. 2025ಕ್ಕೆ ಭಾರತ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆ. ಪಾನಿಗರಲ್ಲಿ ಆತಂಕ ಸೃಷ್ಟಿಸಿದ ಐಎಂಎಫ್ ಭವಿಷ್ಯ
ನವದೆಹಲಿ:ಮುಂದಿನ ವರ್ಷ (2025) ಭಾರತವು ವಿಶ್ವದಲ್ಲೇ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭವಿಷ್ಯ ನುಡಿದಿರುವುದು ಜಪಾನ್​ನ ಉದ್ಯಮ ವಲಯದಲ್ಲಿ ಭಾರಿ ತಲ್ಲಣ ಉಂಟು ಮಾಡಿದೆ.
ಭಾರತದ ಸಾಂಕೇತಿಕ ಒಟ್ಟು ದೇಶೀಯ ಉತ್ಪನ್ನ (ಎನ್​ಜಿಡಿಪಿ) 2025ರಲ್ಲಿ ಜಪಾನ್​ನ ಎನ್​ಜಿಡಿಪಿಯನ್ನು ಮೀರಿ ಬೆಳೆಯಲಿದ್ದು, ಆ ಮೂಲಕ ಭಾರತ ಜಗತ್ತಿನ 4ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ. ಜಪಾನ್​ನ ಎನ್​ಜಿಡಿಪಿ 4.31 ಟ್ರಿಲಿಯನ್ ಡಾಲರ್ ಇದ್ದು, ಭಾರತದ ಎನ್​ಜಿಡಿಪಿ ಮುಂದಿನ ವರ್ಷ 4.34 ಟ್ರಿಲಿಯನ್ ಡಾಲರ್​ಗೆ ತಲುಪಲಿದೆ ಎಂದು ಐಎಂಎಫ್ ಇತ್ತೀಚೆಗೆ ಹೇಳಿದೆ.
ಜಪಾನ್​ನ ಜಿಡಿಪಿಯನ್ನು 2023ರಲ್ಲಿ ಜರ್ಮನಿ ಹಿಂದೆ ಹಾಕಿತ್ತು. ಈಗ ಭಾರತವೂ ಹಿಂದಿಕ್ಕಿದರೆ ಜಪಾನ್ ಐದನೇ ಸ್ಥಾನಕ್ಕೆ ಕುಸಿಯಲಿದೆ. ಐಎಂಎಫ್ ಈ ಮೊದಲು ಇಂತಹ ಬೆಳವಣಿಗೆ 2026ಕ್ಕೆ ನಡೆಯಲಿದೆ ಎಂದಿತ್ತು. ಆದರೆ ಇದು ಒಂದು ವರ್ಷ ಮುಂಚೆಯೇ ನಡೆಯುತ್ತಿರುವುದು ಜಪಾನ್​ನ ಆತಂಕಕ್ಕೆ ಕಾರಣವಾಗಿದೆ.
ಜಾಗತಿಕ ಆರ್ಥಿಕ ಬೆಳವಣಿಗೆ ಬಗ್ಗೆ ಆರ್ಗನೈಸೇಷನ್ ಫಾರ್ ಎಕನಾಮಿಕ್ ಕೋಆಪರೇಷನ್ ಆಂಡ್ ಡೆವಲಪ್​ವೆುಂಟ್ (ಒಇಸಿಡಿ) ಮೇ 2ರಂದು ಹೊಸ ವರದಿ ಬಿಡುಗಡೆ ಮಾಡಿದ್ದು, ಅದರಿಂದ ಜಪಾನ್ ಮೇಲಿನ ಒತ್ತಡ ಇನ್ನಷ್ಟು ಹೆಚ್ಚಾಗಿದೆ. ಜಾಗತಿಕ ವೃದ್ಧಿ ಈ ವರ್ಷ ಶೇ. 3.1ರಷ್ಟಾಗಲಿದ್ದು, ಜಪಾನ್​ನ ಆರ್ಥಿಕ ವೃದ್ಧಿಯ ದರ ಶೇ. 0.5ರಿಂದ ಶೇ. 