ನವದೆಹಲಿ:ಭಾರತದಲ್ಲಿ ಕಳೆದ ಏಪ್ರಿಲ್​ನಿಂದ ಈ ವರ್ಷದ ಫೆಬ್ರವರಿವರೆಗೆ ವಿದ್ಯುತ್ ಬೇಡಿಕೆ ಶೇ. 10ರಷ್ಟು ಏರಿಕೆ ಆಗಿದ್ದು, ಈ ಹನ್ನೊಂದು ತಿಂಗಳಲ್ಲಿ ವಿದ್ಯುತ್ ಬಳಕೆಯು 1375.57 ಶತಕೋಟಿ ಯೂನಿಟ್​ಗೆ ತಲುಪಿದೆ. ಇದು ಈ ಸಾರಿ ಬೇಸಿಗೆ ಪ್ರಖರವಾಗುವುದಕ್ಕೂ ಮುನ್ನವೇ ದೇಶದಲ್ಲಿ ವಿದ್ಯುತ್ ಬೇಡಿಕೆ ಅಧಿಕವಾಗುವ ಸೂಚನೆಯನ್ನು ನೀಡಿದೆ. ಹೀಗಾಗಿ ವಿದ್ಯುತ್ ಬೇಡಿಕೆಯನ್ನು ಪೂರೈಸುವಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳಲು ಎಲ್ಲ ವಿದ್ಯುತ್ ಪ್ರಸರಣ ಸಂಸ್ಥೆಗಳಿಗೆ ಕೇಂದ್ರ ವಿದ್ಯುತ್ ಸಚಿವಾಲಯ ಸೂಚಿಸಿದೆ.
2021-22ರ ಏಪ್ರಿಲ್-ಫೆಬ್ರವರಿ ಯಲ್ಲಿ 1245.54 ಶತಕೋಟಿ ಯೂನಿಟ್ ವಿದ್ಯುತ್ ಬಳಕೆ ಆಗಿತ್ತು. ಮುಂದಿನ ಏಪ್ರಿಲ್​ನಲ್ಲಿ 228 ಗಿಗಾವಾಟ್ ವಿದ್ಯುತ್ ಅಗತ್ಯ ಬೀಳುವ ಅಂದಾಜಿದೆ. 2022ರ ಏಪ್ರಿಲ್​ನಲ್ಲಿ 215.88 ಗಿಗಾವಾಟ್ ಕರೆಂಟ್ ಬಳಕೆ ಆಗಿತ್ತು. ಮಾರ್ಚ್ 16ರಿಂದ ಜೂನ್ 15ರವರೆಗೆ ಪೂರ್ಣ ಸಾಮರ್ಥ್ಯದೊಂದಿಗೆ ಉತ್ಪಾದನೆ ಮಾಡುವಂತೆ ದೇಶದ ಎಲ್ಲ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕೇಂದ್ರ ಸಚಿವಾಲಯ ಸೂಚಿಸಿದೆ.
ಕಲ್ಲಿದ್ದಲು ಕೊರತೆ ದೂರಮಾಡಲು ಅದನ್ನು ಆಮದು ಮಾಡಿಕೊಂಡು ದೇಶೀಯ ಮತ್ತು ವಿದೇಶಿ ಕಲ್ಲಿದ್ದಲನ್ನು ಮಿಶ್ರ ಮಾಡಿಬಳಸುವಂತೆಯೂ ಹೇಳಿದೆ. ಬೇಸಿಗೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಬೇಡಿಕೆಗಳು ಹೆಚ್ಚಳವಾಗಲಿವೆ. ಜತೆಗೆ ತಾಪಮಾನ ಹೆಚ್ಚಿರುವ ಕಾರಣ ಏಸಿ ಬಳಕೆ ಅಧಿಕವಾಗಲಿದೆ. ಇದರಿಂದ ವಿದ್ಯುತ್ ಬೇಡಿಕೆ ಹೆಚ್ಚಿಲಿದ್ದು, ಲೋಡ್​ಶೆಡ್ಡಿಂಗ್ ಇಲ್ಲದೆ ಪರಿಸ್ಥಿತಿ ನಿಭಾಯಿಸುವ ಸವಾಲು ವಿದ್ಯುತ್ ಪ್ರಸರಣ ನಿಗಮಗಳಿಗೆ ಎದುರಾಗಲಿದೆ ಎಂದು ತಜ್ಞರು ಹೇಳಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × 3 =
Remember me
