ನವದೆಹಲಿ:ಕರೊನಾವೈರಸ್ ಸಾಂಕ್ರಾಮಿಕ ರೋಗದ ಈ ವಿಷಮ ಸ್ಥಿತಿಯಲ್ಲಿ ಅದರ ವಿರುದ್ಧ ಹೋರಾಡಲು ಗಮನಾರ್ಹ ಹೆಜ್ಜೆ ಇಟ್ಟ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ದೇಶದ ಮೊದಲ ಪ್ಲಾಸ್ಮಾ ಬ್ಯಾಂಕ್ ಆರಂಭದ ಕುರಿತು ಗುರುವಾರ ಪ್ರಕಟಿಸಿದ್ದಾರೆ.ದಕ್ಷಿಣ ದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸಸ್‌ನಲ್ಲಿ ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ ಕುರಿತು ಹೇಳಿದರು.“ಪ್ಲಾಸ್ಮಾ ಬ್ಯಾಂಕ್ ಇಂದಿನಿಂದ ಪ್ರಾರಂಭವಾಗುತ್ತಿದೆ. ಕರೊನಾಗೆ ಚಿಕಿತ್ಸೆ ನೀಡುವ ದೇಶದ ಮೊದಲ ಪ್ಲಾಸ್ಮಾ ಬ್ಯಾಂಕ್ ಇದಾಗಿದೆ. ಈಗ ಜನರಿಗೆ ಪ್ಲಾಸ್ಮಾದಿಂದ ಹೆಚ್ಚು ತೊಂದರೆಯಾಗುವುದಿಲ್ಲ ”ಎಂದು ವರ್ಚುವಲ್ ಆಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಭಾರತದ ಅತ್ಯಂತ ಐಷಾರಾಮಿ ತಾಣ ಗೋವಾ ಇಂದಿನಿಂದ ದೇಸೀ ಪ್ರವಾಸಿಗರಿಗೆ ಮುಕ್ತ
ಪ್ಲಾಸ್ಮಾ ದಾನ ಮಾಡಲಿಚ್ಛಿಸುವವರಿಗೆ ಅವರು ವಾಟ್ಸಾಪ್ ಸಂಖ್ಯೆ ಒಂದು ಟೋಲ್ ಫ್ರೀ ಸಂಖ್ಯೆಯನ್ನು ಸಹಾಯವಾಣಿ ಸಂಖ್ಯೆಯಾಗಿ ಆರಂಭಿಸಿದ್ದಾರೆ.” ನೀವು ಪ್ಲಾಸ್ಮಾ ದಾನ ಮಾಡಲು ಸಿದ್ಧರಿದ್ದರೆ ಮತ್ತು ಅದಕ್ಕೆ ಅರ್ಹರಾಗಿದ್ದರೆ, 1031 ಗೆ ಕರೆ ಮಾಡಬಹುದು ಅಥವಾ 8800007722 ನಂಬರ್​​ಗೆ ವಾಟ್ಸಾಪ್ ಮಾಡಬಹುದು. ನಿಮ್ಮ ಅರ್ಹತೆಯನ್ನು ಮತ್ತಷ್ಟು ದೃಢೀಕರಿಸಲು ನಮ್ಮ ವೈದ್ಯರು ನಿಮ್ಮೊಂದಿಗೆ ಸಂಪರ್ಕದಲ್ಲಿರುತ್ತಾರೆ” ಎಂದು ಅವರು ತಿಳಿಸಿದ್ದಾರೆ.
ಟೆಲಿಮೆಡಿಸಿನ್​ಗೂ ಬರಲಿದೆ ಒಂದು ಕೋರ್ಸ್​, ಎಲ್ಲ ವೈದ್ಯರಿಗೂ ಇದು ಕಡ್ಡಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − seventeen =
Remember me
