ನವದೆಹಲಿ:ಭಾರತದ ಮೊಟ್ಟ ಮೊದಲ ಸೂರ್ಯ ಯೋಜನೆ ಆದಿತ್ಯ-ಎಲ್ 1 ಇಂದು (ಸೆ.02) ಬೆಳಗ್ಗೆ 11.50ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಆಗಿದೆ. ಚಂದ್ರಯಾನ 3 ಯಶಸ್ವಿಯಾದ ಬೆನ್ನಲ್ಲೇ ಸೂರ್ಯನತ್ತ ಸಾಗಿರುವ ಇಸ್ರೋ ನೇಸರನ ಸಂಪೂರ್ಣ ಅಧ್ಯಯನ ನಡೆಸಲಿದೆ. ಭಾರತದ ಬಾಹ್ಯಾಕಾಶ ಕ್ಷೇತ್ರದ ಪಾಲಿಗೆ ಈ ವರ್ಷ ಸುವರ್ಣ ವರ್ಷವಾಗಿ ಉಳಿಯಲಿದೆ.
ಮೂರು ಹಂತಗಳನ್ನು ಯಶಸ್ವಿಯಾದ ಬಳಿಕ ಆದಿತ್ಯ ಎಲ್​ 1 ನೌಕೆ ಭೂಕಕ್ಷೆಯನ್ನು ತಲುಪಿದೆ. ಜುಲೈ 23ರಂದು ಉಡಾವಣೆಯಾಗಿ ಆಗಸ್ಟ್​ 23ರಂದು ಚಂದ್ರನ ಮೇಲೆ ಇಳಿದ ಚಂದ್ರಯಾನ 3 ಯೋಜನೆಗೆ ಒಟ್ಟು 615 ಕೋಟಿ ರೂಪಾಯಿ ಖರ್ಚಾಗಿದೆ. ಇದೀಗ ಆದಿತ್ಯ ಎಲ್​ 1 ಯೋಜನೆಗೆ ಇಸ್ರೋ ಎಷ್ಟು ಹಣ ಖರ್ಚು ಮಾಡಿದೆ ಎಂಬ ಕುತೂಹಲ ಸಹಜವಾಗಿಯೇ ಎಲ್ಲರಲ್ಲೂ ಇದೆ. ಅದಕ್ಕೆ ಉತ್ತರ 300 ಕೋಟಿ ರೂಪಾಯಿ. ಹೌದು ಚಂದ್ರಯಾನ 3 ಯೋಜನೆಯ ಅರ್ಧದಷ್ಟು ಹಣ ಮಾತ್ರ ಸೂರ್ಯ ಯೋಜನೆಗೆ ಖರ್ಚಾಗಿದೆ.
ಸೋಲಾರ್​ ಅಟ್ಮಾಸ್ಪಿಯರ್​ ಅಂದ್ರೆ ಕ್ರೋಮೋಸ್ಪಿಯರ್​ ಮತ್ತು ಸೂರ್ಯನ ವಾತಾವರಣದ ಹೊರಭಾಗವಾದ ಕರೊನಾವನ್ನು ಡೀಪ್​ ಆಗಿ ಸ್ಟಡಿ ಮಾಡುವುದೇ ಈ ಆದಿತ್ಯ ಎಲ್​ 1 ಮಿಷನ್​ನ ಒಂದು ಮುಖ್ಯ ಉದ್ದೇಶವಾಗಿದೆ. ಇನ್-ಸಿಟು ಕಣ ಮತ್ತು ಪ್ಲಾಸ್ಮಾ ಪರಿಸರವನ್ನು ಅಧ್ಯಯನ ಮಾಡಿ ಡೇಟಾವನ್ನು ಒದಗಿಸಿಸುತ್ತದೆ. ಅಧ್ಯಯನಕ್ಕಾಗಿ ಆದಿತ್ಯ ಎಲ್​ 1ಗೆ 7 ಪೇಲೋಡ್​ ಅನ್ನು ಅಳವಡಿಸಿದ್ದಾರೆ. ಅವುಗಳಲ್ಲಿ ನಾಲ್ಕು ಸೋಲಾರ್​ ಸರ್ಫೇಸ್​ ಅನ್ನು ಸ್ಟಡಿ ಮಾಡುತ್ತವೆ ಮತ್ತು ಉಳಿದ ಮೂರು ಸೋಲಾರ್​ ವಿಂಡ್ಸ್​ ಮತ್ತು ಮ್ಯಾಗ್ನೇಟಿಕ್​ ಫೀಲ್ಡ್​ ಅನ್ನು ಅಧ್ಯಯನ​ ಮಾಡುತ್ತವೆ.
