ದೀರ್ಘ ಕಾಯುವಿಕೆ ಕೊನೆಗೊಳ್ಳುವ ಕ್ಷಣ ಬಂದೇಬಿಟ್ಟಿದೆ!
ಯೋಗಿ ಆದಿತ್ಯನಾಥ, ಉತ್ತರ ಪ್ರದೇಶದ ಮುಖ್ಯಮಂತ್ರಿಶತಮಾನಗಳ ನಿರೀಕ್ಷೆ, ಹಲವು ತಲೆಮಾರುಗಳ ಹೋರಾಟ ಮತ್ತು ನಮ್ಮ ಪೂರ್ವಜರು ಮಾಡಿದ ಪ್ರತಿಜ್ಞೆಯ ನೆರವೇರಿಕೆ ಪೂರ್ಣಗೊಳ್ಳುವ ಬಹುನಿರೀಕ್ಷಿತ ದಿನವು ಅಂತಿಮವಾಗಿ ಬಂದಿದೆ. ನಾಳೆ ಅಂದರೆ ಜನವರಿ 22ರಂದು ಸನಾತನ ಸಂಸ್ಕೃತಿಯ ಆತ್ಮ ‘ರಘುನಂದನ್ ರಾಘವ್ ರಾಮ್ ಲಲ್ಲಾ’, ಅವರ ಜನ್ಮಸ್ಥಳವಾದ ಅವಧಪುರಿಯಲ್ಲಿ (ಅಯೋಧ್ಯೆ) ಭವ್ಯವಾದ ಮತ್ತು ದೈವಿಕ ದೇವಾಲಯದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. 500 ವರ್ಷಗಳ ದೀರ್ಘನಿರೀಕ್ಷೆಯ ನಂತರ ಈ ಐತಿಹಾಸಿಕ ಮತ್ತು ಪವಿತ್ರ ಸಂದರ್ಭವು ಭಾರತವನ್ನು ಮಾತ್ರವಲ್ಲದೆ ಇಡೀ ಜಗತ್ತನ್ನು ಮಂತ್ರಮುಗ್ಧಗೊಳಿಸಿದೆ. ಎಲ್ಲ ದೃಷ್ಟಿಗಳು ‘ಮೋಕ್ಷದಾಯಿನಿ’ ಅಯೋಧ್ಯೆಯತ್ತ ನೆಟ್ಟಿವೆ. ಇಂದು ಅಯೋಧ್ಯೆಯ ಪ್ರತಿಯೊಂದು ರಸ್ತೆಯೂ ಶ್ರೀರಾಮ ಜನ್ಮಭೂಮಿಯತ್ತ ಸಾಗುತ್ತದೆ. ಪ್ರತಿ ಕಣ್ಣೂ ಸಂತೋಷ ಮತ್ತು ತೃಪ್ತಿಯ ಕಣ್ಣೀರಿನಿಂದ ತೇವವಾಗುತ್ತಿದೆ. ಮತ್ತು ಎಲ್ಲರೂ ರಾಮನಾಮವನ್ನು ಜಪಿಸುತ್ತಿದ್ದಾರೆ.
ನಾಳೆ ನಡೆಯುತ್ತಿರುವುದು ಬಾಲರಾಮನ ವಿಗ್ರಹದ ಪ್ರತಿಷ್ಠಾಪನೆ ಮಾತ್ರವಲ್ಲ, ಇದು ಸಾರ್ವಜನಿಕ ನಂಬಿಕೆ ಮತ್ತು ವಿಶ್ವಾಸದ ಮರುಸ್ಥಾಪನೆಯೂ ಹೌದು. ಅಯೋಧ್ಯೆಯು ಈಗ ಹಿಂದಿನ ವೈಭವವನ್ನು ಮರುಸ್ಥಾಪಿಸುತ್ತಿದೆ. ನ್ಯಾಯ ಮತ್ತು ಸತ್ಯದ ಜಂಟಿ ವಿಜಯವು ಕಹಿನೆನಪುಗಳನ್ನು ಅಳಿಸಿಹಾಕುತ್ತದೆ ಮತ್ತು ಹೊಸಕಥೆಗಳನ್ನು ಸೃಷ್ಟಿಸುತ್ತದೆ, ಸಮಾಜದಲ್ಲಿ ಸಾಮರಸ್ಯವನ್ನು ಬೆಳೆಸುತ್ತದೆ.
