ನವದೆಹಲಿ:ಡಿಸೆಂಬರ್​ನಲ್ಲಿ ದೇಶದ ನಿರುದ್ಯೋಗ ಪ್ರಮಾಣ ಶೇ. 8.3 ಇದ್ದು, 16 ತಿಂಗಳಲ್ಲಿ ಅತ್ಯಧಿಕ ಮಟ್ಟದ್ದಾಗಿದೆ ಎಂದು ಭಾರತೀಯ ಆರ್ಥಿಕತೆ ನಿಗಾ ಕೇಂದ್ರ (ಸಿಎಂಐಇ) ಹೇಳಿದೆ.
ನಗರ ಪ್ರದೇಶದಲ್ಲಿ ನಿರುದ್ಯೋಗ ಪ್ರಮಾಣವು ಶೇ. 10.09 ಇದ್ದರೆ (ನವೆಂಬರ್​ನಲ್ಲಿ ಶೇ. 8.96), ಗ್ರಾಮೀಣ ಭಾಗದಲ್ಲಿ ಇದ್ದು ಶೇ. 7.44 (ನವೆಂಬರ್​ನಲ್ಲಿ ಶೇ. 7.55) ಇದೆ. ನಿರುದ್ಯೋಗ ಪ್ರಮಾಣ ಕಡಿಮೆಯಾಗಿದ್ದರೂ ಕಾರ್ವಿುಕರ ಪಾಲ್ಗೊಳ್ಳುವಿಕೆಯು ಶೇ. 40.48 ಇದ್ದು, 12 ತಿಂಗಳಲ್ಲೇ ಅಧಿಕ ಮಟ್ಟದಾಗಿದೆ. ಉದ್ಯೋಗದ ದರ ಶೇ. 37.1 ಇದ್ದು, 2022ರಲ್ಲೇ ಇದು ಹೆಚ್ಚಿನದ್ದಾಗಿದೆ ಎಂದು ಸಿಎಂಐಇ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ವ್ಯಾಸ್ ಹೇಳಿದ್ದಾರೆ.
ಮೊದಲ ತ್ರೈಮಾಸಿಕದಲ್ಲಿ ಶೇ. 7.6 ಇದ್ದ ನಿರುದ್ಯೋಗ ಪ್ರಮಾಣ, ಎರಡನೇ ತ್ರೈಮಾಸಿಕದಲ್ಲಿ ಶೇ. 7.2ಕ್ಕೆ ಇಳಿದಿತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಮಾಹಿತಿ ತಿಳಿಸಿದೆ. ಒಂದೆಡೆ ಹಣದುಬ್ಬರ ಇದ್ದರೆ ಇನ್ನೊಂದೆಡೆ ಯುವ ಸಮುದಾಯದಲ್ಲಿ ನಿರುದ್ಯೋಗ ಪ್ರಮಾಣ ಏರುತ್ತಿದೆ. ಈ ಸಮಸ್ಯೆ ನಿವಾರಣೆಯ ಜತೆಗೆ ಜಿಡಿಪಿಯ ಪ್ರಗತಿಯನ್ನು ಹೆಚ್ಚಿಸಿಕೊಳ್ಳುವ ಅಗತ್ಯ ಸರ್ಕಾರದ ಮೇಲಿದೆ. ಏಕೆಂದರೆ 2024ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕೆ ಇವು ದೊಡ್ಡ ಸವಾಲಾಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + eleven =
Remember me
