ನವದೆಹಲಿ:ಕರೊನಾ ವೈರಸ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ತಯಾರಿಸಲಾದ ಸ್ವದೇಶಿ ನಿರ್ಮಿತ ‘ಕೋವಾಕ್ಸಿನ್ ‘ ಔಷಧಿಯನ್ನು 30 ವರ್ಷದ ಯುವಕನಿಗೆ ಯಶಸ್ವಿಯಾಗಿ ನೀಡಲಾಗಿದೆ. ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್ ) ಇದನ್ನು ಯುವಕನಿಗೆ ನೀಡುವ ಮೂಲಕ ಮಾನವ ಪ್ರಯೋಗಕ್ಕೆ ಮುನ್ನುಡಿ ಬರೆದಿದೆ.
ಹೈದರಾಬಾದ್‌ನ ಭಾರತ್ ಬಯೋ ಟೆಕ್ ಔಷಧ ಕಂಪನಿ ಇದನ್ನು ಸಿದ್ಧಪಡಿಸಿದೆ. ಮಾನವ ಪ್ರಯೋಗಕ್ಕೆ ಏಮ್ಸ್‌ ಸಮಿತಿಯು ಅನುಮೋದನೆ ನೀಡಿದ ಬಳಿಕ ಇದು ಮಾನವ ಪ್ರಯೋಗದ ಮೊದಲ ಹಂತವಾಗಿದೆ. 30 ವರ್ಷದ ಯುವಕನ ಮೇಲೆ ಲಸಿಕೆ ಪ್ರಯೋಗ ಯಶಸ್ವಿಯಾಗಿದ್ದು ಆತ ಆರೋಗ್ಯದಿಂದ ಇದ್ದಾನೆ ಎಂದು ಅಧ್ಯಯನದ ತನಿಖಾಧಿಕಾರಿ ಹಾಗೂ ಕಮ್ಯೂನಿಟಿ ಮೆಡಿಸಿನ್ ಕ್ಷೇತ್ರದ ಪ್ರೊಫೆಸರ್ ಡಾ. ಸಂಜಯ್ ರೈ ಹೇಳಿದ್ದಾರೆ.
ಇದನ್ನೂ ಓದಿ:ಪ್ಲಾಸ್ಮಾ ದಾನ ಮಾಡಿ ಮಾನವೀಯತೆ ಮೆರೆದ ಎಸಿಪಿ ಸತೀಶ್​! ಕರೊನಾ ವಿರುದ್ಧ ಗೆಲ್ಲೋಕೆ ಐಡಿಯಾ ಕೊಟ್ರು
ಯುವಕನಲ್ಲಿ ಯಾವುದೇ ಅಸ್ವಸ್ಥತೆ ಅಥವಾ ಇತರ ಅಡ್ಡ ಪರಿಣಾಮದ ಲಕ್ಷಣಗಳು ಕಂಡುಬಂದಿಲ್ಲ. ಲಸಿಕೆ ಪ್ರಯೋಗದ ನಂತರ ಎರಡು ಗಂಟೆಗಳ ಕಾಲ ವೀಕ್ಷಣೆ ಮಾಡಲಾಗಿದೆ. ಸದ್ಯದ ಮಟ್ಟಿಗೆ ಯಾವುದೇ ಅಡ್ಡ ಪರಿಣಾಮ ಕಂಡುಬರಲಿಲ್ಲ. ಒಂದು ವಾರ ಈ ಬಗ್ಗೆ ನಿಗಾವಣೆ ಮಾಡಲಾಗುವುದು ಎಂದು ರೈ ಹೇಳಿದ್ದಾರೆ.
ಲಸಿಕೆ ಪ್ರಯೋಗಕ್ಕೆ ಸ್ವಯಂಪ್ರೇರಿತರಾಗಿ ಹೆಸರು ನೋಂದಾಯಿಸಿಕೊಂಡವರ ಪೈಕಿ 30 ವರ್ಷದ ಯುವಕನ ಮೇಲೆ ಮೊದಲ ಪ್ರಯೋಗ ಮಾಡಲಾಗಿದೆ. ಈಗಾಗಲೇ 3500ಕ್ಕೂ ಹೆಚ್ಚು ಸ್ವಯಂ ಸೇವಕರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಕೋವಿಡ್ ಲಸಿಕೆ ನೀಡಿದ ನಂತರ ಒಂದು ವಾರದವರೆಗೂ ವೈದ್ಯರು ದೂರವಾಣಿ ಮೂಲಕ ಲಸಿಕೆ ನೀಡಲಾದ ವ್ಯಕ್ತಿಯ ಆರೋಗ್ಯವನ್ನು ಪ್ರತಿದಿನ ತಪಾಸಣೆ ಮಾಡುತ್ತಾರೆ. ಮೊದಲ ಹಂತದಲ್ಲಿ 12 ಕಡೆಗಳಲ್ಲಿ ಮಾನವ ಪ್ರಯೋಗ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮೊದಲ ಹಂತದಲ್ಲಿ, ಲಸಿಕೆಯನ್ನು 375 ಸ್ವಯಂಸೇವಕರ ಮೇಲೆ ಪರೀಕ್ಷಿಸಲಾಗುವುದು ಮತ್ತು ಅವರಲ್ಲಿ 100 ಮಂದಿ ಏಮ್ಸ್‌ನಿಂದ ಬಂದವರಾಗಿದ್ದಾರೆ. ಎರಡನೇ ಹಂತದಲ್ಲಿ, ಎಲ್ಲಾ 12 ಸೈಟ್‌ಗಳಿಂದ ಸುಮಾರು 750 ಸ್ವಯಂಸೇವಕರನ್ನು ಒಳಗೊಂಡಿರುತ್ತದೆ.
ಮೊದಲ ಹಂತದಲ್ಲಿ 18 ರಿಂದ 55 ವರ್ಷ ವಯಸ್ಸಿನ ಆರೋಗ್ಯವಂತ ಜನರ ಮೇಲೆ ಮಾಡಲಾಗುವುದು, ಗರ್ಭಿಣಿಯರನ್ನು ಕೂಡ ಮೊದಲ ಹಂತದಲ್ಲಿ ಪ್ರಯೋಗಕ್ಕೆ ಆಯ್ಕೆ ಮಾಡಲಾಗುತ್ತದೆ. ಎರಡನೇ ಹಂತದಲ್ಲಿ 750 ಜನರನ್ನು ನೇಮಕ ಮಾಡಲಾಗುವುದು ಮತ್ತು ಅವರು 12 ರಿಂದ 65 ವರ್ಷ ವಯಸ್ಸಿನವರಾಗುತ್ತಾರೆ ಎಂದು ಅವರು ಹೇಳಿದರು.
ಅಂತ್ಯಕ್ರಿಯೆ ವೇಳೆ ನೀರು ಕುಡಿದ ಮೃತ ಶಿಕ್ಷಕ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − five =
Remember me