‘ಶ್ರೀರಾಮ ಜನ್ಮಭೂಮಿ ಮುಕ್ತಿ ಮಹಾಯಜ್ಞ’ ಕೇವಲ ಸನಾತನ ನಂಬಿಕೆಯ ಪರೀಕ್ಷೆಯಾಗಿರಲಿಲ್ಲ; ಇದು ರಾಷ್ಟ್ರದ ಸಾಮೂಹಿಕ ಪ್ರಜ್ಞೆಯನ್ನು ಯಶಸ್ವಿಯಾಗಿ ಜಾಗೃತಗೊಳಿಸಿತು, ಭಾರತವನ್ನು ಏಕತೆಯ ಎಳೆಯಲ್ಲಿ ಒಂದುಗೂಡಿಸಿತು. ಭಗವಾನ್ ಶ್ರೀರಾಮನ ಜನ್ಮಸ್ಥಳದಲ್ಲಿ ಮಂದಿರ ನಿರ್ವಣದ ಹೋರಾಟದಲ್ಲಿ ಪ್ರದರ್ಶಿಸಿದ ಅನನ್ಯ ಏಕತೆ ಅಪ್ರತಿಮವಾಗಿದೆ. ಸಂತರು, ತಪಸ್ವಿಗಳು, ಬುದ್ಧಿಜೀವಿಗಳು, ರಾಜಕಾರಣಿಗಳು ಮತ್ತು ಸಮಾಜದ ಎಲ್ಲ ವರ್ಗಗಳ ಜನರು ಭಿನ್ನಾಭಿಪ್ರಾಯಗಳನ್ನು ಮೀರಿ, ಮಹತ್ವದ ಉದ್ದೇಶಕ್ಕಾಗಿ ಒಂದಾಗಿ, ಹೋರಾಟ ನಡೆಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ವಿಶ್ವ ಹಿಂದು ಪರಿಷತ್​ನಂತಹ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳು ಮಾರ್ಗಸೂಚಿಯನ್ನು ರೂಪಿಸಿ ಜನಸಾಮಾನ್ಯರನ್ನು ಒಗ್ಗೂಡಿಸಿದವು. ಮಹಾನ್ ಉದ್ದೇಶವು ಅಂತಿಮವಾಗಿ ನೆರವೇರಿತು ಮತ್ತು ಭಾರತದಲ್ಲಿ ಹೊಸ ಉದಯಕ್ಕೆ ನಾಂದಿಯಾಯಿತು.
ಒಂದು ಕಾಲದಲ್ಲಿ ‘ಅವನಿಯ ಅಮರಾವತಿ’ ಮತ್ತು ‘ಭೂಮಿಯ ವೈಕುಂಠ’ ಎಂದು ಕರೆಯಲ್ಪಡುತ್ತಿದ್ದ ಅಯೋಧ್ಯೆಯು ಶತಮಾನಗಳವರೆಗೆ ಶಾಪಗ್ರಸ್ತವಾಗಿತ್ತು. ‘ರಾಮರಾಜ್ಯ’ ಒಂದು ಆದರ್ಶ ಪರಿಕಲ್ಪನೆಯಾಗಿದ್ದ ಭೂಮಿಯಲ್ಲಿ, ರಾಮ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು ಮತ್ತು ಶ್ರೀರಾಮನ ಜನ್ಮಸ್ಥಳಕ್ಕೆ ಪುರಾವೆಗಳನ್ನು ಹುಡುಕಲಾಯಿತು. ಆದರೆ ಶ್ರೀರಾಮಚಂದ್ರನ ಜೀವನವು ನಮಗೆ ಸಭ್ಯವಾಗಿ, ಘನತೆಯಿಂದ ವರ್ತಿಸಲು ಮತ್ತು ಸ್ವಯಂ ಸಂಯಮವನ್ನು ಕಲಿಸುತ್ತದೆ. ರಾಮನ ಭಕ್ತರು ಪ್ರದರ್ಶಿಸಿದ ತಾಳ್ಮೆ ಅಸಾಧಾರಣ. ಅವರೆಲ್ಲರ ಸಂಕಲ್ಪ ಸಾಕಾರಗೊಳ್ಳುತ್ತಿರುವ ಹೊತ್ತಿದು. ಅಯೋಧ್ಯೆ ತನ್ನ ಕಳೆದುಹೋದ ವೈಭವವನ್ನು ಮರಳಿ ಪಡೆಯುತ್ತಿದ್ದಂತೆ, ಇಡೀ ರಾಷ್ಟ್ರವು ಸಂತೋಷಪಡುತ್ತಿದೆ. ನಮ್ಮ ಈ ಸಂಕಲ್ಪವನ್ನು ಈಡೇರಿಸಲು ನಮಗೆ ಮಾರ್ಗದರ್ಶನ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
2024, ಜನವರಿ 22, ವೈಯಕ್ತಿಕವಾಗಿ ನನಗೆ ಅತ್ಯಂತ ಸಂತೋಷದ ಸಂದರ್ಭವಾಗಿದೆ. ರಾಮ ಜನ್ಮಭೂಮಿಯನ್ನು ವಿಮೋಚನೆಗೊಳಿಸುವ ಅಚಲ ಸಂಕಲ್ಪದ ಕ್ಷಣಗಳು ನನ್ನ ಮನಸ್ಸಿನಲ್ಲಿ ಹಾದುಹೋಗುತ್ತಿವೆ. ನಾನು ಸಾಗಿ ಬಂದ ಪಯಣವನ್ನು ನೆನಪಿಸುತ್ತಿದೆ.
