವಿವಿ ನಡೆಸಿದ ಅಧ್ಯಯನದಲ್ಲಿ ವಿಷಯ ಹೊರಬಂದಿದೆ.
ಇದನ್ನೂ ಓದಿ:ಜಲಪಾತದಲ್ಲಿ ಬಿದಿದ್ದ ಮಗುವನ್ನು ರಕ್ಷಿಸಿದ ಯುವಕ ಇಂದು ಡಿಸಿ ಕಾರು ಚಾಲಕ
ಸ್ಟ್ಯಾನ್‌ಫೋರ್ಡ್‌ ವಿವಿ ನಡೆಸಿದ ಅಧ್ಯಯನದಲ್ಲಿ ಈ ವಿಷಯ ಬಹಿರಂಗವಾಗಿದ್ದು, ಭಾರತ ದೇಶದಲ್ಲಿ ಕೋವಿಡ್ ಲಸಿಕಾ ಅಭಿಯಾನ ನಡೆಸಿದೆ. ಈ ಪರಿಣಾಮ ಭಾರತದಲ್ಲಿ 18.3 ಬಿಲಿಯನ್ ಅಮೆರಿಕ ಡಾಲರ್ ಮೌಲ್ಯದ ಆರ್ಥಿಕ ಕುಸಿತ ತಡೆಗಟ್ಟಲು ಸಾಧ್ಯವಾಗಿದೆ ಎಂದು ಅಧ್ಯಯನ ತಿಳಿಸಿದೆ.
ಕೋವಿಡ್ ಕಾಲದಲ್ಲಿ ಆದ ವಿದ್ಯಮಾನಗಳ ಬಗ್ಗೆಯೂ ಅಧ್ಯಯನ ಮಾಡಲಾಗಿದೆ. ಕೋವಿಡ್ 19 ಆಗ ತಾನೆ ಶುರುವಾಗುತ್ತಿದ್ದಾಗ ಜನವರಿ 2020ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯ ತುರ್ತು ಪರಿಸ್ಥಿತಿಯನ್ನು ವಿಶ್ವಾದ್ಯಂತ ಘೋಷಣೆ ಮಾಡಿತು. ಈ ವೇಳೆ ಕೊರೊನಾ ವಿರುದ್ಧ ಸಮರ ಸಾರಿದ ವಿಶ್ವವು, ಕೋವಿಡ್‌ನಿಂದ ಎದುರಾಗಬಹುದಾದ ಹಲವು ರೀತಿಯ ಆರ್ಥಿಕ, ವೈದ್ಯಕೀಯ ಸವಾಲುಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಲ್ಲಲು ವಿಶ್ವದ ಎಲ್ಲಾ ರಾಷ್ಟ್ರಗಳೂ ತಮ್ಮದೇ ಆದ ರೀತಿಯಲ್ಲಿ ಕಾರ್ಯತಂತ್ರ ರೂಪಿಸಿದವು. ಈ ಪೈಕಿ ಭಾರತದ ಕಾರ್ಯತಂತ್ರ ಫಲ ನೀಡಿತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ಹೇಳಿದ್ದಾರೆ.
ಆಸ್ತಿಗಾಗಿ ಗಲಾಟೆ: ಸೋದರಳಿಯನ ಖಾಸಗಿ ಅಂಗಕ್ಕೆ ಗುಂಡು ಹಾರಿಸಿದ ಮಾವ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
