ನವದೆಹಲಿ:ಭಾರತದಲ್ಲಿ ಕರೊನಾ ಸೋಂಕಿಗೆ ಒಳಗಾಗಿದ್ದ ಮೊದಲ ವ್ಯಕ್ತಿಗೆ ಈಗ ಮತ್ತೊಮ್ಮೆ ಸೋಂಕು ದೃಢಪಟ್ಟಿದೆ. ಕೇರಳದ ತ್ರಿಶೂರ್​ನಲ್ಲಿ ನೆಲೆಸಿರುವ ಈ 20 ವರ್ಷದ ಯುವತಿಗೆ ಜುಲೈ 13ರಂದು ಸೋಂಕು ದೃಢಪಟ್ಟಿದ್ದು, ಇದೀಗ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.
2020ರ ಜನವರಿಯಲ್ಲಿ ಕೇರಳದಲ್ಲಿ ಪತ್ತೆಯಾಗಿದ್ದ ಕೋವಿಡ್​ ಸೋಂಕಿತೆ ಭಾರತದ ಪ್ರಪ್ರಥಮ ಕೋವಿಡ್​-19 ಸೋಂಕಿತೆ. ಈಕೆ ಚೀನಾದ ವುಹಾನ್​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕೇರಳಕ್ಕೆ ಬರುತ್ತಿದ್ದಂತೆ ಪರೀಕ್ಷೆಗೆ ಒಳಗಾಗಿದ್ದು, ಆಗ ಕೋವಿಡ್ ಸೋಂಕಿರುವುದು ದೃಢಪಟ್ಟಿತ್ತು.
ಇದನ್ನೂ ಓದಿ:ಇತ್ತೀಚೆಗೆ ಕೋವಿಡ್​ನಿಂದ ಸತ್ತವರಲ್ಲಿ ಶೇ.99.2 ಮಂದಿ ಲಸಿಕೆ ಪಡೆಯದವರೇ!; ಹೀಗಾಗಿದ್ದು ಎಲ್ಲಿ ಗೊತ್ತಾ?
ಇದೀಗ ಆಕೆ ಮತ್ತೊಮ್ಮೆ ಕೋವಿಡ್​-19 ಪರೀಕ್ಷೆಗೆ ಒಳಗಾಗಿದ್ದು, ಸೋಂಕಿರುವುದು ಇಂದು ದೃಢಪಟ್ಟಿದೆ. ಈಕೆಯಲ್ಲಿ ರೋಗಲಕ್ಷಣಗಳು ಕಂಡುಬರದಿದ್ದರೂ ಸದ್ಯಕ್ಕೆ ಮನೆಯಲ್ಲೇ ಐಸೋಲೇಷನ್​ಗೆ ಒಳಗಾಗಿದ್ದಾರೆ ಎಂದು ಜಿಲ್ಲಾ ವೈದ್ಯಕೀಯ ಅಧಿಕಾರಿ ತಿಳಿಸಿದ್ದಾರೆ. ಅಂದಹಾಗೆ ಈಕೆ ಇನ್ನೂ ಮೊದಲ ಡೋಸ್​ ಲಸಿಕೆ ಕೂಡ ಹಾಕಿಸಿಕೊಂಡಿಲ್ಲ ಎಂಬ ಮಾಹಿತಿಯೂ ಬಹಿರಂಗಗೊಂಡಿದೆ. (ಏಜೆನ್ಸೀಸ್)
ನಟ ದರ್ಶನ್​ ಪ್ರಕರಣದಲ್ಲಿ ಟ್ವಿಸ್ಟ್​: ಕೇಳಿ ಬಂತು ಮತ್ತೊಂದು ಹೆಸರು ನಂದಿತಾ!

ದುಬಾರಿ ಕಾರ್​ಗೆ ತೆರಿಗೆ ವಿನಾಯಿತಿ ಕೇಳಿದ್ದ ಚಿತ್ರನಟ ವಿಜಯ್​ಗೆ 1 ಲಕ್ಷ ರೂ. ದಂಡ!

ಕೋವಿಡ್​ನಿಂದ ಬಚಾವಾದರೂ ನೆಮ್ಮದಿ ಇಲ್ಲ; ಕಂಡುಬಂದಿದೆ ಮತ್ತೊಂದು ರೋಗ, ಬೋನ್​ ಡೆತ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 3 =
Remember me
