ನವದೆಹಲಿ:ಪ್ರಸಕ್ತ ಹಣಕಾಸು ಸಾಲಿನ ದ್ವೀತಿಯ ತೆಮಾಸಿಕದ (ಜುಲೈ&ಸೆಪ್ಟೆಂಬರ್​) ವರದಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಒಟ್ಟು ದೇಶೀಯ ಉತ್ಪನ್ನದ ದರ (ಜಿಡಿಪಿ) ಶೇ. 6.3ಕ್ಕೆ ಇಳಿದಿದೆ. ಆದರೆ ಆರ್​ಬಿಐ ಅಂದಾಜಿಸಿದ (ಶೇ. 6.1ರಿಂದ 6.3) ಪ್ರಮಾಣದಲ್ಲಿ ಇದೆ.
ಮೊದಲ ತೆಮಾಸಿಕ (ಏಪ್ರಿಲ್​&ಜೂನ್​)ದಲ್ಲಿ ಜಿಡಿಪಿ ಶೇ. 13.5ರ ಬೆಳವಣಿಗೆ ದಾಖಲಿಸಿತ್ತು. ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗಿನ ಆರು ತಿಂಗಳ ಸರಾಸರಿ ಜಿಡಿಪಿ ಶೇ. 9.7 ಇದೆ. ಗಣಿ ಮತ್ತು ಉತ್ಪಾದನೆ ವಲಯದಲ್ಲಿನ ಕುಂಠಿತದ ಕಾರಣ ಎರಡನೇ ತೆಮಾಸಿಕದಲ್ಲಿ ಜಿಡಿಪಿ ಇಳಿಕೆಯಾಗಿದೆ. ಆದಾಗ್ಯೂ ಭಾರತದ ಆರ್ಥಿಕತೆ ವೇಗವಾಗಿ ಪ್ರವರ್ಧಿಸುತ್ತಿದೆ. ಏಕೆಂದರೆ 2022ರ ಎರಡನೇ ತೆಮಾಸಿಕ ದಲ್ಲಿ ಚೀನಾದ ಜಿಡಿಪಿ ಶೇ. 3.9 ಇದೆ ಎಂದು ಈ ವರದಿ ಬಿಡುಗಡೆ ಮಾಡಿರುವ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್​ಎಸ್​ಒ) ಹೇಳಿದೆ.
ಎರಡನೇ ತೆಮಾಸಿಕದಲ್ಲಿ ರೂಪಾಯಿ ಲೆಕ್ಕದಲ್ಲಿ ಜಿಡಿಪಿ 65.31 ಲಕ್ಷ ಕೋಟಿ ರೂ. ಇದ್ದರೆ, 2021&22ನೇ ಸಾಲಿನ ಎರಡನೇ ತೆಮಾಸಿಕದಲ್ಲಿ ಇದು 56.20 ಲಕ್ಷ ಕೋಟಿ ರೂ. ಇತ್ತು ಎಂದು ಎನ್​ಎಸ್​ಒ ಹೋಲಿಕೆಯ ವಿವರವನ್ನು ನೀಡಿದೆ. ಚಾಲ್ತಿಯಲ್ಲಿರುವ ಮೂರನೇ ತೆಮಾಸಿಕದಲ್ಲಿ (ಅಕ್ಟೋಬರ್​ & ಡಿಸೆಂಬರ್​) ಜಿಡಿಪಿ ಶೇ. 6.8ರಿಂದ 7ರವರೆಗೆ ಇರಲಿದೆ ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೊಸ ಎತ್ತರಕ್ಕೆ ಜಿಗಿದ ಸೆನ್ಸೆಕ್ಸ್​: ಭಾರತೀಯ ಷೇರುಪೇಟೆ ಬುಧವಾರ ಹೊಸ ಎತ್ತರಕ್ಕೆ ಜಿಗಿದಿದ್ದು, ಇದೇ ಮೊದಲ ಬಾರಿಗೆ 63 ಸಾವಿರದ ಗಡಿ ದಾಟಿದೆ. ಸೆನ್ಸೆಕ್ಸ್​ ಸಂವೇದಿಯಲ್ಲಿ 417.81 ಅಂಶ ಏರಿಕೆಯಾಗಿ, 63,099.65ರಲ್ಲಿ ವಹಿವಾಟು ಕೊನೆಗೊಂಡಿದೆ. ಮಧ್ಯಂತರ ವಹಿವಾಟಿನಲ್ಲಿ 621 ಪಾಯಿಂಟ್​ ವೃದ್ಧಿಸಿ 63,303ರವರೆಗೂ ವೃದ್ಧಿ ದಾಖಲಿಸಿತ್ತು. ರಾಷ್ಟ್ರೀಯ ಷೇರುಪೇಟೆ ನಿಫ್ಟಿಯಲ್ಲಿ 140.30 ಅಂಶ ಹೆಚ್ಚಳವಾಗಿದ್ದು, 18,758.35ರಲ್ಲಿ ವಹಿವಾಟು ಕೊನೆಗೊಂಡಿದೆ.
ಮಹೀಂದ್ರ ಆ್ಯಂಡ್​ ಮಹೀಂದ್ರ, ಅಲ್ಟ್ರಾಟೆಕ್​ ಸಿಮೆಂಟ್​, ಪವರ್​ ಗ್ರಿಡ್​, ಹಿಂದುಸ್ತಾನ್​ ಯುನಿಲಿವರ್​, ಭಾರ್ತಿ ಏರ್​ಟೆಲ್​, ಏಷ್ಯನ್​ ಪೇಂಟ್ಸ್​, ಟಾಟಾ ಸ್ಟೀಲ್​, ಟೈಟಾನ್​ ಷೇರು ಮೌಲ್ಯ ಹೆಚ್ಚಳ ಆಗಿದೆ. ಇನ್ನೊಂದೆಡೆ ಇಂಡಸ್​ಇಂಡ್​ ಬ್ಯಾಂಕ್​, ಎಸ್​ಬಿಐ, ಎಚ್​ಸಿಎಲ್​ ಟೆಕ್ನಾಲಜಿಸ್​, ಐಟಿಸಿಗಳಿಗೆ ನಷ್ಟವಾಗಿದೆ. ಡಾಲರ್​ ಎದುರು ರೂಪಾಯಿ ಮೌಲ್ಯ 34 ಪೈಸೆ ಹೆಚ್ಚಳ ಆಗಿದ್ದು, ಪ್ರತಿ ಡಾಲರ್​ಗೆ ವಿನಿಮಯ ದರ 81.38 ರೂ. ಇದೆ.
ಚಿನ್ನ-ಬೆಳ್ಳಿ ದರ ಇಳಿಕೆದೆಹಲಿ ಚಿನಿವಾರ ಪೇಟೆಯಲ್ಲಿ ಬಂಗಾರದ ದರ 71 ರೂ. ಇಳಿಕೆ ಆಗಿದ್ದು, 10 ಗ್ರಾಂ ಬೆಲೆ 53,300 ರೂ.ಗೆ ತಗ್ಗಿದೆ. ಬೆಳ್ಳಿ ಬೆಲೆ 66 ರೂ. ಕಡಿಮೆಯಾಗಿ ಕೆ.ಜಿ.ಗೆ 63,199 ರೂ.ಗೆ ಇಳಿಕೆ ಕಂಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − one =
Remember me