1ರಷ್ಟಿರಲಿದೆ ಎಂದು ಒಇಸಿಡಿ ತಿಳಿಸಿದೆ. ಯೂಕ್ರೇನ್ ಯುದ್ಧದಂತಹ ಭೌಗೋಳಿಕ-ರಾಜಕೀಯ ಘಟನೆಗಳು ಇದಕ್ಕೆ ಕಾರಣ ಎಂದು ಅದು ಅಭಿಪ್ರಾಯಪಟ್ಟಿದೆ. ಒಮಿಕ್ರಾನ್ ಅಲೆಯಿಂದ ಆಗಲೇ ಕುಸಿದಿದ್ದ ಜಪಾನ್ ಕಂಪನಿಗಳ ಆರ್ಥಿಕ ಚಟುವಟಿಕೆ ಯುದ್ಧದಿಂದಾಗಿ ಮತ್ತಷ್ಟು ಸಮಸ್ಯೆಗೆ ಸಿಲುಕಿದೆ. ಜಾಪನೀಸ್ ಕರೆನ್ಸಿ ಯೆನ್​ನ ಅನಿಶ್ಚಿತತೆ ಕೂಡ ಆ ರಾಷ್ಟ್ರದ ಉದ್ಯಮಿಗಳ ಆತ್ಮವಿಶ್ವಾಸವನ್ನು ಉಡುಗಿಸಿದೆ. ಆಮದು ವೆಚ್ಚ ಹೆಚ್ಚಿದ್ದು, ರಫ್ತು ಪ್ರಮಾಣ ಕುಸಿದಿದೆ. ಜಪಾನ್​ನ ರಫ್ತು ಪ್ರಮಾಣವು ಕಳೆದ ಎರಡೂವರೆ ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿದೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಜಪಾನ್ ತನ್ನ ರಫ್ತಿಗೆ ಅತಿ ಹೆಚ್ಚು ನೆಚ್ಚಿಕೊಂಡಿರುವುದು ಚೀನಾವನ್ನು. ಆದರೆ ಚೀನಾದಿಂದ ಇತ್ತೀಚೆಗೆ ಹೆಚ್ಚಿನ ಆರ್ಡರ್​ಗಳು ಜಪಾನ್​ಗೆ ದೊರೆಯುತ್ತಿಲ್ಲ. ಇದಕ್ಕೆ ಕಾರಣ- ಸ್ವತಃ ಚೀನಾದ ಆರ್ಥಿಕತೆಯೇ ಸಂಕಷ್ಟದಲ್ಲಿರುವುದು. ಆಮದಿಗೆ ಚೀನಾ ಮಾರುಕಟ್ಟೆಯನ್ನು ಮುಕ್ತಗೊಳಿಸಲು ಆ ರಾಷ್ಟ್ರದ ಅಧ್ಯಕ್ಷ ಷಿ ಮನಸ್ಸು ಮಾಡುತ್ತಿಲ್ಲ.
ಭಾರತದ್ದು ಬೇರೆಯದೇ ಕಥೆ:2023ರ ಜೂನ್​ನಿಂದ ಸೆಪ್ಟೆಂಬರ್​ವರೆಗಿನ ತ್ರೖೆಮಾಸಿಕದಲ್ಲಿ ಶೇ. 7.6ರಷ್ಟು ಆರ್ಥಿಕ ವೃದ್ಧಿ ದಾಖಲಾಗಬಹುದೆಂದು ಸರ್ಕಾರ ಅಂದುಕೊಂಡಿದ್ದರೆ, ಆ ವರ್ಷದ ಕೊನೆಯ ತಿಂಗಳುಗಳಲ್ಲಿ 8.4ರಷ್ಟು ವೃದ್ಧಿ ದಾಖಲಾಯಿತು. ವಿಜೃಂಭಿಸುತ್ತಿರುವ ಷೇರುಮಾರುಕಟ್ಟೆ, ಪ್ರಬಲ ದೇಶೀಯ ಬಳಕೆ, ಸ್ಥಿರವಾಗಿರುವ ರೂಪಾಯಿ ಬೆಲೆ, ಹೆಚ್ಚಿರುವ ರಫ್ತು ಪ್ರಮಾಣ ಮುಂತಾದವು ಭಾರತದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಬಿಜೆಪಿ ಮುಖಂಡ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 5 =
Remember me
