ನವದೆಹಲಿ:ಕರೊನಾ ನಿಗ್ರಹಕ್ಕೆ ಸಂಶೋಧಿಸಲಾಗಿರುವ ದೇಶೀಯ ಲಸಿಕೆ ಕೊವಾಕ್ಸಿನ್​ ಔಷಧದ ಕ್ಲಿನಿಕಲ್​ ಟ್ರಯಲ್​ ಸದ್ಯ ಬೆಳಗಾವಿ ಸೇರಿ ದೇಶದ 9 ನಗರಗಳಲ್ಲಿ ನಡೆಯುತ್ತಿದೆ.
ವೈದ್ಯಕೀಯ ಸಂಶೋಧನಾ ಮಂಡಳಿ ದೇಶೀಯ ಲಸಿಕೆ ಕೊವಾಕ್ಸಿನ್​ ಕ್ಲಿನಿಕಲ್​ ಟ್ರಯಲ್​ಗೆ ಆಯ್ಕೆ ಮಾಡಿಕೊಂಡಿರುವ ದೇಶದ 12 ವೈದ್ಯಕೀಯ ಸಂಸ್ಥೆಗಳಲ್ಲಿ  ಬೆಳಗಾವಿಯ ಜೀವನ ರೇಖಾ ಆಸ್ಪತ್ರೆಯೂ ಸೇರಿದೆ. ಇಲ್ಲಿ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರ ಮೇಲೆ ಲಸಿಕೆ ಪ್ರಯೋಗಿಸಲಾಗಿದೆ. ಜತೆಗೆ, ಉತ್ತರಪ್ರದೇಶದ ರಾಣಾ ಆಸ್ಪತ್ರೆ ಹಾಗೂ ಟ್ರಾಮಾ ಸೆಂಟರ್​ನಲ್ಲೂ ಕ್ಲಿನಿಕಲ್​ ಟ್ರಯಲ್​ ಆರಂಭವಾಗಿದೆ.
ಕ್ಲಿನಿಕಲ್​ ಟ್ರಯಲ್​ನಲ್ಲಿ 9 ಜನರಿಗೆ ಲಸಿಕೆ ನೀಡಲಾಗಿದೆ ಎಂದು ರಾಣಾ ಆಸ್ಪತ್ರೆ ಹಾಗೂ ಟ್ರಾಮಾ ಸೆಂಟರ್​ನ  ಸಿಇಒ ವೆಂಕಟೇಶ್​ ಚತುರ್ವೇದಿ ತಿಳಿಸಿದ್ದಾರೆ.ಇದಲ್ಲದೇ, ಭುವನೇಶ್ವರದ ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​ ಹಾಗೂ ಎಸ್​ಯುಎಂ ಆಸ್ಪತ್ರೆಯಲ್ಲಿಯೂ ಈಗಾಗಲೇ ಕ್ಲಿನಿಕಲ್​ ಟ್ರಯಲ್​ ಆರಂಭವಾಗಿದೆ. ಅಭ್ಯರ್ಥಿಗಳಿಗೆ 14 ದಿನಗಳ ಅಂತರದಲ್ಲಿ ಎರಡು ಡೋಸ್​ ಲಸಿಕೆ ನೀಡಲಾಗುತ್ತದೆ. ಪ್ರಾಯೋಗಿಕ ಲಸಿಕೆ ಪಡೆದುಕೊಳ್ಳಲು ಜನರಲ್ಲಿ ಅತೀವ ಉತ್ಸಾಹವಿದೆ. ಸ್ವಯಂಪ್ರೇರಿತರಾಗಿ ಬಂದು ಲಸಿಕೆ ಪಡೆದುಕೊಂಡಿದ್ದಾರೆ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ;ಆರಂಭವಾಗಿದೆ ಕರೊನಾದ ಅಂತ್ಯಕಾಲ; ದೆಹಲಿ ಮುಂಚೂಣಿಯಲ್ಲಿ; ಏನಿದು ಆರ್​-ವ್ಯಾಲ್ಯೂ ಲೆಕ್ಕಾಚಾರ…?
ಇನ್ನೊಂದೆಡೆ, ರೋಹ್ಟಕ್​ ವೈದ್ಯಕೀಯ ಸಂಸ್ಥೆಯಲ್ಲಿ ಜು.17ರಂದೇ ಕ್ಲಿನಿಕಲ್​ ಟ್ರಯಲ್​ ಆರಂಭಿಸಲಾಗಿತ್ತು. ಸದ್ಯ ದೇಶಾದ್ಯಂತ 50ಕ್ಕೂ ಅಧಿಕ ಜನರಿಗೆ ಲಸಿಕೆ ನೀಡಲಾಗಿದ್ದು, ಫಲಿತಾಂಶಗಳು ಉತ್ತೇಜನಕಾರಿಯಾಗಿವೆ ಎಂದು ಕ್ಲಿನಿಕಲ್​ ಟ್ರಯಲ್​ ಮುಖ್ಯ ಸಂಶೋಧಕಿ ಡಾ. ಸವಿತಾ ವರ್ಮಾ ತಿಳಿಸಿದ್ದಾರೆ.
18ರಿಂದ 55 ವರ್ಷದೊಳಗಿನ ವ್ಯಕ್ತಿಗಳನ್ನು ಇದಕ್ಕೆ ಆಯ್ದುಕೊಳ್ಳಲಾಗಿದೆ. ಆರಂಭದಲ್ಲಿ ಕಡಿಮೆ ಡೋಸ್​ ನೀಡಲಾಗುತ್ತದೆ. ಇದು ಮಾನವ ಬಳಕೆಗೆ ಸುರಕ್ಷಿತವಾಗಿದೆ ಎಂದು ಕಂಡು ಬಳಿಕ ಇನ್ನೂ 50 ಜನರಿಗೆ ಹೆಚ್ಚಿನ ಡೋಸ್​ ನೀಡಲಾಗುತ್ತದೆ ಎಂದು ಏಮ್ಸ್​ನ ಡಾ. ಸಂಜಯ್​ ರೈ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ;ಜಗತ್ತಿನ ಮೊದಲ ಕರೊನಾ ಲಸಿಕೆ ರಷ್ಯಾದಲ್ಲಿ ಸಿದ್ಧ; ಅಕ್ಟೋಬರ್​ನಲ್ಲಿ ಎಲ್ಲರಿಗೂ ಲಭ್ಯ; ಸ್ಪುಟ್ನಿಕ್​ ಯಶಸ್ಸಿಗೆ ಹೋಲಿಕೆ
ಲಸಿಕೆ ಪಡೆದುಕೊಳ್ಳಲು ಈಗಾಗಲೇ 3,500 ಜನರು ನೋಂದಣಿ ಮಾಡಿಕೊಂಡಿದ್ದಾರೆ. ಮೊದಲ ಹಂತದಲ್ಲಿ 375 ಜನರ ಮೇಲೆ ಲಸಿಕೆ ಪ್ರಯೋಗಿಸಲಾಗುತ್ತಿದೆ. ಹೈದರಾಬಾದ್​ನ ಭಾರತ್​ ಬಯೋಟೆಕ್​ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್​ ಲಸಿಕೆಯ ಕ್ಲಿನಿಕಲ್​ ಟ್ರಯಲ್​ ದೇಶದ 8 ಕಡೆಗಳಲ್ಲಿ ಜಾರಿಯಲ್ಲಿದೆ.
ಮತ್ತೊಂದು ಆಘಾತಕಾರಿ ಹಂತ ತಲುಪಿದ ಕರೊನಾ; ಭಾರತದ ಮೊದಲ ಪ್ರಕರಣ ವರದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
