ತಿರುವನಂತಪುರ:ಭಾರತದಲ್ಲಿ ಕೊರೊನಾ ವೈರಸ್​ ಪ್ರಥಮವಾಗಿ ಪತ್ತೆಯಾಗಿದ್ದು ಕೇರಳದಲ್ಲಿ. ಮಹಿಳೆಯೋರ್ವರಿಗೆ ಕೊರೊನಾ ಸೋಂಕು ತಗುಲಿದ್ದು ದೃಢಪಟ್ಟಿತ್ತು.
ಕೇರಳದ ತ್ರಿಶೂರ್​ ವೈದ್ಯಕೀಯ ಕಾಲೇಜಿನಲ್ಲಿ ಪ್ರತ್ಯೇಕ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆ ಮಹಿಳೆ ಈಗ ಗುಣಮುಖರಾಗುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕೊರೊನಾ ಸೋಂಕಿತ ಮಹಿಳೆಯ ರಕ್ತದ ಮಾದರಿಯನ್ನು ಅಲಪ್ಪುಳದಲ್ಲಿರುವ ವೈರಾಲಜಿ ಇನ್ಸ್ಟಿಟ್ಯೂಟ್​ಗೆ ಕಳಿಸಲಾಗಿತ್ತು. ನೆಗೆಟಿವ್​ ಎಂದು ವರದಿ ಬಂದಿದೆ. ಅಂದರೆ ಕೊರೊನಾ ಸೋಂಕು ಮುಕ್ತವಾಗಿದೆ ಎಂದರ್ಥ.
ಹಾಗೇ ಅದೇ ಮಾದರಿಯನ್ನು ಮರುಪರಿಶೀಲನೆಗಾಗಿ ಪುಣೆಯ ನ್ಯಾಷನಲ್​ ಇನ್ಸ್ಟಿಟ್ಯೂಟ್ ಆಫ್​ ವೈರಾಲಜಿ ಗೂ ಕಳಿಸಿಕೊಡಲಾಗಿದೆ. ರೋಗಿಯ ರಕ್ತದ ಮಾದರಿಯನ್ನು ಮೂರನೇ ಬಾರಿಗೆ ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್​ ಎಂದು ವರದಿ ಬಂದರೆ ಅವರನ್ನು ಡಿಸ್​ಚಾರ್ಜ್​ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕೊರೊನಾ ಪೀಡಿತ ಯುವತಿ ಮೆಡಿಕಲ್​ ಸ್ಟುಡೆಂಟ್​. ಚೀನಾದ ವುಹಾನ್​ನಿಂದ ಕೇರಳಕ್ಕೆ ಬಂದಿದ್ದಳು. ಇವರಲ್ಲದೆ ಇನ್ನೂ ಇಬ್ಬರಿಗೆ ಸೋಂಕು ತಗುಲಿದೆ. ಅವರಿಗೆ ಅಲಪ್ಪುಳ ಹಾಗೂ ಕಾಸರಗೋಡು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯವೂ ಸ್ಥಿರವಾಗಿದೆ. ಕೊರೊನಾ ವೈರಸ್​ ಪೀಡಿತ ಮೂವರೂ ಕೂಡ ಒಟ್ಟಿಗೇ ಪ್ರಯಾಣ ಮಾಡಿದ್ದರು ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಕೇರಳದಲ್ಲಿ ಒಟ್ಟು 3218 ಜನರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿಟ್ಟು ಅವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. 34 ಜನರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ, ಅವರ ಆರೋಗ್ಯದ ಮೇಲೆ ಗಮನ ಇಡಲಾಗಿದೆ. ಒಟ್ಟು 345 ಜನರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಅದರಲ್ಲಿ 326 ಜನರಲ್ಲಿ ವೈರಸ್ ಇಲ್ಲ ಎಂದು ವರದಿ ಬಂದಿದೆ. ಉಳಿದವರ ವೈದ್ಯಕೀಯ ವರದಿ ಇನ್ನೂ ಬರಬೇಕು ಎಂದು ಕೇರಳ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 14 =
Remember me