ಇದನ್ನೂ ಓದಿ:ಚಂದ್ರನ ಬಳಿಕ ಸೂರ್ಯ ಶಿಕಾರಿ: ಭಾರತದ ಚೊಚ್ಚಲ ಸೂರ್ಯ ಯೋಜನೆ ಆದಿತ್ಯ-ಎಲ್ 1 ಉಡಾವಣೆ ಯಶಸ್ವಿ
ಸೂರ್ಯನ ಲಾಗ್ರಾಂಗಿಯನ್ ಪಾಯಿಂಟ್ ಭೂಮಿಯಿಂದ ಅಂದಾಜು 15 ಲಕ್ಷ ಕಿ.ಮೀ.ದೂರದಲ್ಲಿದೆ. ಅಲ್ಲಿಗೆ ತಲುಪಲು ಸುಮಾರು 4 ತಿಂಗಳು ಸಮಯ ತೆಗೆದುಕೊಳ್ಳುತ್ತದೆ ಎಂದು ಇಸ್ರೋ ತಿಳಿಸಿದೆ.
ಈ ಲಾಗ್ರಾಂಗಿಯನ್ ಪಾಯಿಂಟ್​ಗೆ ಫ್ರೆಂಚ್ ಗಣಿತಜ್ಞ ಜೋಸೆಫ್-ಲೂಯಿಸ್ ಲಾಗ್ರಾಂಗಿಯನ್ ಅವರ ಹೆಸರನ್ನು ಇಡಲಾಗಿದೆ. ಅವರು 18ನೇ ಶತಮಾನದಲ್ಲಿ ಲಾಗ್ರಾಂಗಿಯನ್ ಪಾಯಿಂಟ್​ ಬಗ್ಗೆ ಮೊದಲು ಅಧ್ಯಯನ ಮಾಡಿದರು. ಲಾಗ್ರಾಂಗಿಯನ್ ಪಾಯಿಂಟ್​ನಲ್ಲಿ ಸೂರ್ಯ ಮತ್ತು ಭೂಮಿಯಂತಹ ಎರಡು ದೊಡ್ಡ ಕಾಯಗಳ ಗುರುತ್ವಾಕರ್ಷಣೆಯ ಬಲಗಳು ಸಮತೋಲನದ ಪ್ರದೇಶವನ್ನು ಸೃಷ್ಟಿಸುತ್ತವೆ. ಇದನ್ನು ಬಾಹ್ಯಾಕಾಶ ನೌಕೆ ತನ್ನ ಇಂಧನ ಬಳಕೆಯನ್ನು ಕಡಿಮೆ ಮಾಡಲು ಬಳಸಬಹುದು.
ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯು ಉದ್ದೇಶಿತ ಕಕ್ಷೆಯನ್ನು ತಲುಪಿದ ನಂತರ ನೌಕೆಯಲ್ಲಿನ ಪ್ರಾಥಮಿಕ ಪೇಲೋಡ್ ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (ವಿಇಎಲ್​ಸಿ) ಉಪಕರಣವು ಪ್ರತಿದಿನಕ್ಕೆ 1,440 ಚಿತ್ರಗಳನ್ನು ಕಳುಹಿಸಲಿದೆ.(ಏಜೆನ್ಸೀಸ್​)
ದರ್ಶನ್ ಇರ್ತಾರೆ ಅಂತ ನಂಗೆ ಮೊದಲೇ ಗೊತ್ತಿತ್ತು: ಎಲ್ಲವೂ ಸರಿ ಹೋಗುತ್ತದೆ ಎಂದ ಕಿಚ್ಚ

ಗಂಡನ ಕುಡಿತದ ಚಟಕ್ಕೆ ಬೇಸತ್ತು ಸಾವಿನ ಹಾದಿ ಹಿಡಿದ ನಟಿ ಅಪರ್ಣಾ: FIR ​​ನಿಂದ ಅಸಲಿ ಕಾರಣ ಬಯಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