ಶ್ರೀರಾಮ ಮಂದಿರ ನಿಮಾರ್ಣದ ಸಂಕಲ್ಪವೇ ನನ್ನನ್ನು ಗೌರವಾನ್ವಿತ ಗುರುದೇವ್ ಮಹಂತ್ ಅವೈದ್ಯನಾಥ್ ಜಿ ಮಹಾರಾಜ್ ಅವರ ಪುಣ್ಯಯುತ ಸಾನಿಧ್ಯಕ್ಕೆ ಕರೆದೊಯ್ದಿತು. ಮಂದಿರ ಚಳವಳಿಗೆ ಮಹತ್ವದ ಕೊಡುಗೆ ನೀಡಿದ ನನ್ನ ಅಜ್ಜ ಬ್ರಹ್ಮಲೀನ ಮಹಂತ್ ಶ್ರೀ ದಿಗ್ವಿಜಯನಾಥ್ ಜೀ ಮಹಾರಾಜ್ ಮತ್ತು ಗೌರವಾನ್ವಿತ ಗುರುದೇವ ಬ್ರಹ್ಮಲೀನ ಮಹಂತ ಶ್ರೀ ಅವೈದ್ಯನಾಥ್ ಜಿ ಮಹಾರಾಜ್ ಮತ್ತು ಇತರ ಕೆಲ ಪೂಜ್ಯ ಸಂತರು ನಮ್ಮೊಂದಿಗೆ ಭೌತಿಕವಾಗಿ ಇಲ್ಲ. ಆದರೆ, ಪ್ರಸ್ತುತ, ಅವರ ಆತ್ಮಗಳು ಖಂಡಿತವಾಗಿಯೂ ಅಪಾರವಾದ ತೃಪ್ತಿಯನ್ನು ಅನುಭವಿಸುತ್ತಿರಬೇಕು.
ಶ್ರೀ ರಾಮ ಜನ್ಮಭೂಮಿಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯ ದಿನಾಂಕ ಘೊಷಣೆಯಾದ ನಂತರ, ಪ್ರತಿಯೊಬ್ಬ ಸನಾತನ ಭಕ್ತರ ನಿರೀಕ್ಷೆ ಸ್ಪಷ್ಟವಾಗಿದೆ, ಎಲ್ಲರೂ ಕುತೂಹಲದಿಂದ ಜನವರಿ 22ಕ್ಕಾಗಿ ಕಾಯುತ್ತಿದ್ದಾರೆ. ಈಗ ಇಡೀ ರಾಷ್ಟ್ರವನ್ನು ವ್ಯಾಪಿಸಿರುವ ಸಾಮೂಹಿಕ ಸಂತೋಷ ಮತ್ತು ಸಂಭ್ರಮಾಚರಣೆಯ ವಾತಾವರಣವು ಇತ್ತೀಚಿನ ಶತಮಾನಗಳಲ್ಲಿ ಕಂಡುಬಂದಿಲ್ಲ. ಶೈವ, ವೈಷ್ಣವ, ಶಾಕ್ತ, ಗಣಪತ್ಯ, ಪಾತ್ಯ, ಸಿಖ್, ಬೌದ್ಧ, ಜೈನ,ದರ್ಶನಂ ಶಂಕರ, ರಮಾನಂದ, ರಾಮಾನುಜ, ನಿಂಬಾರ್ಕ, ಮಾಧ್ವ,, ವಿಷ್ಣು ನಾಮಿ, ರಾಮಸನೇಹಿ, ಘೀಸಾಪಂಥ್, ಗರೀಬ್ದಾಸಿ, ಅಕಾಲಿ, ನಿರಂಕಾರಿ, ಗೌಡಿಯ, ಕಬೀರಪಂಥಿ- ಹೀಗೆ ವೈವಿಧ್ಯಮಯ ಆಧ್ಯಾತ್ಮಿಕ ಸಂಪ್ರದಾಯಗಳ ಸಂಗಮ ಕಾಣುವ ಅದೃಷ್ಟ ನಮ್ಮದಾಗಿದೆ. 