ನವದೆಹಲಿ:ಜಾಗತಿಕ ರೇಟಿಂಗ್ಸ್​ ಸಂಸ್ಥೇಯಾದ ಫಿಚ್ ರೇಟಿಂಗ್ಸ್ ಮಂಗಳವಾರದಂದು ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯನ್ನು ಶೇ. 7.2 ಕ್ಕೆ ಏರಿಸಿದೆ. ಮಾರ್ಚ್‌ನಲ್ಲಿ ಈ ಬೆಳವಣಿಗೆ ದರವನ್ನು ಶೇ. 7 ಎಂದು ಫಿಚ್​ ಅಂದಾಜಿಸಿತ್ತು. ಗ್ರಾಹಕರ ವೆಚ್ಚದಲ್ಲಿ ಚೇತರಿಕೆ ಮತ್ತು ಹೆಚ್ಚಿದ ಹೂಡಿಕೆ ಕಾರಣದಿಂದಾಗಿ ಈ ಏರಿಕೆಯನ್ನು ಅದು ಮಾಡಿದೆ.
2025-26 ಮತ್ತು 2026-27ರ ಹಣಕಾಸು ವರ್ಷಗಳಿಗೆ, ಫಿಚ್ ಅನುಕ್ರಮವಾಗಿ ಶೇ 6.5 ಮತ್ತು ಶೇ 6.2 ಬೆಳವಣಿಗೆ ದರಗಳನ್ನು ಅಂದಾಜಿಸಿದೆ.
ಹಣಕಾಸು ವರ್ಷದ 2024-25ರಲ್ಲಿ ಭಾರತದ ಆರ್ಥಿಕತೆಯು ಪ್ರಬಲವಾದ 7.2 ಪ್ರತಿಶತದಷ್ಟು ವಿಸ್ತರಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಫಿಚ್ ತನ್ನ ಜಾಗತಿಕ ಆರ್ಥಿಕ ದೃಷ್ಟಿಕೋನ ವರದಿಯಲ್ಲಿ ಹೇಳಿದೆ.
ಫಿಚ್‌ನ ಅಂದಾಜುಗಳು ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್‌ಬಿಐ) ನಿರೀಕ್ಷಿಗೆ ಅನುಗುಣವಾಗಿವೆ. ಈ ತಿಂಗಳ ಆರಂಭದಲ್ಲಿ, ಗ್ರಾಮೀಣ ಬೇಡಿಕೆ ಸುಧಾರಿಸುವ ಮತ್ತು ಹಣದುಬ್ಬರ ನಿಯಂತ್ರಣ ಹಿನ್ನೆಲೆಯಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತೀಯ ಆರ್ಥಿಕತೆಯು ಶೇ. 7.2 ರಷ್ಟು ವಿಸ್ತರಿಸಲಿದೆ ಎಂದು ಆರ್‌ಬಿಐ ಅಂದಾಜಿಸಿದೆ.
ಹೂಡಿಕೆಯು ಹೆಚ್ಚಾಗುತ್ತಲೇ ಹೋಗುತ್ತದೆಯಾದರೂ, ಇತ್ತೀಚಿನ ತ್ರೈಮಾಸಿಕಗಳಿಗಿಂತ ನಿಧಾನವಾಗಿ ಇದು ಆಗಲಿದೆ. ಗ್ರಾಹಕರ ಉನ್ನತ ವಿಶ್ವಾಸದೊಂದಿಗೆ ಗ್ರಾಹಕರ ಖರ್ಚು ಚೇತರಿಸಿಕೊಳ್ಳುತ್ತದೆ ಎಂದು ಅದು ಹೇಳಿದೆ.
ಮುಂಬರುವ ಮಾನ್ಸೂನ್ ಋತುವು ಸಹಜವಾಗಿರಲಿದೆ ಎಂಬ ಸಂಕೇತಗಳಿದ್ದು, ಇವು ಬೆಳವಣಿಗೆಯನ್ನು ಬೆಂಬಲಿಸಬಹುದು ಮತ್ತು ಹಣದುಬ್ಬರವನ್ನು ಕಡಿಮೆ ಅಸ್ಥಿರಗೊಳಿಸಬಹುದು. ಆದರೂ ಇತ್ತೀಚಿನ ಶಾಖದ ಅಲೆಗಳು ಅಪಾಯ ಒಡ್ಡುತ್ತಿವೆ ಎಂದು ಅದು ಹೇಳಿದೆ.
“ಮುಂಬರುವ ವರ್ಷಗಳಲ್ಲಿ ಬೆಳವಣಿಗೆಯು ನಿಧಾನಗೊಳ್ಳಲಿದ್ದು, ನಮ್ಮ ಮಧ್ಯಮ ಅವಧಿಯ ಪ್ರವೃತ್ತಿಯ ಅಂದಾಜನ್ನು ಸಮೀಪಿಸುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ. ಬೆಳವಣಿಗೆಯು ಗ್ರಾಹಕರ ಖರ್ಚು ಮತ್ತು ಹೂಡಿಕೆಯಿಂದ ನಡೆಸಲ್ಪಡುತ್ತದೆ ಎಂದು ಅದು ಹೇಳಿದೆ.
ಕಳೆದ ಹಣಕಾಸು ವರ್ಷದಲ್ಲಿ (2023-24) ಭಾರತದ ಆರ್ಥಿಕತೆಯು ಶೇ 8.2ರಷ್ಟು ಬೆಳವಣಿಗೆಯಾಗಿದೆ.
2024ರ ಅಂತ್ಯದ ವೇಳೆಗೆ ಹಣದುಬ್ಬರವು ಶೇಕಡಾ 4.5 ಕ್ಕೆ ಮತ್ತು 2025 ಮತ್ತು 2026 ರಲ್ಲಿ ಸರಾಸರಿ ಶೇಕಡಾ 4.3 ಕ್ಕೆ ಇಳಿಕೆಯಾಗಲಿದೆ ಎಂದು ಫಿಚ್ ನಿರೀಕ್ಷಿಸುತ್ತದೆ.
ಆರ್‌ಬಿಐ ಈ ವರ್ಷ 25 ಮೂಲಾಂಕಗಳಿಂದ ಬಡ್ಡಿ ದರಗಳನ್ನು ಶೇಕಡಾ 6.25 ಕ್ಕೆ ಇಳಿಸುವ ನಿರೀಕ್ಷೆಯಿದೆ ಎಂದು ಫಿಚ್ ಹೇಳಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − six =
Remember me