150ಕ್ಕೂ ಹೆಚ್ಚು ಸಂಪ್ರದಾಯಗಳ ಸಂತರ ಜೊತೆಗೆ, ಅರಣ್ಯ-ಗುಡ್ಡದ ನಿವಾಸಿಗಳು, ಬುಡಕಟ್ಟು ಗುಂಪುಗಳು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಸೇರಿದಂತೆ 50ಕ್ಕೂ ಹೆಚ್ಚು ಸಮುದಾಯಗಳ ಪ್ರಮುಖ ವ್ಯಕ್ತಿಗಳು, ರಾಜಕೀಯ, ವಿಜ್ಞಾನ, ಕೈಗಾರಿಕೆ, ಕ್ರೀಡೆ, ಕಲೆ, ಸಂಸ್ಕೃತಿ ಮತ್ತು ಸಾಹಿತ್ಯ, ಎಲ್ಲವೂ ಒಂದೇ ಛತ್ರಿದಡಿಯಲ್ಲಿ ಜ.22ರಂದು ಸಮಾಗಮವಾಗುತ್ತಿರುವುದು ನಿಜವಾಗಿಯೂ ಅಭೂತಪೂರ್ವ ಮತ್ತು ಅನನ್ಯ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಾಲರಾಮನ ಮುಂದೆ 140 ಕೋಟಿ ಭಾರತೀಯರ ಭಾವನೆಗಳನ್ನು ನಿರರ್ಗಳವಾಗಿ ತಿಳಿಸಲಿದ್ದಾರೆ, ಅಯೋಧ್ಯಾಧಾಮವನ್ನು ‘ಮಿನಿ ಭಾರತ’ವಾಗಿ ಆಗಿ ಪರಿವರ್ತಿಸುತ್ತಾರೆ.
ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ನಂತರ, ಅಯೋಧ್ಯಾಧಾಮವು ಪ್ರಪಂಚದಾದ್ಯಂತದ ಭಕ್ತರು, ಪ್ರವಾಸಿಗರು, ಸಂಶೋಧಕರು ಮತ್ತು ಜಿಜ್ಞಾಸೆಯ ಮನಸ್ಸುಗಳಿಗೆ ಸ್ವಾಗತಿಸಲು ಸಿದ್ಧವಾಗಿದೆ. ಈ ನಿಟ್ಟಿನಲ್ಲಿ, ಅಯೋಧ್ಯಾಪುರಿಯು ಪ್ರಧಾನಮಂತ್ರಿಯವರ ದೂರದೃಷ್ಟಿಯ ಯೋಜನೆಗಳಿಗೆ ಅನುಗುಣವಾಗಿ ನಿಖರವಾದ ಸಿದ್ಧತೆಗಳನ್ನು ನಡೆಸುತ್ತಿದೆ. ಹೊಸ ವಿಮಾನ ನಿಲ್ದಾಣ, ನವೀಕರಿಸಲ್ಪಟ್ಟ ರೈಲ್ವೆ ನಿಲ್ದಾಣ, 4-6 ಲೇನ್​ಗಳ ಸುಸಜ್ಜಿತ ರಸ್ತೆಗಳು, ಹೆಲಿಕಾಪ್ಟರ್ ಸೇವೆ, ಹೋಟೆಲ್​ಗಳು, ಅತಿಥಿಗೃಹಗಳು- ಹೀಗೆ ನವೋದಯಕ್ಕೆ ಸಜ್ಜಾಗಿರುವ ಅಯೋಧ್ಯೆ ಈಗ ದೇಶವನ್ನು ಎಲ್ಲ ಕಡೆಯಿಂದಲೂ ಬೆಸೆಯಲಿದೆ.
ಹೊಸ ಅಯೋಧ್ಯೆಯಲ್ಲಿ, ಪ್ರಾಚೀನ ಸಂಸ್ಕೃತಿ ಮತ್ತು ನಾಗರಿಕತೆಯ ಸಂರಕ್ಷಣೆಯು ಅತ್ಯಾಧುನಿಕ ನಗರ ಸೌಲಭ್ಯಗಳ ಏಕೀಕರಣದೊಂದಿಗೆ ಸೇರಿಕೊಂಡು, ಭವಿಷ್ಯದ ಬೇಡಿಕೆಗಳನ್ನು ಪೂರೈಸಲು ನಿಖರವಾಗಿ ವಿನ್ಯಾಸಗೊಳಿಸಲಾಗಿದೆ. ಈ ಉಪಕ್ರಮದ ಭಾಗವಾಗಿ, ಅಯೋಧ್ಯೆಯ ಪಂಚಕೋಸಿ, 14 ಕೋಸಿ ಮತ್ತು 84 ಕೋಸಿ ಪರಿಕ್ರಮದ ವ್ಯಾಪ್ತಿಯಲ್ಲಿರುವ ಧಾರ್ವಿುಕ, ಪೌರಾಣಿಕ ಮತ್ತು ಐತಿಹಾಸಿಕ ಸ್ಥಳಗಳ ತ್ವರಿತ ಪುನರುಜ್ಜೀವನ ಯೋಜನೆ ಒಳಗೊಂಡಿದೆ. ಈ ಸಂಘಟಿತ ಪ್ರಯತ್ನಗಳು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಕೊಡುಗೆ ನೀಡುವುದು ಮಾತ್ರವಲ್ಲದೆ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಈ ಪ್ರದೇಶದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನೆರವಾಗಲಿವೆ.
ಶ್ರೀರಾಮ ಜನ್ಮಭೂಮಿ ದೇವಾಲಯದ ಉದ್ಘಾಟನೆಯು ಭಾರತದಲ್ಲಿ ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಸಾಕ್ಷಿಯಾಗಲಿದೆ. ಇದು ಕೇವಲ ದೇವಾಲಯವಲ್ಲ, ರಾಷ್ಟ್ರೀಯ ದೇವಾಲಯವಾಗಿದೆ. ಶ್ರೀರಾಮಲಲ್ಲಾನ ಪ್ರತಿಷ್ಠಾಪನೆಯು ಇಡೀ ರಾಷ್ಟ್ರವನ್ನು ಹೆಮ್ಮೆಯಿಂದ ಹಿಗ್ಗಿಸುವ ಮಹತ್ವದ ಸಂದರ್ಭವಾಗಿದೆ. ರಾಮನ ಮರಳುವಿಕೆ ಮೂಲಕ, ಅಯೋಧ್ಯೆಯ ಸಾಂಪ್ರದಾಯಿಕ ಪರಿಕ್ರಮದ ಪಾವಿತ್ರ್ಯತೆ ಈಗ ಭದ್ರವಾಗಿದೆ; ಯಾವುದೇ ಅಡಚಣೆಗಳು ಅದರ ಪವಿತ್ರ ಮಾರ್ಗವನ್ನು ಹಾಳುಮಾಡುವುದಿಲ್ಲ. ಅಯೋಧ್ಯೆಯ ಓಣಿಗಳಲ್ಲಿ ಗುಂಡುಗಳು ಪ್ರತಿಧ್ವನಿಸುವುದಿಲ್ಲ, ಸರಯೂ ತೀರದಲ್ಲಿ ರಕ್ತದ ಕಲೆ ಕಾಣಿಸುವುದಿಲ್ಲ ಮತ್ತು ಕರ್ಫ್ಯೂ ವಿನಾಶವನ್ನು ಉಂಟುಮಾಡುವುದಿಲ್ಲ. ಬದಲಾಗಿ, ರಾಮನಾಮ ಸಂಕೀರ್ತನೆಯ ಅನುರಣನ ಪ್ರತಿಧ್ವನಿಸುತ್ತ ಸಂಭ್ರಮ ನೆಲೆಗೊಳ್ಳುತ್ತದೆ. ಅವಧಪುರಿಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ಭಾರತದಲ್ಲಿ ರಾಮರಾಜ್ಯದ ಸ್ಥಾಪನೆಯ ಸಾಕಾರಕ್ಕೆ ನಾಂದಿ ಹಾಡುತ್ತದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × five =
Remember me
